ಪ್ರಾಚೀನಕಾಲದಿಂದಲೂ ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಹಾಗೂ ಏನು ನೋಡಬಾರದು ಎನ್ನುವಂತಹ ಒಂದು ವಿಚಾರವನ್ನ ನಮ್ಮ ಪೂರ್ವಿಕರು ನಮಗೆ ಹೇಳಿದ್ದಾರೆ. ಕೆಲವೊಂದು ಪ್ರಾಣಿಗಳನ್ನು ಹಾಗೂ ಕೆಲವೊಂದು ವಸ್ತುಗಳನ್ನು ನಾವು ಬೆಳಗ್ಗೆ ಎದ್ದು ನೋಡಿದರೆ ಅವತ್ತಿನ ದಿನ ತುಂಬಾ ಚೆನ್ನಾಗಿರುತ್ತದೆ.

ಯಾಕೆಂದರೆ ಪ್ರಾಣಿಗಳ ದೇಹದಲ್ಲಿ ಇರುವಂತಹ ಮುಕ್ಕೋಟಿ ದೇವರುಗಳು ನಮಗೆ ಆಶೀರ್ವಾದ ಮಾಡುತ್ತವೆ ಎನ್ನುವುದು ಒಂದು ಒಳ ಅರ್ಥ. ಹಾಗಾದ್ರೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ನೀವೇನಾದರೂ ಬೆಳಗ್ಗೆ ಎದ್ದು ಈ ರೀತಿಯಾದಂತಹ ವಸ್ತುಗಳನ್ನು ನೋಡಿದ್ದೇ ಆದಲ್ಲಿ ಅವತ್ತಿನ ದಿನ ತುಂಬಾ ಕೆಟ್ಟದಾಗಿರುತ್ತದೆ ಇದನ್ನು ನಾವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.

morning

ನಾವು ಎಷ್ಟೇ ಗೊತ್ತಿದ್ದರೂ ಕೂಡ ಕೆಲವೊಂದು ಸಾರಿ ತಪ್ಪು ಮಾಡುತ್ತೇವೆ ಕೆಲವೊಂದು ವಸ್ತುಗಳನ್ನು ನಾವು ನೋಡಿ ಅವತ್ತಿನ ದಿನ ತುಂಬಾ ಕೆಟ್ಟದಾಗಿ ಆಗಿರುತ್ತದೆ ಆದರೆ ಅದರ ಹಿಂದೆ ಇರುವಂತಹ ನಿಜದ ಅರಿವು ನಮಗೆ ಇರುವುದಿಲ್ಲ. ಹಾಗಾದರೆ ಬನ್ನಿ ಬೆಳಗ್ಗೆ ಎದ್ದ ತಕ್ಷಣ ಯಾವ ರೀತಿಯಾದಂತಹ ವಸ್ತುಗಳನ್ನು ನಾವು ನೋಡಬಾರದು ಎನ್ನುವಂತಹ ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ ಬನ್ನಿ.

ನೀವೇನಾದ್ರೂ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ಹಿಡಿದುಕೊಂಡು ನಿಮ್ಮ ಮುಖವನ್ನು ನೀವು ನೋಡಿಕೊಂಡಿತೆಂದರೆ ನಕಾರಾತ್ಮಕ ಆಲೋಚನೆಗಳು ಹಾಗೂ ಬೇಡವಾದ ಅಂತಹ ಅಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುವುದಕ್ಕೆ ಶುರುವಾಗುತ್ತವೆ ಇದರಿಂದಾಗಿ ಅವತ್ತಿನ ದಿನ ತುಂಬಾ ಕೆಟ್ಟದಾಗಿರುತ್ತದೆ.

ನೀವು ಯಾವುದೇ ಕಾರಣಕ್ಕೂ ನಿಮ್ಮ ಬಿಂಬವನ್ನು ನೀವು ನೋಡಿಕೊಳ್ಳಬಾರದು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕೈ ಅಂದರೆ ನಿಮ್ಮ ಅಂಗೈಯ್ಯನ್ನು ನೀವು ನೋಡಿಕೊಂಡರೆ ತುಂಬಾ ಒಳ್ಳೆಯದು ಅದನ್ನ ಬಿಟ್ಟು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ದೇಹದ ನೆರಳನ್ನು ನೀಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಕೆಟ್ಟದ್ದು ಆಗಬಹುದು.

morning

ಹೀಗೆ ಮಾಡಿದರೆ ನಮ್ಮ ಮನಸ್ಥಿತಿ ತುಂಬಾ ಕೆಟ್ಟದಾಗಿ ಹೋಗುತ್ತದೆ ಹಾಗು ಅವತ್ತಿನ ದಿನ ನಮಗೆ ತುಂಬಾ ಬೇಜಾರು ದಿನ ಆಗಿರುತ್ತದೆ. ಹಾಗೂ ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಪ್ರಾಣಿಗಳ ಫೋಟೋಗಳನ್ನು ನೋಡಬಾರದು ಹೀಗೆ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಉಂಟಾಗುತ್ತವೆ ಹಾಗೂ ಅವತ್ತಿನ ದಿನ ಜಗಳ ಆಗುವಂತಹ ಸಂದರ್ಭ ಕೂಡ ಬರಬಹುದು.

ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಮೊಬೈಲನ್ನು ನಾವು ನೋಡಬಾರದು ಇದು ವೈಜ್ಞಾನಿಕವಾಗಿ ಹೇಳುವಂತಹ ಒಂದು ವಿಚಾರ ಇದರಲ್ಲಿ ಯಾವುದೇ ರೀತಿಯಾದಂತಹ ಜ್ಯೋತಿಷ್ಯಶಾಸ್ತ್ರ ಇಲ್ಲ, ಬೆಳಗ್ಗೆ ಎದ್ದು ನಾವು ಫೋನನ್ನು ನೋಡುವುದರಿಂದ ನಮಗೆ ಬರುವಂತಹ ಇಮೇಲ್ ಅಥವಾ ಎಸ್ಎಂಎಸ್ ಎನ್ನುವಂತಹ ವಿಚಾರಗಳು ನಮ್ಮನ್ನ ಮೂಡ್ ಆಫ್ ಮಾಡುತ್ತದೆ ಇದರಿಂದಾಗಿ ಸಂಪೂರ್ಣವಾಗಿ ಅವತ್ತಿನ ದಿನ ನಮಗೆ ಕೆಟ್ಟದಾಗಿರುತ್ತದೆ. ಅದಲ್ಲದೆ ಬೆಳಗ್ಗೆ ಎದ್ದ ತಕ್ಷಣ ಫೋನನ್ನು ನೋಡುವುದರಿಂದ ಅದರಲ್ಲಿ ಬರುತ್ತಿರುವ ಅಂತಹ ಬೆಳಕಿನ ಪ್ರಮಾಣ ನಮ್ಮ ಕಣ್ಣಿಗೂ ಕೂಡ ತುಂಬಾ ಕೆಟ್ಟದಾದ ಅಂತಹ ಪರಿಣಾಮವನ್ನು ಬೀರುತ್ತದೆ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •