ಸರ್ಕಾರ ಇರುವುದು ಜನರಿಗಾಗಿ.. ಕಾನೂನು ಇರುವುದು ಜನರಿಗೆ ಸಹಾಯ ಆಗಲೆಂದು.. ಆದರೆ ಜನರ ಹೊಟ್ಟೆ ಮೇಲೆಹೊ ಡೆದು ಸರ್ಕಾರ ನಡೆಸುವಂತಾಗಿದೆಯಾ ನಮ್ಮ ರಾಜ್ಯದ ಪರಿಸ್ಥಿತಿ ಎನ್ನುವಂತಾಗಿದೆ.. ಹೌದು ಗಾರೆ ಕೆಲಸ ಮಾಡುವ ಮಹಿಳೆಯ ಬಳಿ ಮಾಸ್ಕ್ ಹಾಕಿಲ್ಲವೆಂದು ದಂಡ ಕತ್ಟಿಸಿಕೊಂಡಿದ್ದು ಆ ಮಹಿಳೆ ಕಣ್ಣೀರು ಹಾಕಿ ನೋವಿನಿಂದ ಮಾತನಾಡಿದ್ದಾರೆ..

ಹೌದು ಮಾಸ್ಕ್ ಹಾಕಬೇಕಿರುವುದು ಜನರ ಆರೋಗ್ಯ ದೃಷ್ಟಿಯಿಂದ.. ಆದರೆ ಅದನ್ನೇ ಕಾರಣ ಮಾಡಿಕೊಂಡು ಜನರ ಬಳಿ ಸುಲಿಗೆಮಾಡುವುದೆಷ್ಟು ಸರಿ? ಇದರಿಂದ ಜನರಿಗೆ ನೆರವಾಗುತ್ತದೆಯೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ..

Mortar-work

ಹೌದು ಇಂದು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುವ ಮಹಿಳೆಯೊಬ್ಬರು ತನ್ನ ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು ಗಾರೆ ಕೆಲಸಕ್ಕೆಂದು ಹೋಗುವ ಸಮಯದಲ್ಲಿ ಮಾಸ್ಕ್ ಹಾಕಿಲ್ಲವೆಂದು ಆ ಮಹಿಳೆಗೆ ಇನ್ನೂರ ಐವತ್ತು ರೂಪಾಯಿ ದಂಡ ಹಾಕಿದ್ದಾರೆ.. ಆ ಮಹಿಳೆ ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ ದಂಡ ಕಟ್ಟಿಸಿಕೊಂಡಿದ್ದಾರೆ.. ಅದೇ ದಾರಿಯಲ್ಲಿ ಎಂ ಎಲ್ ಎ ಅಥವಾ ಎಂ ಪಿ ಗಳು ಬಂದಿದ್ದರೆ ಇದೇ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರಾ? ರಾಜಕಾರಣಿಗಳ ಸಭೆ ಸಮಾರಂಭಗಳಲ್ಲಿ ಮಾಸ್ಕ್ ಹಾಕದೇ ಇರುವ ರಾಜಕಾರಣಿಗಳ ಮೇಲೆ ಯಾಕಿಲ್ಲ ಇವರ ದಂಡ?

ಕೊರೊನಾ ದಿಂದ ಜೀವ ಹೋಗುವುದಕ್ಕಿಂತ ಹೆಚ್ಚಾಗಿ ಜನರ ಜೀವನ ಹಾಳಾಗಿ ಜೀವ ಕಳೆದುಕೊಳ್ಳುವಂತಾಗಿದೆ.. ನಿಯಮ ಪಾಲನೆ ಮಾಡಬೇಕು.. ಆದರೆ ಅದೆಲ್ಲಕ್ಕೂ ಮೀರಿ ಮಾನವೀಯತೆ ಅನ್ನೋದು ಒಂದಿದೆ.. ಅದನ್ನು ಯಾರೂ ಸಹ ಮರೆಯಬಾರದು ಎಂದು ಜನರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ..ಇನ್ನು ದಂಡ ಕಟ್ಟಿದ ಮಹಿಳೆ ಕಣ್ಣೀರು ಹಾಕಿದ್ದು.. ಅಣ್ಣ ಬಿಟ್ಬಿಡಿ ಎಂದರೂ ಸಹ ಬಿಡದೇ ದಂಡ ಕಟ್ಟಿಸಿಕೊಂಡರು.. ಬಡವರ ಕಷ್ಟ ಅವರಿಗೇನು ಗೊತ್ತು? ಬಿಸಿಲಲ್ಲಿ ಬಂದು ಗಾರೆ ಕೆಲಸ ಮಾಡಲಿ ಆಗ ಗೊತ್ತಾಗತ್ತೆ.. ನಮ್ಮ ಒಂದು ದಿನದ ಸಂಬಳವೇ ಹೋಯ್ತು.. ಊಟಕ್ಕೂ ನಮಗೆ ಅದೇ ಆಧಾರ.. ಬಡವರ ಹೊಟ್ಟೆ ಮೇಲೆ‌ಹೊ ಡೆದರೆ ಉದ್ಧಾರ ಆಗಲ್ಲ ಎಂದು ಕಣ್ಣೀರಾಕುತ್ತಲೇ ಹೇಳಿ ಹೊರಟರು.. ಇದು ಒಂದು ಘಟನೆ ಮಾತ್ರವಲ್ಲ.. ದಿನವಿಡೀ

Mortar-work

ದಿನವಿಡೀ ನೂರಾರು ಇಂತಹ ಘಟನೆಗಳು‌ ನಡೆಯುತ್ತಲೇ ಇರುತ್ತದೆ.. ಜನರು ಹೊಟ್ಟೆ ಬಟ್ಟೆಗೆ ದುಡಿಯುವ ದುಡ್ಡನ್ನೆಲ್ಲಾ ಈ ರೀತಿ ದಂಡ ಕಟ್ಟಿದರೆ ಬಡವರು ಅದೆಲ್ಲಿ ಹೋಗಬೇಕೋ ಆ ಭಗವಂತನೇ ಬಲ್ಲ.. ಜನರ ಮೇಲೆ ಅಷ್ಟು ಕಾಳಜಿ ಇದ್ದವರು ಪ್ರತಿಯೊಬ್ಬರಿಗೂ ಉಚಿತವಾಗಿ ಒಂದೊಂದು ಸೆಟ್ ಮಾಸ್ಕ್‌ ಗಳನ್ನು ಉಚಿತವಾಗಿ ಕೊಟ್ಟು ಹಾಕಿಕೊಳ್ಳಲು ತಿಳಿಸಬೇಕು.. ರಸ್ತೆ ಸರಿಯಿಲ್ಲದಿದ್ದರೂ ಹೆಲ್ಮೆಟ್ ಇಲ್ಲವೆಂದು ದಂಡ ಹಾಕಲಾಗುತ್ತದೆ.. ಇದೀಗ ಮಾಸ್ಕ್ ಹಾಕಿಲ್ಲವೆಂದು ದಂಡ.. ಮುಂದೊಂದು ದಿನ ಮತ್ತೊಂದಕ್ಕೂ ದಂಡ ಹಾಕಿದರೂ ಆಶ್ಚರ್ಯ ಪಡಬೇಕಿಲ್ಲ..

………………
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •