ಎಷ್ಟೋ ಕಡೆ ಅಕ್ಕನನ್ನು ನೋಡಲು ಬಂದು ತಂಗಿಯನ್ನು ಒಪ್ಪಿ ಮದುವೆಯಾಗಿರುವ ಘಟನೆಗಳು ನಡೆದಿವೆ. ಆದರೆ, ಮಗಳನ್ನು ನೋಡಲು ಬಂದು ಹುಡುಗಿಯ ತಾಯಿಯನ್ನೇ ಮದುವೆಯಾದ ಬಗ್ಗೆ ಕೇಳಿದ್ದೀರಾ..? ಅಂತಹ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹೌದು. ಮಹಾರಾಷ್ಟ್ರದ ಧುಳೆ ಎಂಬ ಜಿಲ್ಲೆಯಲ್ಲಿ ಹುಡುಗಿಯ ಮನೆಗೆ ಹುಡುಗನೊಬ್ಬ ಬಂದಿದ್ದಾನೆ. ಆದರೆ, ಹುಡುಗಿ ಮನೆಯವರಿಗೆ ಹುಡುಗ ಹಿಡಿಸದ ಕಾರಣ  ಬೇಡ ಎಂದಿದ್ದಾರೆ. ಾದರೆ, ಹುಡುಗನಿಗೆ ಹುಡುಗಿ ಇಷ್ಟವಾಗಿದ್ದು, ಮನೆಯವರಿಗೆ ಚಾಕು ತೋರಿಸಿದ್ದಾನೆ. ಹುಡುಗಿಯನ್ನು ಕೊಡಿ ಇಲ್ಲವೇ, ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದಾರೆ. ಇದಕ್ಕೆ ಹುಡುಗಿ ಮನೆಯವರು ಹೆದರದೆ, ಹುಡುಗನನ್ನು ಗದರಿಸಿ ಕಳಿಸಿದ್ದಾರೆ.

Mother

ಆದರೆ ಹುಡುಗ ಇಷ್ಟಕ್ಕೆ ಸುಮ್ಮನಾಗದೆ, ಹುಡುಗಿಯ ತಾಯಿಗೆ ಕರೆ ಮಾಡಿದ್ದಾನೆ. ತಾಯಿ ಹಾಗು ಹುಡುಗ ನಿತ್ಯ ಕರೆಯಲ್ಲಿ ಸಂಪರ್ಕದಲ್ಲಿದ್ದಾರೆ. ಕೊನೆಗೆ ಹುಡುಗ ತಾಯಿಯನ್ನೇ ಮರುಳು ಮಾಡಿ, ಆಕೆಯ ತಲೆ ಕೆಡಿಸಿದ್ದಾನೆ. ಇದ್ದಕ್ಕಿದ್ದಂತೆ ಹುಡುಗಿಯ ತಾಯಿ ಕಾಣೆಯಾಗಿದ್ದಾಳೆ. ಹುಡುಗಿಯ ತಂದೆ ಆಕೆಯನ್ನು ಹುಡುಕಾಡಿ ಆಕೆಗೆ ಕರೆ ಮಾಡಿದ್ದಾನೆ. ಆಗ ಆಕೆ ಕೊಟ್ಟ ಉತ್ತರ ೇನು ಗೊತ್ತಾ..?

ನಾನು ಹುಡುಗನೊಂದಿಗೆ ಓಡಿ ಬಂದಿದ್ದು, ಆತನನ್ನೆ ಮದುವೆಯಾಗುತ್ತೇನೆ ಎಂದಿದ್ದಾಳೆ. ಈ ಉತ್ತರದಿಂದ ಶಾಕ್ ಆಗಿರುವ ಹುಡುಗಿಯ ಮನೆಯವರು ದಿಕ್ಕು ತೋಚದಂತಾಗಿದ್ದಾರೆ.
ಇನ್ನು ಹುಡುಗಿಯ ತಾಯಿಗೆ ಈಗ 41 ವರ್ಷ ವಯಸ್ಸಾಗಿದ್ದು, ಮದುವೆಯಾಗಿ 25 ವರ್ಷ ಕಳೆದಿದೆ. ಜೊತೆಗೆ ಇವರಿಗೆ 5 ಜನ ಮಕ್ಕಳು ಹಾಗೂ 4 ಮೊಮ್ಮೊಕ್ಕಳಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •