ಈ ಪೋಲಿಸ್ ಅಧಿಕಾರಿಯ ತಾಯಿ ಪ್ರೀತಿಗೆ ಒಂದು ಮೆಚ್ಚುಗೆ ಕೋಡಿ….

Home

ಮಗನಿಗೆ ಶಿಕ್ಷಣ ನೀಡಲು ತಾಯಿ ಸಾಕಷ್ಟು ತ್ಯಾಗ ಮಾಡಿದ್ದರು. ಈ ಕಾರಣಕ್ಕಾಗಿ ಆತ ಪೊಲೀಸ್ ಅಕಾಡೆಮಿಯಿಂದ ನೇರವಾಗಿ ಸಮವಸ್ತ್ರದಲ್ಲೇ ತನ್ನೂರಿನ ಹೊಲಕ್ಕೆ ಬಂದು ತಾಯಿಗೆ ನಮಿಸಿದ್ದಾರೆ ಎಂದು, ಈ ಚಿತ್ರವನ್ನು ಶೇರ್ ಮಾಡಿರುವ ಎಡಿಜಿಪಿ ಭಾಸ್ಕರ್ ರಾವ್ ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು: ಮಾತೃ ದೇವೋ ಭವ ಎನ್ನುವ ಸಂಸ್ಕಾರ ಕಲಿಸಿರುವ ಭಾರತೀಯ ಸಂಸ್ಕೃತಿಯನ್ನು ಸಾರುವ ಚಿತ್ರವೊಂದನ್ನು ಕರ್ನಾಟಕ ಮೀಸಲು ಪೊಲೀಸ್ ಪಡೆಯ ಎಡಿಜಿಪಿ ಭಾಸ್ಕರ ರಾವ್ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಶೇರ್ ಮಾಡಿರುವುದು ಭಾರಿ ಪ್ರಶಂಸೆಗೆ ಕಾರಣವಾಗಿದೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು, ತಮ್ಮ ಪದವಿ ಪ್ರದಾನ ಸಮಾರಂಭಕ್ಕೆ ಬರಲು ಅಸಾಧ್ಯವಾಗಿದ್ದ ತಾಯಿಯನ್ನು ತಕ್ಷಣವೇ ನೋಡಿ ಕಾಲು ಹಿಡಿಯಲೆಂದು ಸಮವಸ್ತ್ರದಲ್ಲೇ ಊರಿಗೆ ಬಂದು, ಗದ್ದೆಯಲ್ಲೇ ಆಕೆಯ ಪಾದಕ್ಕೆ ನಮಿಸುವ ಚಿತ್ರವನ್ನು ಅವರು ಶೇರ್ ಮಾಡಿದ್ದಾರೆ.

ತಮ್ಮನ್ನು ಸಾಕಿ ಸಲಹಿದ ತಾಯಿಗೆ, ಪೊಲೀಸ್ ಅಧಿಕಾರಿಯಾಗಿ ಬೆಳೆದು ನಿಂತ ಮಗ ನಮಿಸುತ್ತಿರುವ ಈ ಫೋಟೋಗೆ ಸಾಕಷ್ಟು ಪ್ರಶಂಸೆಗಳು ಬಂದಿದ್ದು, ಇದು ಭಾರತೀಯ ಸಂಸ್ಕೃತಿ ಎಂದು ಹಲವರು ಉದ್ಗರಿಸಿದರೆ, ಇದರಲ್ಲೇನೂ ವಿಶೇಷವಿಲ್ಲ. ಇದು ನಮ್ಮ ನೆಲದ ಗುಣ. ಆದರೆ ಪರಕೀಯರಿಗೆ ಮಾತ್ರ ಇದು ವಿಶೇಷವಾಗಿ ಕಾಣಿಸುತ್ತದೆ ಎಂದು ಮತ್ತೆ ಕೆಲವರು ಬರೆದಿದ್ದಾರೆ.
ಕೆ.ಜಿ.ಎಫ್ ಪೊಲೀಸ್ | ಕೆ.ಜಿ.ಎಫ್ ಜಿಲ್ಲಾ ಪೊಲೀಸರ ಅಧಿಕೃತ ಬ್ಲಾಗ್

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...