ಮೂಗಿಗೆ ಮೂಗುತಿ ಧರಿಸೋದು ಹಿಂದಿನ ಕಾಲದಿಂದಲೂ ಕೂಡ ರೂಢಿಗತವಾಗಿದೆ ಆದ್ರೆ ಇಂದಿನ ಹೆಣ್ಣುಮಕ್ಕಳು ಫ್ಯಾಶನ್ ಮಾಡರ್ನ್ ಅಂದುಕೊಂಡು ಮೂಗಿಗೆ ಮೂಗುತಿ ಹಾಕೋದೇ ಬಿಡುತ್ತಾರೆ ಆದ್ರೆ ಎಲ್ಲದರಿಂದಲೂ ಕೂಡ ಒಂದೊಂದು ಲಾಭವಿದೆ ಅನ್ನೋದು ಅದರ ಹಿಂದಿರುವ ವಾಸ್ತವ ಸತ್ಯವಾಗಿದೆ ಹಾಗಾದ್ರೆ ಬನ್ನಿ ಈ ಮೂಲಕ ಮೂಗುತಿ ಧರಿಸವುದರಿಂದ ಆರೋಗ್ಯಕ್ಕಾಗುವ ಲಾಬವೇನೂಆ ನ್ನೋದನ್ನ ತಿಳಿದುಕೊಳ್ಳೋಣ. ಮೂಗುತಿ ಹಿಂದೂ, ಮುಸ್ಲಿಂ ಮತ್ತು ಕೆಲವು ಆಫ್ರಿಕನ್‌ ಸಂಸ್ಕೃತಿಗಳಲ್ಲಿ ನಾವು ನೋಡಬಹುದು.

ಆದರೆ ಭಾರತದಲ್ಲಿ ಮೂಗುತಿ ಧರಿಸುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಭಾರತದಲ್ಲಿ ಮಹಿಳೆಯರು ಮೂಗು ಚುಚ್ಚಿಸಿಕೊಳ್ಳುವುದು ಪ್ರಮುಖ ಸಂಪ್ರದಾಯವಾಗಿದೆ. ಹಿಂದೂ ಧರ್ಮದಲ್ಲಿ ಮಂಗಳಸೂತ್ರ, ಮೂಗುತಿ, ಕಾಲುಂಗುರ, ಕಿವಿಯೋಲೆ ಮತ್ತು ಕುಂಕುಮವನ್ನು ಮುತ್ತೈದೆಯರ ಲಕ್ಷಣಗಳೆಂದು ಹೇಳಲಾಗುತ್ತದೆ. ಆದರೆ ಮದುವೆಯಾಗದಿದ್ದವರೂ ಕೂಡ ಮೂಗುತಿಯನ್ನು ಧರಿಸುತ್ತಾರೆ.ಭಾರತದಲ್ಲಿ ಮೂಗುತಿ ಧರಿಸುವುದು ಪ್ರಮುಖ ಸಂಪ್ರದಾಯ ಆದರು ಕೂಡ ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಂತೆ ಮೂಗುತಿ ಧರಿಸುವ ಕಾರಣ ಮಹತ್ವ, ಸಂಪ್ರದಾಯಗಳು ಬದಲಾಗುತ್ತದೆ.

ಮೂಗುತಿ ಧರಿಸುವುದು ನಮ್ಮ ಸಂಪ್ರದಾಯ ಮಾತ್ರವಲ್ಲ. ಆರೋಗ್ಯಕ್ಕೆ ಕೂಡ ಬಹಳಷ್ಟು ಉತ್ತಮವೆಂದು ಆಯುರ್ವೇದ ಕೃತಿಯಾದ ಶುಶ್ರುತ ಸಮಿತಿಯಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಮೂಗುತಿಯನ್ನು ಮದುವೆ ಸಂದರ್ಭದಲ್ಲಿ ತಪ್ಪದೇ ಧರಿಸುತ್ತಾರೆ. ಭಾರತೀಯ ಸಂಸ್ಕೃತಿಯ ಪ್ರಕಾರ ಮೂಗುತಿ ಬಗ್ಗೆ ಹಲವಾರು ನಂಬಿಕೆಗಳು ಇವೇ. ನಂಬಿಕೆಗಳ ಪ್ರಕಾರ ಭಾರತದಲ್ಲಿ ಮಹಿಳೆಯರು ಮೂಗುತಿ ಧರಿಸುವ ಪದ್ಧತಿಯು ಮೊಗಲರ ಆಳ್ವಿಕೆ ಕಾಲದಲ್ಲಿ ಅಂದರೆ 16 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಉಂಗುರಾಕರದ ಮೂಗುತಿ ಧರಿಸುವುದನ್ನು ಕೆಲವು ಹಳೆಯ ವೈದಿಕ ಲಿಪಿಯಲ್ಲಿ ಉಲ್ಲೇಖಿಸಿದ್ದಾರೆ. ಮೂಗುತಿ ಧಾರಣೆಯು ಸುಮಾರು ಆರು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಒಳಗೊಂಡಿದೆ. ಮೂಗುತಿಯು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು. ಸುಮಾರು 1970 ರ ದಶಕದಲ್ಲಿ ಹಿಪಿ ಗಳಲ್ಲಿ ಮೂಗು ಚುಚ್ಚುವಿಕೆಯ ಸಾಂಪ್ರದಾಯ ಕಾಣಿಸಿಕೊಂಡಿದ್ದು. ಈ ಸಂಪ್ರದಾಯವನ್ನು ಸುಮಾರು 1980 ರ ದಶಕದಲ್ಲಿ ವಿರೋಧಿಸಾಯಿತ್ತು. ನಂತರ ಹಿಪ್ಪಿಗಳು ಭಾರತಕ್ಕೆ ವಲಸೆ ಬರಲು ಪ್ರಾರಂಭಿಸಿದರು ಅವರ ಈ ಸಂಪ್ರದಾಯವನ್ನು ಕಂಡು ಭಾರತೀಯರು ಆಕರ್ಷಿಸುತ್ತಾರೆ ಹಾಗೂ ಭಾರತದಲ್ಲೂ ಕೂಡ ರೂಢಿಗೆ ಬರಲು ಆರಂಭ ವಾಯಿತು. ಇನ್ನು ಆಯುರ್ವೇದ ಪದ್ಧತಿಯಲ್ಲಿ ವಿವಿಧ ಮೂಗುತಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಮೂಗಿನ ಹೊಳೆಯ ಬಳಿ ಮೂಗುತಿ ಧರಿಸುವುದರಿಂದ ಮಹಿಳೆಯರಲ್ಲಿ ಕಂಡು ಬರುವ ಮುಟ್ಟಿನ ನೋವು ಕಡಿಮೆಯಾಗುತ್ತದೆ. ಅದರಿಂದ ಹುಡುಗಿಯರಿಗೆ ಹಾಗೂ ವಯಸ್ಕ ಮಹಿಳೆಯರಿಗೆ ಮೂಗನ್ನು ಚುಚ್ಚಲಾಗುತ್ತದೆ ಎಂದು ಹೇಳಲಾಗುತ್ತದೆ.ಎಡ ಮೂಗಿನ ಹೊಳೆಯಿಂದ ಹಾದು ಹೋಗುವ ನಿರ್ದಿಷ್ಟ ನರಗಳು ಸ್ತ್ರೀ ಸಂತಾನೊಪತಿ ಅಂಗಳೊಂದಿಗೆ ಸಂಬಂಧ ಹೊಂದಿದ್ದು ಇದು ಸ್ತ್ರೀ ಗೆ ಹೆರಿಗ್ಗೆ ಸಹಾಯ ಎಂದು ಹೇಳಲಾಗುತ್ತದೆ. ಹಿಂದೂ ಸಂಪ್ರದಾಯವಾಗಿದ್ದ ಮೂಗುತಿ ಧರಿಸುವುದು ದಿನಗಳು ಕಳೆದಂತೆ ಅಲಂಕಾರಿಕ ವಸ್ತುಗಳಾಗಿ ಮಾರ್ಪಾಡು ಗೊಂಡಿರತ್ತು.

ಇತ್ತಿಚಿನ ಕೆಲವು ಮಹಿಳೆಯರು ಮೂಗುತಿಯನ್ನು ಧಾರ್ಮಿಕ ನಂಬಿಕೆಗಳೊಂದಿಗೆ ಧರಿಸಿದರೆ. ಇನ್ನು ಕೆಲವರು ತಮ್ಮ ಅಲಂಕಾರಕಾಗಿ ಧರಿಸುತ್ತಾರೆ. ಮತ್ತೆ ಕೆಲವರು ಮೂಗುತಿಯನ್ನು ಧರಿಸುವುದೇ ಇಲ್ಲ. ಕೆಲವು ಹೆಣ್ಣು ಮಕ್ಕಳಿಗೆ 12 ಅಥವಾ 13 ವರ್ಷವಾಗುತ್ತಿದಂತೆ ಆ ಮಗುವಿಗೆ ಮೂಗು ಚುಚ್ಚಿಸುತ್ತಾರೆ. ಇದ್ದರ ಅರ್ಥ ಆ ಹುಡುಗಿ ಮದುವೆ ವಯಸ್ಸಿಗೆ ಬರುತ್ತಿದ್ದಾಳೆ ಎನ್ನುವುದನ್ನು ಸೂಚಿಸುವುದ್ದಾಗಿದೆ.ಹಿಂದು ಧರ್ಮದಲ್ಲಿ ಕಿವಿ ಚುಚ್ಚುವಿಕೆಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುವುದೋ ಅಷ್ಟೇ ಪ್ರಾಮುಖ್ಯತೆಯನ್ನು ಮೂಗುತಿ ಚುಚ್ಚುವಿಕೆ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಭಾರತದಲ್ಲಿ ಮೂಗುತಿಯು ಸುಮಂಗಲಿಯ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ಪರ ಶಿವನ ಪತ್ನಿ ಪಾರ್ವತಿ ದೇವಿಯನ್ನು ಗೌರವಿಸುವುದು ಎಂಬ ಅರ್ಥವನ್ನು ನೀಡುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •