ಬಹಳಷ್ಟು ಸರ್ಕಾರಿ ಕೆಲಸಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನಾಡಕಛೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಈ ಕೆಲಸವನ್ನು ಕಂಪ್ಯೂಟರ್ ನಲ್ಲಿ ಕೂಡ ಮಾಡಬಹುದು. ಹಾಗಾದರೆ ಕಂಪ್ಯೂಟರ್ ನಲ್ಲಿ ನಾಡಕಛೇರಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕಂಪ್ಯೂಟರ್ ನಲ್ಲಿ ನಾಡಕಛೇರಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು. ಮೊದಲಿಗೆ ಕಂಪ್ಯೂಟರ್ ನಲ್ಲಿ ಯಾವುದಾದರೂ ವೆಬ್ ಬ್ರೌಸರ್ ನಲ್ಲಿ ಸರ್ಚ್ ಬಾರ್ ಗೆ ಹೋಗಿ ನಾಡಕಛೇರಿಯ ವೆಬ್ ಸೈಟ್ ಓಪನ್ ಮಾಡಿಕೊಳ್ಳಬೇಕು. ನಾಡಕಛೇರಿ ವೆಬ್ ಸೈಟ್ ನಾಡಕಛೇರಿ ಡಾಟ್ ಕರ್ನಾಟಕ ಡಾಟ್ ಗೌರ್ಮೆಂಟ್ ಡಾಟ್ ಇನ್. ವೆಬ್ ಸೈಟ್ ಓಪನ್ ಆಗುವ ಮೊದಲು ನಿಮ್ಮ ಮೊಬೈಲ್ ನಂಬರ್ ಎಂಟ್ರಿ ಮಾಡಿ ಗೆಟ್ ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಓಟಿಪಿಯನ್ನು ಹಾಕಿದ ನಂತರ ಲಾಗಿನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಾಡಕಛೇರಿ ವೆಬ್ ಸೈಟ್ ಓಪನ್ ಆಗುತ್ತದೆ. ಅಲ್ಲಿ ಎಡಗಡೆ ನ್ಯೂ ರಿಕ್ವೆಸ್ಟ್ ಎಂಬ ಆಪ್ಷನ್ ಕಾಣಿಸುತ್ತದೆ ಅದಕ್ಕೆ ಕ್ಲಿಕ್ ಮಾಡಿದಾಗ ಕಾಸ್ಟ್ ಸರ್ಟಿಫಿಕೇಟ್ ಎಂದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಹಾಕಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

ನಂತರ ನಿಮ್ಮ ಡಿಟೇಲ್ಸ್ ಹಾಕಬೇಕಾಗುತ್ತದೆ ಜಿಲ್ಲೆ ತಾಲೂಕು, ಅರ್ಜಿದಾರನ ಹೆಸರು, ತಂದೆಯ ಹೆಸರು, ನಿಮ್ಮ ಜಾತಿ ಹಾಕಿದ ನಂತರ ಆಧಾರ್ ಕನ್ಸೆಂಟ್ ಫಾರ್ಮ್ ಪ್ರಿಂಟೆಡ್ ಎಂಬ ಆಪ್ಷನ್ ಬರುತ್ತದೆ ಅದನ್ನು ಸೆಲೆಕ್ಟ್ ಮಾಡಿ ಸರ್ಚ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಏಕೆಂದರೆ ಅರ್ಜಿದಾರನ ಹೆಸರಿನಲ್ಲಿ ಈಗಾಗಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬೇಕು. ಇವರ ಹೆಸರಿನಲ್ಲಿ ಈಗಾಗಲೇ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇದ್ದರೆ ಹೊಸದಾಗಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ಅವರ ಹೆಸರಿನಲ್ಲಿ ಈಗಾಗಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇಲ್ಲವೆಂದರೆ ಅರ್ಜಿ ಸಲ್ಲಿಸಬಹುದು. ಇಲ್ಲ ಎಂದು ಬರುತ್ತದೆ ಅದರ ಮೇಲೆ ಓಕೆ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ಒಂದು ಫಾರ್ಮ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಅಡ್ರೆಸ್, ಮೊಬೈಲ್ ನಂಬರ್, ಪಿನ್ ಕೋಡ್, ಜಾತಿ, ಡೇಟ್ ಆಫ್ ಬರ್ತ್, ವಾರ್ಷಿಕ ಆದಾಯ ಹಾಕಿದ ನಂತರ ಆಧಾರ್ ಕಾರ್ಡ್, ವೋಟರ್ ಐಡಿ, ಸ್ಕೂಲ್ ಟಿಸಿಯನ್ನು ಅಪ್ಲೋಡ್ ಮಾಡಬೇಕು.

ನಂತರ ಕ್ಯಾಪ್ಚರ್ ಕೋಡ್ ಅನ್ನು ಎಂಟ್ರಿ ಮಾಡಿ ಸೇವ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಆರ್ ಡಿ ನಂಬರ್ ಬರುತ್ತದೆ ಅದನ್ನು ಸೇವ್ ಮಾಡಬೇಕು. ನಂತರ ಇ ಸೈನ್ ಇನ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ಕಾರ್ಡ್ ನಂಬರ್ ಹಾಕಿ ಗೆಟ್ ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು, ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಹಾಕಿ ಸಬ್ಮಿಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇಸೈನ್ ಇನ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು ಆನ್ಲೈನ್ ಪೇಮೆಂಟ್ ಮಾಡಬೇಕಾಗುತ್ತದೆ. ಆಧಾರ್ ಕನ್ಸೆಂಟ್ ಫಾರ್ಮ್ ಪ್ರಿಂಟೆಡ್ ಸೆಲೆಕ್ಟ್ ಮಾಡುವ ಮೊದಲು ಪ್ರಿಂಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಒಂದು ಒಪ್ಪಿಗೆ ಪತ್ರ ಬರುತ್ತದೆ ಅದನ್ನು ಪ್ರಿಂಟ್ ತೆಗೆದುಕೊಳ್ಳಬಹುದು ಅಥವಾ ಸೇವ್ ಮಾಡಿ ಇಡಬಹುದು. ಪ್ರಿಂಟ್ ತೆಗೆದು ಸ್ಥಳ ದಿನಾಂಕ ಹಾಕಿ ಒಂದು ಸಿಗ್ನೇಚರ್ ಹಾಕಿ ಇಟ್ಟುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •