ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನಮುಟ್ಟುವಂತಹ ಕೆಲ ಫೋಟೋಗಳು ವೈರಲ್​ ಆಗಿತ್ತು. ಮಹಾರಾಷ್ಟ್ರದ ಅಹ್ಮದ್​ನಗರ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬ ದತ್ತು ತೆಗೆದುಕೊಂಡಿದ್ದ ಇಬ್ಬರು ಅನಾಥ ಸಹೋದರಿಯರಿಗೆ ತನ್ನ ಸ್ವಂತ ಹಣದಲ್ಲಿ ಹಿಂದು ಸಂಪ್ರದಾಯದಂತೆ ಮದುವೆ ಮಾಡಿದ್ದಾರೆಂದು ಫೋಟೋ ಕುರಿತು ಹೇಳಲಾಗಿತ್ತು. ಸಾಕಷ್ಟು ವೈರಲ್​ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂದಹಾಗೆ ಮುಸ್ಲಿಂ ವ್ಯಕ್ತಿಯನ್ನು ಬಾಬಾಭಾಯ್​ ಪಠಾಣ್​ ಎಂದು ಗುರುತಿಸಲಾಗಿದ್ದು, ಅಹ್ಮದ್​ ನಗರದ ಇಬ್ಬರು ಅನಾಥ ಹೆಣ್ಣುಮಕ್ಕಳನ್ನು ದತ್ತು ಪಡೆದು ಹಿಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದಾರೆಂಬ ಸುದ್ದಿ ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.

Muslim-man

ಇಬ್ಬರು ಹೆಣ್ಣು ಮಕ್ಕಳನ್ನು ಗೌರಿ ಮತ್ತು ಸವಾರಿ ಎಂದು ಗುರುತಿಸಲಾಗಿದ್ದು, ಅವರಿಬ್ಬರು ಅನಾಥರಲ್ಲ. ಇಬ್ಬರು ಹೆಣ್ಣು ಮಕ್ಕಳ ಕುಟುಂಬ ಬಾಬಾಭಾಯ್​ ಪಠಾಣ್ ವಾಸಿಸುವ ಏರಿಯಾದಲ್ಲಿ ವಾಸಿಸುತ್ತಿದ್ದು, ಪಠಾಣ್​ ಅವರನ್ನು ತಮ್ಮ ಸ್ವಂತ ಸಹೋದರ ಎಂತಲೇ ಹೆಣ್ಣು ಮಕ್ಕಳ ತಾಯಿ ಭಾವಿಸಿದ್ದಾರೆ.ಪ್ರಖ್ಯಾತ ಮರಾಠಿ ಬ್ಲಾಗರ್​ ಸಮೀರ್​ ಗಾಯ್ಕ್​ವಾಡ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಈ ಹಿಂದೆಯೇ ಶೇರ್​ ಮಾಡಿಕೊಂಡಿದ್ದಾರೆ. ಮರಾಠಿಯಲ್ಲಿ ಬರೆದುಕೊಂಡಿದ್ದು, ಅದರ ಸಾರಾಂಶ ಹೀಗಿದೆ.

ಅಹ್ಮದ್​ನಗರ ಜಿಲ್ಲೆಯ ಬೋಧೆಗಾಂವ್​ ಗ್ರಾಮದ ಭುಸಾರಿ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ​ ಪಠಾಣ್ ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಮದುವೆ ನೆರವೇರಿಸಿಕೊಟ್ಟರು. ಇಬ್ಬರು ಹೆಣ್ಣುಮಕ್ಕಳ ತಾಯಿಗೆ ಸಹೋದರ ಇಲ್ಲದ ಕಾರಣ ಪಠಾಣ್​ ಅವರನ್ನೇ ತನ್ನ ಸಹೋದರ ಎಂದು ಭಾವಿಸಿರುವ ಆಕೆ ಪ್ರತಿ ವರ್ಷ ತಪ್ಪದೇ ಪಠಾಣ್​ಗೆ ರಾಕಿ ಕಟ್ಟುತ್ತಾರೆ. ಮದುವೆಯಲ್ಲಿ ಪಠಾಣ್​ ಸಹೋದರ ಮತ್ತು ಚಿಕ್ಕಪ್ಪನ ಪಾತ್ರವನ್ನು ನಿರ್ವಹಿಸಿದ್ದಾರೆಂದು ಬರೆದುಕೊಂಡಿದ್ದಾರೆ.\\

ಈ ಬಗ್ಗೆ ನ್ಯೂಸ್​ ಮೀಟರ್​ ವೆಬ್​ಸೈಟ್​ ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ಫೋಟೋಗಳನ್ನು ಹುಡುಕಾಡಿದಾಗ ಸಮೀರ್​ ಗಾಯ್ಕ್​ವಾಡ್​ ಬರೆದುಕೊಂಡಿರುವ ಯಥಾವತ್​​ ವರದಿ ಮಹಾರಾಷ್ಟ್ರದ ಸ್ಥಳೀಯ ವೆಬ್​ಸೈಟ್​ ಒಂದರಲ್ಲಿ ಪ್ರಕಟವಾಗಿದೆ. ಹೆಣ್ಣುಮಕ್ಕಳ ತಾಯಿ ಸವಿತಾ ಭುಸರಿಯನ್ನು ಆಕೆಯ ಗಂಡ ಹಲವು ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದಾನೆ. ಮದುವೆಗೆ ಕುಟುಂಬ ಸಂಕಷ್ಟದಲ್ಲಿರುವ ಸಮಯದಲ್ಲಿ ಚಿಕ್ಕಪ್ಪನ ಸ್ಥಾನದಲ್ಲಿ ನಿಂತ ಪಠಾಣ್​, ಮದುವೆ ಮಾಡಿಕೊಟ್ಟಿದ್ದಾರೆ.

ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಪೋಸ್ಟ್​ ಕುರಿತು ಹೇಳಿರುವುದು ಸುಳ್ಳಾದರೂ ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟ ಪಠಾಣ್​ ಅವರ ಕಾರ್ಯ ನಿಜಕ್ಕೂ ಮನಮಿಡಿಯುವಂತಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •