ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಹಾಸ್ಯ ಪಾತ್ರಗಳಲ್ಲಿ ಮಿಂಚಿದ, ಅಡುಗೆ ಕಾರ್ಯಕ್ರಮದ ಮೂಲಕ ಇಂದಿಗೂ ತಮ್ಮ ಖ್ಯಾತಿಯನ್ನು ಉಳಿಸಿಕೊಂಡಿರುವ ಸಿಹಿ-ಕಹಿ ಚಂದ್ರು ಹಾಗೂ ಗೀತಾ ಇಬ್ಬರೂ ಕಲಾವಿದರೇ ಆಗಿದ್ದಾರೆ. ಸಿಹಿ ಕಹಿ ಎಂಬ ತಮ್ಮದೇ ಪ್ರೊಡಕ್ಷನ್‌ ಹೌಸ್‌ ಒಂದನ್ನು ಕಟ್ಟಿಕೊಂಡು ಪಾಪಾ ಪಾಂಡು ಧಾರಾವಾಹಿಯ ಮೂಲಕ ಮನೆ ಮಂದಿ ಎಲ್ಲರನ್ನು ನಕ್ಕು ನಗಿಸಿದ್ದರು. ಸಿಹಿಕಹಿ ಗೀತಾ ಅವರು ಹಿನ್ನಲೆ ಧ್ವನಿ ನೀಡುತ್ತಾರೆ.

ಜೊತೆಗೆ ಇವರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ಚಂದ್ರ ಅವರ ಜೊತೆಗೆ ಬಣ್ಣ ಹಚ್ಚಿದ್ದಾರೆ. ಪಾಪಾ ಪಾಂಡು ಧಾರಾವಾಹಿಯಲ್ಲಿ ಕೂಡ ಇವರ ಅಭಿನಯಿಸಿದ್ದರು.ಸಿಹಿ ಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ಹಿತಾ ಚಂದ್ರಶೇಖರ್, ಕಿರಿಯ ಮಗಳು ಖುಷಿ ಚಂದ್ರಶೇಖರ್.‌ ಹಿತಾ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನರಿಗೆ ಪರಿಚಯವಿದೆ. ಅಲ್ಲದೇ ಹಿತಾ ಅವರು ಕಳೆದ ವರ್ಷ ಡಿಸೆಂಬರ ೧ರಂದು ನಟ ಹಾಗೂ ನಿರೂಪಕ ಕಿರಣ್‌ ಅವರ ಜೊತೆಗೆ ವಿವಾಹವಾದರು.

 

 

 

ಇನ್ನು ಖುಷಿ ಚಂದ್ರಶೇಖರ್‌ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ.ಕಿರಿಯ ಪುತ್ರಿ ಖುಷಿ ಇನ್ನೂ ಓದುತ್ತಿದ್ದಾರೆ. ಅಲ್ಲದೇ, ಇವರು ಇನ್‌ ಸ್ಟಾಗ್ರಾಂನಲ್ಲಿ ಆಗಾಗ್ಗೆ ಮೇಕಪ್‌ ಹಾಗೂ ಹೇರ್‌ ಟಿಪ್ಸ್‌ ನೀಡುತ್ತಿರುತ್ತಾರೆ. ಸಿಂಪಲ್‌ ಆಗಿ ಅಷ್ಟೇ ಡಿಫರೆಂಟ್‌ ಆಗಿ ಸಂದರ್ಭಕ್ಕೆ ತಕ್ಕಂತೆ ಮೇಕಪ್‌ ಮಾಡಿಕೊಂಡು ಐಜಿಟಿವಿಯಲ್ಲಿ ವಿಡಿಯೋ ಅಪ್ಲೋಡ್‌ ಮಾಡುತ್ತಿರುತ್ತಾರೆ. ಅಂದಹಾಗೆ ಈ ಖುಷಿ ಅವರ ಹೈಲೆಟ್‌ ಎಂದರೆ ಅವರ ಗುಂಗುರು ಕೂದಲು. ಇದೇ ಗುಂಗುರು ಕೂದಲಿನಿಂದಾಗಿ ಅವರು ಸಕತ್‌ ಆಗಿ ಕಾಣಿಸುತ್ತಾರೆ.

 

 

ಇನ್ಸ್ಟಾಗ್ರಾಮ್‌ ನಲ್ಲಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಅಲ್ಲದೇ, ಇವರೇ ಲೈವ್‌ ಬಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವ ಪರಿಪಾಟವೂ ಈಕೆಗಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಇವರನ್ನು ಕಂಡರೆ ಬಹಳ ಖುಷಿಯೇ ಆಗುತ್ತದೆ. ಇವರು ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲವಾದರೂ ತಮ್ಮ ಪೋಷಕರು ಕಲಾವಿದರಾಗಿರುವುದರಿಂದ ಸಹಜವಾಗಿ ಇವರಿಗೂ ಅಭಿಮಾನಿಗಳು ಇರುತ್ತಾರೆ.

 

 

ಖುಷಿ ಅವರು ಒಮ್ಮೊಮ್ಮೆ ವಸ್ತ್ರ ವಿನ್ಯಾಸದಲ್ಲೂ ಎತ್ತಿದ ಕೈ. ತೇಜು ಕ್ರಾಂತಿ ಎನ್ನುವ ವಿನ್ಯಾಸಕ ಇವರ ವಸ್ತ್ರಗಳನ್ನು ವಿನ್ಯಾಸ ಮಾಡುತ್ತಾರೆ. ಅಲ್ಲದೇ, ತೇಜು ಅವರು ವಿನ್ಯಾಸ ಮಾಡಿದ ವಸ್ತ್ರಗಳನ್ನು ಹಾಕಿಕೊಂಡು ಅದಕ್ಕೆ ಸೂಕ್ತವಾದ ರೀತಿಯಲ್ಲಿ ಮೇಕಪ್‌ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್‌ ಮಾಡುತ್ತಾರೆ. ಕೆಲವೊಂದು ಫೋಟೋಗಳಲ್ಲಿ ಇವರು ಹಾಟ್‌ ಆಗಿಯೂ ಕಾಣಿಸಿಕೊಂಡಿದ್ದಾರೆ.

 

 

ಇವರ ಅಕ್ಕ ಹಿತಾ ಚಂದ್ರಶೇಖರ್‌ ಅವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ತಂಗಿ ಖುಷಿಗೆ ಸಿನಿಮಾ ಕ್ಷೇತ್ರದಲ್ಲಿ ಮಿಂಚುವ ಬದಲು ಅವರು ಸೈಕಿಯಾಟ್ರಿಸ್ಟ್‌ ಆಗಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದಾರೆ.

 

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •