ನಮಸ್ತೆ ಸ್ನೇಹಿತರೆ, ಸುರೇಶ್ ಮತ್ತು ಹರೀಶ್ ಎಂಬ ಗೆಳೆಯರು ಚೆನ್ನೈನ‌ ಒಂದು ಪ್ರತಿಷ್ಠಿತ  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.‌. ಇನ್ನೂ ಇವರು ತನ್ನ ಕುಟುಂಬವನ್ನು ಬಿಟ್ಟು ಚೆನ್ನೈನಲ್ಲಿ‌ ಒಂದು ರೂಮ್ ಮಾಡಿಕೊಂಡು ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರು. ದಿನನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಇವರು ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲೇ ರಾತ್ರಿ 11 ಗಂಟೆಯಾಗುತ್ತಿತ್ತು.. ಬಸ್ ಸ್ಟಾಪ್ ನಿಂದ ಸ್ವಲ್ಪ ದೂರ ನಡೆದುಕೊಂಡು ಬಂದು ಇವರು ತಮ್ಮ ರೂಮ್ ಗೆ ಸೇರಿಕೊಳ್ಳುತ್ತಿದ್ದರು. ಆ ದಾರಿಯಲ್ಲಿ ಮಂಗಳ ಮುಖಿಯರು ಕೂಡ ಹೆಚ್ಚಾಗಿದ್ದರು.. ದಿನ ನಿತ್ಯ ಇದೇ ದಾರಿಯಲ್ಲಿ ಬರುವ ಸುರೇಶ್ ಮತ್ತು ಹರೀಶ್ ಮಂಗಳ ಮುಖಿಯರಿಗೆ ಬೇರೆ ಕೆಲಸ ಇಲ್ವಾ, ದುಡಿದು ತಿನ್ನೊದಕ್ಕೆ ಏನು ಕಷ್ಟ ಎಂದು ಗೇ’ಲಿ ಮಾಡಿ ಮಾತನಾಡಿಕೊಳ್ಳುತ್ತಾ ಬರುತ್ತಿದ್ದರು.

ಇನ್ನು ಒಂದು ದಿನ ಸುರೇಶ್ ಮತ್ತು ಹರೀಶ್ ಅವರಿಗೆ ಆಪಿಸ್ ನಲ್ಲಿ 20 ಸಾವಿರ ಸಂಬಳವನ್ನು ಕೊಡುತ್ತಾರೆ.. ಆದರೆ ಅಂದು ಹರೀಶ್ ಪರ್ಸ್ ತರದೇ ಇದ್ದ ಕಾರಣ ಸುರೇಶ್ ಪರ್ಸನಲ್ಲಿ ಹಣ ಇಟ್ಟುಕೊಳ್ಳುವಂತೆ ಹೇಳುತ್ತಾನೆ. ಆನಂತರ ಪ್ರತಿದಿನದಂತೆ ಇಬ್ಬರು ಬಸ್ ಹತ್ತಿ ತಮ್ಮ ರೂಮಿನ ಕಡೆಗೆ ಹೊರಡುತ್ತಾರೆ.. ಆ ದಿನವೂ ಕೂಡ ಮಂಗಳ ಮುಖಿಯರು ಬಸ್ ಸ್ಟಾಪ್ ನಲ್ಲಿ ನಿಂತಿದ್ದರು. ಇವರಿಬ್ಬರು ಅವರನ್ನು ಬೈದುಕೊಳ್ಳುತ್ತಾ ರೂಮಿಗೆ ಸೇರಿಕೊಳ್ಳುತ್ತಾರೆ.. ರೂಮಿಗೆ ಬಂದ ತಕ್ಷಣ ಪರ್ಸ್ ನಲ್ಲಿದ್ದ ಹಣವನ್ನು ಎತ್ತಿಡೋಣ ಎಂದು ಜೋಬಿಗೆ ಕೈ ಹಾಕಿದ ಸುರೇಶ್ ಗೆ ಶಾ’ಕ್, ಏಕೆಂದರೆ ಜೋಬಿನಲ್ಲಿ ಪರ್ಸ್ ಇರಲಿಲ್ಲ.. ಬರುವ ದಾರಿಯಲ್ಲೇ ಪರ್ಸ್ ಅನ್ನು ಕಳೆದುಕೊಂಡಿರುತ್ತಾರೆ.

ನಂತರ ಗಾ’ಬರಿಯಿಂದಲೇ ಬಂದ ದಾರಿಯಲ್ಲಿ ಪರ್ಸನ್ನು ಹುಡುಕುತ್ತಾ ಹೋಗುತ್ತಾರೆ, ಆದರೆ ಎಷ್ಟೇ ಹುಡುಕಿದರು ಹಣವಿದ್ದ ಪರ್ಸ್ ಇವರಿಗೆ ಸಿಗಲೇ ಇಲ್ಲಾ.. ಮುಂದೇನು ಮಾಡುವುದು ಎಂದು ದುಃಖದಲ್ಲೇ ರೂಮಿಗೆ ಬಂದು ಮಲಗಿಕೊಂಡರು. ಮರುದಿನ ಇವರಿಬ್ಬರು ಹಣದ ಚಿಂತೆಯಲ್ಲೇ ಆಫಿಸ್ ಗೆ ಹೋಗಿ ತಮ್ಮ ಕೆಲಸವನ್ನು ಶುರು ಮಾಡುತ್ತಾರೆ. ಇನ್ನೂ ಕೆಲವು ಗಂಟೆಗಳ ಬಳಿಕ ಸುರೇಶ್ ನಂಬರ್ ಗೆ ಒಂದು ಪೋನ್ ಕಾಲ್ ಬರುತ್ತದೆ.. ಆಗ ಒಬ್ಬ ಮಹಿಳೆ ನಿಮ್ಮ ಹಣದ ಪರ್ಸ್ ರಾತ್ರಿ ನನಗೆ ಸಿಕ್ಕಿದೆ ಒಂದು ಹೋಟೆಲ್ ನ ಅಡ್ರೆಸ್ ಕೊಡುತ್ತೇನೆ ಅಲ್ಲಿಗೆ ಬಂದು ನಿಮ್ಮ ಪರ್ಸ್ ತೆಗೆದುಕೊಳ್ಳಿ ಎಂದು ಹೇಳಿ ಪೋನ್ ಕ’ಟ್ ಮಾಡುತ್ತಾರೆ.

ಕೂಡಲೇ ಹರೀಶ್ ಮತ್ತು ಸುರೇಶ್ ಆ ಹೋಟೆಲ್ ಬಳಿ ಹೋಗಿ ನೋಡುತ್ತಾರೆ ಅಲ್ಲಿ ನಾಲ್ಕು ಜನ ಗಂಡಸರು ಮತ್ತು ಒಬ್ಬ ಮಂಗಳ ಮುಖಿ ಇರುತ್ತಾರೆ.. ಮತ್ತೆ ಆ ಮಹಿಳೆಗೆ ಕಾಲ್ ಮಾಡಿ ಮೇಡಮ್ ನೀವು ಹೋಟೆಲ್ ಬಳಿ ಕಾಣಿಸುತ್ತಿಲ್ಲ ನಾವು ಇಲ್ಲೇ ಇದ್ದೇವೆ ಎಂದು ಹೇಳುತ್ತಾನೆ. ಹಾಗ ಅಲ್ಲಿಗೆ ಬಂದ ಮಂಗಳಮು’ಖಿ ತಗೋಳಿ ನಿಮ್ಮ ಪರ್ಸ್ ಎಲ್ಲಾ ಸರಿ ಇದೆಯಾ ನೋಡಿಕೊಳ್ಳಿ ಎಂದು ಹೇಳುತ್ತಾಳೆ.. ಸುರೇಶ್ ಆ ಪರ್ಸ್ ಅನ್ನು ಚೆಕ್ ಮಾಡಿ ನೋಡಿದಾಗ ಇಬ್ಬರ ಹಣ ಸುರಕ್ಷಿತವಾಗಿ ಇರುತ್ತದೆ.. ನಂತರ ಈ ಮಂಗಳಮು’ಖಿ ಎಲ್ಲಾ ಸರಿಯಾಗಿ ಇದೆ ಅಲ್ವಾ ಎಂದು ಅಲ್ಲಿಂದ ಹೊರಟು ಹೋಗತ್ತಾರೆ.

ಆದರೆ ಇವರಿಬ್ಬರಿಗೆ ಮುಖಕ್ಕೆ ಹೊ’ಡೆಯುವ ರೀತಿ ಆಗುತ್ತದೆ. ಏಕೆಂದರೆ ಇವರಿಬ್ಬರು ದಿನನಿತ್ಯ ದಾರಿಯಲ್ಲಿ ಹೋಗುವಾಗ ಮಂಗಳ ಮುಖಿಯರನ್ನು ಗೇಲಿ ಮಾಡಿಕೊಂಡು ಹೋಗುತ್ತಾರೆ.. ಆದರೆ ಈ ದಿನ ಆ ಮಂಗಳಮುಖಿಯಿಂದಲೇ ಇವರ ಹಣ ಸಿಕ್ಕಿದೆ.. ಅದಕ್ಕೆ ಹೇಳುವುದು ಸ್ನೇಹಿತರೆ ಯಾರನ್ನು ಕೂಡ ತಿರಸ್ಕಾರ ಮಾಡ್ಬಾರ್ದು ಅಂತ.. ಅವರು ಕೂಡ ಮನುಷ್ಯರೇ, ಅವರಿಗೆ ರೆಸ್ಪೆಕ್ಟ್ ಕೊಡಿ.. ಅವರಿಗೂ ಕೂಡ ಮಾನವೀಯತೆ ಅನ್ನೋದು ಇದೆ ಅನ್ನೊದಕ್ಕೆ ಈ ಘ’ಟನೆ ಉದಾಹರಣೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •