ಈ ಸಂಭಂದದಲ್ಲಿ ದುಡ್ಡು ಬಂದ್ರೆ, ಆ ಸಂಭಂದ ತಾನಾಗಿಯೇ ಬೆಲೆ ಕಳೆದುಕೊಳ್ಳುತ್ತೆ.. ಅದೆ ದುಡ್ಡಿಗಿಂತ ಸಂಭಂದ ದೊಡ್ದು ಅಂದಾಗ‌ ಮಾತ್ರ‌ ಸಂಭಂದ ತನ್ನ ಮೌಲ್ಯ ಉಳಿಸಿಕೊಳ್ಳುತ್ತೆ.. ಈಗಿನ ಕಾಲದಲ್ಲಿ ಒಡಹುಟ್ಟಿದವರು ದುಡ್ಡಿಗಾಗಿ ಹೊಡೆದಾಡಿ ಹೀನ ಕೃ’,ತ್ಯ ಮಾಡೋದು ನೋಡಿದ್ದಿವಿ.. ಇನ್ನೂ ಹೊರಗಿನವರು ಯಾವ್ ಲೆಕ್ಕ ಹೇಳಿ.. ದುಡ್ಡಿಗೆ ಬೆಲೆ ಕೊಡಬೇಕು ನಿಜ.. ಜೀವನದಲ್ಲಿ ದುಡ್ಡು ಇರಬೇಕು ದುಡ್ಡೆ ಜೀವನ ಆಗ್ಬಾರ್ದಲ್ವಾ.. ಯಾವ ವ್ಯಕ್ತಿ ಸಂಭಂದಕ್ಕೆ ಬೆಲೆ ಕೋಡ್ತಾನೆ ಅವನ ವ್ಯಕ್ತಿತ್ವವೇ ಬೇರೆಯಾಗಿರುತ್ತೆ ಬಿಡಿ..‌ ಯಾಕಿಷ್ಟು ದುಡ್ಡು ಸಂಭಂದ ಅಂತ ಹೇಳ್ತಿದ್ದಿನಿ ಅಂತ ಆಶ್ಚರ್ಯ ಆಗ್ತಿರ.. ಏಸ್ ನಾನು ಹೇಳ ಹೊರಟ ಸ್ಟೋರಿ ಕೇಳಿದ್ರೆ ನೀವು ಶಾಕ್ ಆಗೊದಂತು ಸತ್ಯ.. ನಟಿ ವಿಜಯಲಕ್ಷ್ಮಿ ಒಂದು ವರ್ಷದಿಂದ ಅವರಿ ಏನೇ ಮಾಡಿದ್ರು, ಮಾತಾಡಿದ್ರು ಸುದ್ದಿಯಾಗ್ತಿದ್ದಾರೆ..‌ ಈಗಷ್ಟೇ ಅವರ ತಾಯಿ ಕಳೆದುಕೊಂಡು ನೋವಿನಲ್ಲಿ ಕೂಡ ಇದ್ದಾರೆ.‌. ಈ ವಿಚಾರ ಅಷ್ಟೇ ಅಲ್ಲ ಇದುವರೆಗೂ ಅವರ ಲೈಫ್ ನಲ್ಲಿ ಏನ್ ಆಗಿತ್ತು ಇವಾಗ ಏನ್ ಆಯ್ತು ಅನ್ನೊದು ಎಲ್ಲರಿಗೂ ಗೊತ್ತೆ ಇದೆ..

Sadalwood Actress Vijayalakshmi mother Vijaya Sundaram passes away at 75| ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟಿ ವಿಜಯಲಕ್ಷ್ಮಿ ತಾಯಿ ನಿಧನEntertainment News in Kannada

ತಾಯಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ವಿಜಯಲಕ್ಷ್ಮಿ ಗೆ ಕನ್ನಡಿಗರು ನೆರವಿಗೆ ಬಂದಿದ್ದಾರೆ.. ಅದೇ ಸಮಯದಲ್ಲಿ ಜನಸ್ನೇಹಿ ಆಶ್ರಮದ ಯೋಗೇಶ್ ಅವರು ಸಹ ಮುಂದೆ ಬಂದು ನಮ್ಮ ಆಶ್ರಮದ ಮೂಲಕ ನಿಮ್ಮ ತಾಯಿಯ ಅಂ’,ತ್ಯ ಸಂಸ್ಕಾರ ಮಾಡುತ್ತೇವೆ ಎಂದು ನೆರವು ಬಂದರು.. ಆಗ ವಿಜಯಲಕ್ಷ್ಮಿ ಯೋಗೆಶ್ ಕೃತಜ್ಞತೆ ಹೇಳಿ ಯೋಗೇಶ್ ನನ್ನ ತಮ್ಮ ಅಂತ ಹೇಳಿದ್ರು.. ಆ ಸಂಭಂದ ಹಾಗೇ ಮುಂದುವರೆಯಲಿಲ್ಲ.. ಯಾವಗ ದುಡ್ಡಿನ ಮ್ಯಾಟರ್ ಇಲ್ಲಿ ಒಪನ್ ಆಯ್ತೊ ಸಂಬಂಧದ‌ ಮ್ಯಾಟರ್ ಕ್ಲೋಸ್ ಆಯ್ತು ನೋಡಿ.. ಹೌದು ವಿಜಯಲಕ್ಷ್ಮಿ ಅವರ ತಾಯಿಯ ಅಂತ್ಯ ಸಂಸ್ಕಾರದ ಪೂರ್ಣ ಜವಾಬ್ದಾರಿಯನ್ನು ಯೋಗೇಶ್ ಹೊತ್ತುಕೊಂಡಿದ್ದ.. ವಿಧಿವತ್ತಾಗಿ ಅಂ’,ತ್ಯ ಸಂ’ಸ್ಕಾ’ರ ಸಹ ನೆರವೇರಿಸಿದ್ರು.. ಅದಾದ ಬಳಿಕ ಯೋಗೇಶ್ ಅವರೇ ಸಾಕಷ್ಟು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.. ವೀಡಿಯೋಗಳಲ್ಲಿ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡುವಂತೆ ಮೊದಲು ವಿಜಯಲಕ್ಷ್ಮಿ ಅವರ ಸಹೋದರ ಸಂಬಂಧಿ ವಿಘ್ನೇಶ್ ಅಕೌಂಟ್ ಡಿಟೇಲ್ಸ್ ನೀಡಲಾಗಿತ್ತು..

ಕನ್ನಡದ ನಟಿ ವಿಜಯಲಕ್ಷ್ಮಿಗೆ ಮಾತೃವಿಯೋಗ- Kannada Prabha

ಅದಾದ ಬಳಿಕ ಯೋಗೇಶ್ ಅವರ ಅಕೌಂಟ್ ಡಿಟೇಲ್ಸ್ ಕೊಟ್ಟು ಇದೇ ಅಕೌಂಟ್ ಗೆ ಹಣ ಹಾಕುವಂತೆ ಮನವಿ ಮಾಡಿಕೊಂಡರು.. ಎಲ್ಲವೂ ಚೆನ್ನಾಗಿಯೇ ಇತ್ತು.. ಅಕ್ಕ ತಮ್ಮನ ಸಂಬಂಧದಲ್ಲಿ ಬಿರುಕು ಬಂರುವಂತೆ ದುಡ್ಡು ಮಾಡ್ತು ನೋಡ್ರಿ.. ದೊಡ್ಡವರು ಅಷ್ಟೀಲ್ಲದೆ ಹೇಳ್ತಾರಾ.. ಹಣಕ್ಕೆ ಹೆಣವೂ ಬಾಯ್ ಬಿಡುತ್ತೆ ಅಂತ.. ಒಂದ್ ಮಾತು‌ ಹೇಳ್ತಿನಿ ಕೇಳಿ ಸಂಭಂದ ಮಾಡೋದು ದೊಡ್ದಲ್ಲ , ಆ ಸಂಭಂದ ಕಾಪಾಡಿಕೊಳ್ಳೋದು ಇದೆಯಲ್ಲ ಆ ಗುಣ ದೊಡ್ಡದು.. ಹಣ ಇಂದಿರುತ್ತೆ ನಾಳೆ ಹೋಗುತ್ತೆ.. ಕಷ್ಟ ಕಾಲಕ್ಕೆ ಆಗುವವರು ಸಂಭಂದಿಗಳೆ ಅಲ್ವ.. ಹೌದು ಯೋಗೇಶ್ ಅಕೌಂಟ್ ಗೆ ಸಾಮಾನ್ಯ ರಿಂದ ಸಾಕಷ್ಟು ದೊಡ್ಡ ಮೊತ್ತವನ್ನೇ ಹರಿದು ಬಂದಿತ್ತು.. ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಲಕ್ಷದ ಎರಡು ಸಾವಿರದ ಒಂಬೈನೂರು ರೂಪಾಯಿ ಬಂದಿತ್ತು.. ಆದರೆ ಹಣದ ವಿಚಾರ ಬಂದ ಕೂಡಲೇ ಇಬ್ಬರ ನಡುವಿನ ಸಂಬಂಧದ ನಡುವಿನ ನಂಬಿಕೆ ಹುಸಿಯಾಯ್ತು..

ವಿಜಯಲಕ್ಷ್ಮಿ ರಾತ್ರೋ ರಾತ್ರಿ ಯೋಗೇಶ್ ಅವರ ಆಶ್ರಮದಿಂದ ತಮ್ಮ ಅಕ್ಕನನ್ನು ಕರೆದುಕೊಂಡು ಹೊರ ಬಂದಿದ್ದಾರೆ.. ಮತ್ತೆ ಸಾಮಾಜಿ

ಕ ಜಾಲತಾಣ ದಲ್ಲಿ ಕಾಣಿಸಿಕೊಂಡ ನಟಿ ವಿಜಯಲಕ್ಷ್ಮಿ ಅವರು ನಾನು ಆ ಆಶ್ರಮದಿಂದ ಹೊರ ಬಂದಿದ್ದೇನೆ.. ಯೋಗೇಶ್ ಗೆ ಯಾರೂ ಹಣ ಕಳುಹಿಸಬೇಡಿ ಅಂತ ಹೇಳಿದ್ದಾರೆ.. ಜೊತೆಗೆ ಆತನಿಗೆ ನೀವು ಕೊಟ್ಟ ಹಣ ನನಗೆ ತಲುಪುವುದಿಲ್ಲ ಎಂದು ಹೇಳಿದ್ದಾರೆ.. ಒಟ್ಟಾರೆ ಕಷ್ಟಕಾಲಕ್ಕೆ ನಮ್ಮವರೆ ನಮಗಾಗದ ಕಾಲದಲ್ಲಿ, ಇನ್ನು ಹೊರಗಡೆಯವರು ಎಷ್ಟರ ಮಟ್ಟಿಗೆ ಸಹಾಯ ಮಾಡ್ತಾರೆ.. ಹಾಗಂತ ಎಲ್ಲ ಸಂಭಂದವೂ ಬರೀ ಬಂಡವಾಳದಿಂದ ಕೂಡಿರುತ್ತೆ ಅಂತ ಹೇಳ್ತಿಲ್ಲ… ಬೆರಳೆಣಿಕೆ ಸಂಭಂದಗಳು ನಂಬಿಕೆಯಿಂದ ಕೂಡಿರುತ್ವೆ ಅಂತಹ ಸಂಭಂದ ಕೊನೆ ತನಕ ಕಾಪಾಡಿಕೊಂಡ್ರೆ ಅದು ಒಂದ್ ತರ ಬೆಲೆ ಕಟ್ಟಲಾಗದ ಆಸ್ತಿ ಸಮಾನ.. ಅದ್ ಏನೇ ಆಗ್ಲಿ ವಿಜಯಲಕ್ಷ್ಮಿ ಜೀವನ ಮೊದಲಿನಂತಾಗ್ಲಿ.. ಅವರು ಮತ್ತೆ ಅವರಕ್ಕ ಬೇಗ ಗುಣಮುಖರಾಗಿ ಸುಖ ಜೀವನ ಸಾಗಿಸುಂತಾಗ್ಲಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •