ಕನ್ನಡ ಖಾಸಗಿ ಕಿರುತೆರೆವಾಹಿನಿಯಲ್ಲಿ ಮೂಡಿಬರುತ್ತಿದ್ದ ಪುಟ್ಟ ಗೌರಿ ಧಾರಾವಾಹಿಯ ಹಿಮಾ ಪಾತ್ರದ ಮೂಲಕ ಫೇಮಸ್ ಆಗಿರುವ ನಟಿ ನಮ್ರತಾ ಗೌಡ, ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2ರ ಸೀರಿಯಲ್ ನಲ್ಲಿ ನಾಗಿಣಿ ಪಾತ್ರದ ಲೀಡ್ ರೋಲ್ ನಲ್ಲಿ ಮಿಂಚುತ್ತಿದ್ದಾರೆ. ಇವರ ಪುಟ್ಟ ಗೌರಿಯ ಹಿಮಾ ಪಾತ್ರ ಎಷ್ಟಮಟ್ಟಿಗೆ ಫೇಮಸ್ ಆಗಿದೆ ಎಂದರೆ, ನಮ್ರತಾ ಎಂದರೆ ತಟ್ಟನೆ ಗೊತ್ತೊಗೋದಿಲ್ಲ.

ಇನ್ನು ಬಾಲನಟಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಮ್ರತಾ ಗೌಡ ಪುನೀತ್ ಅಭಿನಯದ ಮಿಲನ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಇನ್ನು ಡಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕೂಡ ತಮ್ಮ ಪ್ರತಿಭೆ ತೋರಿದ್ದಾರೆ.

namrata-gowda

ಇನ್ನು ಲಾಕ್ ಡೌನ್ ಇರುವ ಕಾರಣ ಅಡುಗೆ ಮಾಡೋದು, ವರ್ಕ್ ಔಟ್ ಮಾಡೋದು, ಸಿನಿಮಾ ನೋಡೋದು, ಹೀಗೆ ಕಾಲಕಳೆಯುತ್ತಿರುವ ನಟಿ ನಮ್ರತಾ ಪುನೀತ್ ರಾಜ್ ಕುಮಾರ್ ಜೊತೆ ನಟಿಸೋ ಕನಸಿದೆ ಎಂದು ಹೇಳಿದ್ದಾರೆ. ಇನ್ನು ನಿಮ್ಮ ಬಾಲ್ಯದ ಕ್ರಶ್ ಯಾರಂತ ಕೇಳಿದ್ರೆ ಪುನೀತ್ ರಾಜ್ ಕುಮಾರ್ ಎಂದು ಹೇಳುತ್ತಾರೆ.

ಇನ್ನು ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಸದ್ಯಕ್ಕಿಲ್ಲ ಮಾಡುವೆ ಬಗ್ಗೆ ಯೋಚನೆ ಮಾಡಿಲ್ಲ, ಮೂರ್ನಾಲ್ಕು ವರ್ಷವಾದ ಬಳಿಕ ಅದರ ಬಗ್ಗ್ಗೆ ಯೋಚನೆ ಮಾಡೋಣ ಅಂತ ಹೇಳಿದ್ದಾರೆ ನಮ್ರತಾ ಗೌಡ. ಇನ್ನು ಪುನೀತ್ ರವರ ಪರಮಾತ್ಮ ಚಿತ್ರ ಐದು ಬಾರಿ ನೋಡಿದ್ದು, ಮತ್ತೆ ಮತ್ತೆ ನೋಡೋದು ನನಗಿಷ್ಟ ಎಂದು ಹೇಳಿಕೊಂಡಿದ್ದಾರೆ. ಭರತನಾಟ್ಯದಲ್ಲಿಯೂ ಕೂಡ ಪ್ರವೀಣೆಯಾಗಿರುವ ನಮ್ರತಾ ಪಾಶ್ಚಿಮಾತ್ಯ ಡ್ಯಾನ್ಸ್ ಪ್ರಕಾರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.

……………
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •