ನವರಸನಾಯಕ ಜಗ್ಗೇಶ್ ಅವರು ಸಿನಿಮಾ ರಂಗದಲ್ಲಿನ ತಮ್ಮ 40 ವರ್ಷಗಳ ಸಿನಿ ಜೀವನದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಅವರು ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಆಡಿದ ಮಾತುಗಳು ಒಂದು ವಿ ವಾ ದದ ಕಿ ಡಿ ಯನ್ನು ಹೊತ್ತಿಸಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಅ ಪಾ ಯ ಕಾದಿದೆ ಎಂದಿರುವ ಅವರು ಅದು ನಮ್ಮನ್ನು ಉದ್ದಾರ ಮಾಡುವುದಿಲ್ಲವೆಂದು, ಯಾರನ್ನೋ ಮೆಚ್ಚಿಸಲು ಈ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದಿದ್ದರು. ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ವಿ ರೋ ಧ ವನ್ನು ವ್ಯಕ್ತಪಡಿಸಿದ್ದಾರೆ.‌ ಜಗ್ಗೇಶ್ ಅವರನ್ನು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಕೆಲವು ಸ್ಟಾರ್ ನಟರ ಅಭಿಮಾನಿಗಳು ಜಗ್ಗೇಶ್ ಅವರು ಕೆಲವು ನಟರಿಗೆ ಬಕೆಟ್ ಹಿಡಿದು ಉಳಿದವರನ್ನು ತೆ ಗಳುತ್ತಾರೆ ಎಂದಿದ್ದಾರೆ. ಅವರಿಗೆ ಬಕೆಟ್ ಹಿಡಿಯುತ್ತಾರೆ ಎಂದು ಟೀ ಕೆ ಮಾಡಿದ್ದರಿಂದ ಅವರು ಕೂಡಾ ಸರಣಿ ಟ್ವೀಟ್ ಗಳನ್ನು ಮಾಡುತ್ತಾ ಖಡಕ್ ಉತ್ತರಗಳನ್ನು ನೀಡಿದ್ದಾರೆ. ಅವರು ಟ್ವೀಟ್ ನಲ್ಲಿ, ” ಎಲ್ಲರ ತಂದೆತಾಯಿ ಬಕೆಟ್ ಹಿಡಿದೆ ಅವರ ಮಕ್ಕಳ ಬೆಳೆಸಿರುತ್ತಾರೆ. ಪಾಪ ಯವ್ವನದ ಪೊರೆಬಂದಾಗ ಬಿಟ್ಟಿ ಅನ್ನ ತಿನ್ನುವಾಗ ಬಕೆಟ್ ಅರಿವಾಗದು! ತನ್ನ ಸ್ವಂತ ಅನ್ನ ಗಿಟ್ಟಿಸುವಾಗ ಅವರ ಅಪ್ಪ ಅಮ್ಮ ಹಿಡಿದ ಬಕೆಟ್ ಇವರ ಕೈ ಸೇರುವುದು!ಆಗ ಬಕೆಟ್ ಬೆಲೆ ಅರಿವಾಗುವುದು! ಬೆಳಿಗ್ಗೆ ಎದ್ದಾಗ ಹಾಗಾದರೆ ಇವರು ಬಕೆಟ್ ಬಳಸದೆ ತೊಳೆಯಲು ಮಕ್ಕಳಂತೆ ಅಮ್ಮನ ಕರೆಯಬಹುದಾ? ಎಂದಿದ್ದಾರೆ.

navagasa-nayaka-jaggesh

ಮತ್ತೊಂದು ಟ್ವೀಟ್ ನಲ್ಲಿ, “ಸಹೋದರ ಈಮಕ್ಕಳ ಬಗ್ಗೆ ಎಳ್ಳಷ್ಟು ನನಗೆ ಬೇಜಾರಿಲ್ಲಾ ಕಾರಣ ನನಗೆ 34/28ವರ್ಷದ ಮಕ್ಕಳಿದ್ದಾರೆ! ನನಗೆ ಇಂದಿನ ಉ ದ್ವೇ ಗ , ಹ ತಾ ಶೆ, ಸಿ ಟ್ಟು, ಜಿ ಗು ಪ್ಸೆ ಯ ಮನೋಭಾವ ಸಮುಧಾಯದ ಬಗ್ಗೆ ಅರಿವಿದೆ ಅನುಕಂಪವಿದೆ! ಮಾತು ಅಕ್ಷರ ಅರಿವಾಗದೆ ತಮ್ಮ ಮೂಗಿನ ನೇರಕ್ಕೆ ಅರ್ಥಮಾಡಿಕೊಳ್ಳುವ ಆತುರ ಗುಣಕ್ಕೆ ಬೇಜಾರು! 40ವರ್ಷ ಇಂಥ 40ಸಾವಿರ ಜನರ ಜೈಸಿ ಬಂದವ ನಾನು! ಧನ್ಯವಾದ” ಎಂದು ಹೇಳಿದ್ದಾರೆ.

ಜಗ್ಗೇಶ್ ಅವರು, ಯಾಕಂದ್ರೆ ನಮ್ಮನ್ನ ಹುಟ್ಟಿಸಿದ್ದು ಹಳ್ಳಿಯಲ್ಲಿ ಕೂಲಿಮಾಡಿ ಸಗಣಿತಟ್ಟಿ ಹಾಲುಮಾರಿ ಮಮತೆಯ ರಕ್ತಬಸಿದು ಕನ್ನಡ ಕಲಿಸಿದ ತಂದೆತಾಯಿವಿನಹ ಅನ್ಯರಲ್ಲಾ! ಹಾಗಾಗಿ ನಮಗೆ ಸಿಂಹಾಸನದ ಮೇಲೆ ಕೂರಲು ಗೊತ್ತು ಗೋಣಿಚೀಲ ಹಾಸಿ ಮಲಗಲು ಗೊತ್ತು ಅದಕ್ಕೆ ಕನ್ನಡಿಗರು ನಮ್ಮನ್ನ ಹೃದಯದಲ್ಲಿ ಸಿಂಹಾಸನ ಹಾಕಿ ಕೂರಿಸಿದ್ದಾರೆ!ಅನ್ಯರ ಮೇಲೆ ಒಲವು ಇಲ್ಲಾ! ಬೇಕು ಇಲ್ಲಾ! ಎಂದು ಕೂಡಾ ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •