ನರ ದೌರ್ಬಲ್ಯ ಸಮಸ್ಯೆಯನ್ನು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಮನೆಯಲ್ಲೆ ಸಿಗುವ ಸಾಮಗ್ರಿಗಳನ್ನು ಬಳಸಿ ಸುಲಭವಾಗಿ ಮಾಡುವ ಮನೆ ಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.

ಇತ್ತೀಚೆಗೆ ಸಣ್ಣ ವಯಸ್ಸಿನವರಿಗೂ ನರ ಹಿಡಿದುಕೊಳ್ಳುತ್ತದೆ. ವಯಸ್ಸಾದವರಿಗೆ ನರ ಹಿಡಿಯುವುದು ಸರ್ವೇ ಸಾಮಾನ್ಯ. ಕೈ,ಕಾಲು, ಕುತ್ತಿಗೆ ಹೀಗೆ ದೇಹದ ನರದ ಬಲಹೀನತೆಗೆ ಮನೆಯಲ್ಲಿಯೇ ಸುಲಭವಾಗಿ ಮನೆಮದ್ದನ್ನು ತಯಾರಿಸಿಕೊಳ್ಳಬಹುದು. ಈ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಪ್ಪು ಜೀರಿಗೆ ಬ್ಲಾಕ್ ಕುಮಿನ್ ಸೀಡ್ಸ್. ಅಶ್ವಗಂಧ ಪೌಡರ್ ಇದು ಆಯುರ್ವೇದಿಕ್ ಶಾಪ್ ನಲ್ಲಿ ಸಿಗುತ್ತದೆ, ಮೆಂತೆ ಕಾಳು.

50 ಗ್ರಾಂ ಕಪ್ಪು ಜೀರಿಗೆಯನ್ನು ಹುರಿದು ಪೌಡರ್ ಮಾಡಿಟ್ಟುಕೊಳ್ಳಬೇಕು. 50 ಗ್ರಾಂ ಮೆಂತೆಕಾಳನ್ನು ಹುರಿದು ಪೌಡರ್ ಮಾಡಿಟ್ಟುಕೊಳ್ಳಬೇಕು. 50 ಗ್ರಾಂ ಅಶ್ವಗಂಧ ಪೌಡರ್ ಈ ಮೂರನ್ನು ಮಿಕ್ಸ್ ಮಾಡಿ ಗಾಜಿನ ಸೀಸದಲ್ಲಿ ಇಟ್ಟುಕೊಳ್ಳಬೇಕು ಬೆಳಗ್ಗೆ ಮತ್ತು ರಾತ್ರಿ ಊಟಕ್ಕಿಂತ ಒಂದು ಗಂಟೆ ಮೊದಲು ಒಂದು ಟಿ ಸ್ಪೂನ್ ಪೌಡರ್ ನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಹಾಕಿ ಚೆನ್ನಾಗಿ ಕಲಸಿ ಕುಡಿಯಬೇಕು. ಹೀಗೆ ಮಾಡುವುದರಿಂದ 15-20 ದಿನದಲ್ಲಿ ನರಗಳ ದೌರ್ಬಲ್ಯ ಕಡಿಮೆಯಾಗಿ ನರಗಳಿಗೆ ಶಕ್ತಿ ಬರುತ್ತದೆ. ಈ ಮನೆಮದ್ದನ್ನು ಕುಡಿಯುವುದರಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಮತ್ತು ಈ ಮನೆಮದ್ದನ್ನು ಎಲ್ಲಾ ವಯಸ್ಸಿನವರು ಕುಡಿಯಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •