ನಟ ರಘುವೀರ್‌ ಅವರು ಕನ್ನಡ ಚಿತ್ರರಂಗದಲ್ಲಿ ದುರುಂತ ನಾಯಕ ಎನಿಸಿಕೊಂಡಾತ. ಅವರು ಕಾಣಿಸಿಕೊಂಡಿದ್ದು, ಕೆಲವೇ ಚಿತ್ರಗಳಲ್ಲಿ ಮಾತ್ರ. ಅವರ ತಂದೆ ಅಂದಿನ ಕಾಲಕ್ಕೇ ಸಾಕಷ್ಟು ಶ್ರೀಮಂತರಾಗಿದ್ದರೂ ಅವರ ಇಷ್ಟಕ್ಕೆ ವಿರುದ್ಧವಾಗಿ ತನ್ನ ವಿವಾಹವಾದ ಎಂಬ ಒಂದೇ ಕಾರಣಕ್ಕಾಗಿ ಮಗನನ್ನು ಮತ್ತೆ ಮನೆಗೆ ಸೇರಿಸಲಿಲ್ಲ. ಆದರೆ ರಘುವೀರ್‌ ಅವರಿಗೆ ಸಿನಿಮಾದ ಹುಚ್ಚು ಹೆಚ್ಚಾಗಿದ್ದಿದ್ದರಿಂದ ತನ್ನ ಬದುಕನ್ನು ತಾನೇ ನಡೆಸಿಕೊಳ್ಳಲು ಮುಂದಾದರು.

ಆದರೆ ಅದೃಷ್ಟ ಅವರಿಗೆ ಕೈ ಕೊಟ್ಟಿತು. ತಾನು ಕೈ ಹಿಡಿದ ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿ ಕಣ್ಣು ಮುಚ್ಚಿದ್ದರು. ಈ ವೇಳೆಗೆ ಅವರ ಸ್ನೇಹಿತರು, ಬಂಧುಗಳು ಯಾರೂ ಅವರ ಜೊತೆಗೆ ನಿಲ್ಲಲಿಲ್ಲ. ಹಣವಿದ್ದಾಗ ಎಲ್ಲರೂ ಜೊತೆಗಿದ್ದು, ಹಣವಿಲ್ಲದಿದ್ದಾಗ ಯಾರೂ ಇಲ್ಲ ಎಂಬ ಸ್ಥಿತಿಯನ್ನು ಅವರು ಎದುರಿಸಬೇಕಾಯಿತು. ಇದಾದ ಬಳಿಕ ಅವರು ತೆಲುಗಿನ ನಟಿಯನ್ನು ಮತ್ತೊಮ್ಮೆ ವಿವಾಹ ಮಾಡಿಕೊಂಡು ಆಕೆಯ ಜೊತೆಗೆ ಸುಖವಾಗಿ ಸಂಸಾರ ನಡೆಸಿದರು.

 

ಇನ್ನು ರಘುವೀರ್‌ ಅವರ ಮಗಳ ಮದುವೆ ಸಮಾರಂಭ ಜರುಗಿದ್ದು, ಅವರ ವಿವಾಹ ಹೇಗೆ ನಡೆಯಿತು ಎಂಬುದರ ಬಗ್ಗೆ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ನೋಡಿ. ಇವರ ಜೇಷ್ಠ ಪುತ್ರಿ ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ. ಶ್ರೇಯಾ ಅವರು ತನ್ನ ತಾಯಿ ನಿಧನ ಹೊಂದಿದ ಬಳಿಕ ಅಜ್ಜ, ಅಜ್ಜಿಯ ಜೊತೆಯೇ ಉಳಿದುಕೊಂಡರು. ಅಲ್ಲದೇ, ತನ್ನ ವಿದ್ಯಾಭ್ಯಾಸ ಹಾಗೂ ಉದ್ಯೋಗ ಎಲ್ಲವನ್ನೂ ಚೆನ್ನೈನಲ್ಲೇ ಮುಗಿಸಿದರು.

 

 

ಈಗ ಅವರ ವಿವಾಹವು ತಮಿಳಿನ ಖ್ಯಾತ ನಿರ್ದೇಶಕ ಅಶ್ವಿನ್‌ ಅವರ ಜೊತೆಗೆ ಇತ್ತೀಚೆಗೆ ನೆರವೇರಿತು. ಅಶ್ವಿನ್‌ ಅವರು ತಮಿಳಿನ ಜನಪ್ರಿಯ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದರು.

 

ಇದಾದ ಬಳಿಕ ಅವರು ಸ್ವತಂತ್ರವಾಗಿ ಸಿನಿಮಾವೊಂದನ್ನು ನಿರ್ದೇಶನ ಕೂಡ ಮಾಡಿದ್ದಾರೆ. ನಟಿ ಸಿಂಧು ಅವರು ತೀರಿಕೊಂಡ ಬಳಿಕ ಸಿಂಧೂ ಅವರ ತಮ್ಮ ಮನೆಯಲ್ಲೇ ಶ್ರೇಯಾ ಅವರು ಬೆಳೆದರು.ಅಶ್ವಿನ್‌ ಅವರು ಕುಟುಂಬದ ಪರಿಚಯಿಸ್ಥರೇ ಆಗಿದ್ದರು.

 

 

ಹಾಗಾಗಿ ಚಿಕ್ಕಂದಿನಿಂದಲೂ ಅವರಿಬ್ಬರಿಗೂ ಪರಸ್ಪರ ಪರಿಚಯವಿತ್ತು. ಈಗ ಅವರು ವಿವಾಹ ಮಾಡಿಕೊಳ್ಳುವ ಮೂಲಕ ಸಂಬಂಧಿಗಳಾಗಿದ್ದಾರೆ. ಶ್ರೇಯಾ ಮತ್ತು ಅಶ್ವಿನ್‌ ದಂಪತಿಗಳಿಗೆ ಈಗ ಒಂದು ಮಗುವೂ ಇದೆ. ಈ ವಿವಾಹ ಸಮಾರಂಭಕ್ಕೆ ರಘುವೀರ್‌ ಅವರ ಸಂಬಂಧಿಕರು ಕೂಡ ಬೆಂಗಳೂರಿನಿಂದ ತೆರಳಿದ್ದರು.

 

 

ಶ್ರೇಯಾ ಅವರಿಗೆ ೧೬ ವರ್ಷ ತುಂಬುವ ವೇಳೆಗೆ ಅಶ್ವಿನ್‌ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ರಘುವೀರ್‌ ಅವರು ಕೂಡ ಅಶ್ವಿನ್‌ ಅವರನ್ನು ಭೇಟಿ ಮಾಡಿದ್ದರು. ಭೇಟಿ ಮಾಡುವುದಕ್ಕೂ ಮುನ್ನಾ ಪ್ರೀತಿ ವಿಚಾರ ರಘುವೀರ್‌ ಅವರಿಗೆ ತಿಳಿದಿತ್ತು. ಆದರೂ ಆಕೆಯನ್ನು ಆ ವಿಚಾರವಾಗಿ ಯಾವುದೇ ಪ್ರಶ್ನೆ ಮಾಡಿರಲಿಲ್ಲ.

ಅಶ್ವಿನ್‌ ಅವರು ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಜೀವರವಿ ಅವರ ಪುತ್ರ. ಪ್ರಸ್ತುತ ಶ್ರೇಯಾ ಹಾಗೂ ಅಶ್ವಿನ್‌ ಅವರು ಸುಖವಾಗಿ ಸಂಸಾರ ನಡೆಸಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •