ಜಲಗಾಂವ್ ನ ಹಾಸ್ಟೆಲ್‌ ಒಂದರಲಿ ಪೊಲೀಸರು,  ಅಲ್ಲಿದ್ದ ಬಾಲಕಿಯರ ಬಟ್ಟೆ ಬಿಚ್ಚಲಿಕ್ಕೆ ಹೇಳಿ ನಂತರ ಬಲವಂತವಾಗಿ ಡ್ಯಾನ್ಸ್ ಮಾಡಿಸಿದ ಘಟನೆಯ ಕುರಿತಾಗಿ, ಈ ಬಗ್ಗೆ ತನಿಖೆ ಮಾಡಲು ಅತ್ತ ಮಹಾರಾಷ್ಟ್ರ ಸರಕಾರ, ಒಟ್ಟು ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನ ರಚಿಸಿದೆ ಎಂಬುದಾಗಿ,  ಮಹಾರಾಷ್ಟ್ರದ ಗೃಹ ಸಚಿವರಾದ ಅನಿಲ್ ದೇಶಮುಖ್ ಅವ್ರು ನಿನ್ನೆ ಬುಧವಾರ ತಿಳಿಸಿದ್ದಾರೆ..ಪ್ರತಿಪಕ್ಷ ಸದಸ್ಯರು ಈ ರೀತಿ ನಡೆದ ಘಟನೆಯ  ವಿಷಯವನ್ನು ವಿಧಾನಸಭೆಯಲ್ಲಿ ಇಂದು ಪ್ರಸ್ತಾಪಿಸಿದ ಬಳಿಕವೇ, ಗೃಹ ಸಚಿವರು ಈ ಘೋಷಣೆ ಮಾಡಿದ್ದಾರೆ ಎಂದು, ಮಾಧ್ಯಮ ಒಂದರ ಮೂಲಕ ತಿಳಿದುಬಂದಿದೆ.

ಈ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ದೇಶಮುಖ್ ಹೇಳಿದ್ದೇನು ಗೊತ್ತಾ..’ಇದು ಅತ್ಯಂತ ದುರದೃಷ್ಟಕರ ಘಟನೆ. ಇದರ ಬಗ್ಗೆ ತನಿಖೆ ನಡೆಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ,  ಜಲಗಾಂವ್ ನ ಹಾಸ್ಟೆಲ್‌ ನಲ್ಲಿರುವ ಕೆಲ ಹುಡುಗಿಯರ ತನಿಖೆ ನೆಪದಲ್ಲಿಯೇ, ಹೊರಗಿನ ಜನರು ಹಾಗೂ ಪೊಲೀಸರಿಗೆ ಹಾಸ್ಟೆಲ್ ಪ್ರವೇಶ ಮಾಡಲು ಅನುಮತಿ ಕೊಡಲಾಗಿದೆ. ಹಾಗಾಗಿ ಹಾಸ್ಟೆಲ್ ಒಳಗೆ ಬಂದ  ಪೊಲೀಸ್ರು, ಬಲವಂತವಾಗಿಯೇ ಕೆಲ ಹುಡುಗಿಯರಿಗೆ ಬಟ್ಟೆ ಬಿಚ್ಚಿಸಿ ನಂತರ ನೃತ್ಯ ಮಾಡಲು ಹೇಳಿರುವುದಾಗಿ ಒತ್ತಾಯಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ. ಅಜೊತೆಗೆ ಅದರ ವೀಡಿಯೊ ಕ್ಲಿಪ್ ಕೂಡ  ಬಹಿರಂಗ ಆಗಿದೆ ಎಂದು ತಿಳಿದುಬಂದಿದೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •