ಆದರೆ ಹಿರಿಯರು ಮಚ್ಚೆಗಳಿದ್ದರೆ ಒಳ್ಳೆಯದು ಮತ್ತು ಮಚ್ಚೆಗಳು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತವೆ ಎಂದು ನಂಬಿದ್ದಾರೆ. ಹಲವು ಜ್ಯೋತಿಷಿಗಳೂ ಮಚ್ಚೆಯ ಸ್ಥಾನವನ್ನು ನೋಡಿ ಹಲವು ವಿಷಯಗಳನ್ನು ತಿಳಿಸಬಲ್ಲರು. ಕೆಲವರು ಈ ಮಚ್ಚೆಗಳು ಸಮೃದ್ಧಿ ಮತ್ತು ಐಶ್ವರ್ಯದ ಪ್ರತೀಕವೆಂದೂ ನಂಬುತ್ತಾರೆ. ಮಚ್ಚೆಗಳು ಭವಿಷ್ಯದ ಬಗ್ಗೆ ತಿಳಿಸುತ್ತವೆ ಎಂದೂ ನಂಬಲಾಗಿದೆ. ಒಂದು ವೇಳೆ ಬಲಗೆನ್ನೆಯ ಮೇಲೆ ಸ್ಪಷ್ಟ ವೃತ್ತಾಕಾರದ ಮತ್ತು ಗಾಢವರ್ಣದ ಮಚ್ಚೆ ಇದ್ದರೆ ಈ ವ್ಯಕ್ತಿ ತನ್ನ ವಿವಾಹದ ಬಳಿಕ ಶ್ರೀಮಂತನಾಗುವ ಯೋಗವಿದೆ.

ಒಂದು ವೇಳೆ ಹುಟ್ಟುಮಚ್ಚೆ ತುಟಿಯ ಮೇಲಿದ್ದರೆ ಇವರು ತಮ್ಮ ಜೀವನದಲ್ಲಿ ಸದಾ ಸಮೃದ್ಧಿ ಮತ್ತು ಧನವನ್ನು ಹೊಂದಿರುತ್ತಾರೆ. ಆದರೆ ಕೆಲವು ಮಾಹಿತಿಗಳ ಪ್ರಕಾರ ಮೇಲ್ತುಟಿಯಲ್ಲಿ ಮಚ್ಚೆ ಇದ್ದವರು ಸಾಮಾನ್ಯವಾಗಿ ಹಠಮಾರಿಗಳಾಗಿರುತ್ತಾರೆ. ಮೂಗಿನ ಮೇಲೆ ಅದರಲ್ಲೂ ವಿಶೇಷವಾಗಿ ಮೂಗಿನ ಬಲಹೊಳ್ಳೆಯ ಮೇಲೆ ಮಚ್ಚೆ ಇದ್ದವರು ಜೀವನದಲ್ಲಿ ನಿಯಮಿತ ಏಳಿಗೆ ಪಡೆಯುತ್ತಾ ಶ್ರೀಮಂತರಾಗುತ್ತಾರೆ. ಅಲ್ಲದೇ ಇವರು ಜಗತ್ತನ್ನೇ ಸುತ್ತುತ್ತಾರೆ. ವಿವಾಹದ ಬಳಿಕ ಇವರು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ.

ಪಾದದಲ್ಲಿ ಮಚ್ಚೆ ಇದ್ದವರು ಸದಾ ಸಂಚರಿಸುತ್ತಿದ್ದು ವಿಶ್ವ ಪರ್ಯಟಕರಾಗಿರುತ್ತಾರೆ. ಈ ಸಂಚಾರ ಕಾರ್ಯನಿಮಿತ್ತವಲ್ಲದೇ ಹವ್ಯಾಸಿ ಮತ್ತು ರಜಾದಿನಗಳ ಸುತ್ತಾಟವೇ ಆಗಿರುತ್ತದೆ. ಹಣೆಯ ಮಧ್ಯೆ ಅಂದರೆ ಶಿವನ ಮೂರನೆಯ ಕಣ್ಣು ಇರುವಲ್ಲಿ ಮಚ್ಚೆ ಇದ್ದರೆ ಇವರು ಜೀವನದಲ್ಲಿ ಬೇಗನೇ ಸ್ಥಿತವಂತರಾಗಿ ಹೆಚ್ಚಿನ ಪ್ರಯಾಣದ ಭಾಗ್ಯವನ್ನು ಪಡೆದಿರುತ್ತಾರೆ. ಇವರಿಗೆ ಸದಾ ಅಗತ್ಯಕ್ಕೂ ಹೆಚ್ಚಿನ ಆದಾಯವಿರುತ್ತದೆ. ಹಾಗೆಯೇ ಇವೆಲ್ಲ ಕೆಲವರ ನಂಬಿಕೆ ಮತ್ತು ಅಪನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •