ಈ ಲೇಖನ ಓದಿದರೆ “ಅಗರ್ ಕಿಸ್ಸಿ ಚೀಜ್ ಕೋ ದಿಲ್ ಸೆ ಚಾವೊ ತೋ ಪುರಿ ಕಯನತ್ ಉಸ್ಸೆ ಮಿಲೇನ್ ಮೇ ಜುತ್ ಜತಿ ಹೈ” ಎಂಬ ಎಸ್‌ ಆರ್‌ ಕೆ ಅವರ ಅದ್ಭುತ ಡೈಲಾಗ್ ನೆನಪಿಗೆ ಬರುತ್ತದೆ. (ನೀವು ನಿಜವಾಗಿಯೂ ಹೃದಯದಿಂದ ಏನನ್ನಾದರೂ ಬಯಸಿದರೆ … ಅದನ್ನು ಪಡೆಯಲು ಇಡೀ ವಿಶ್ವವೇ ನಿಮ್ಮ ಜೊತೆ ಕೆಲಸ ಮಾಡುತ್ತದೆ) ಎಂಬುದು ಇದರರ್ಥ.  ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾನ್ಯಾ ಸಿಂಗ್ ಎಂಬುವವರು ಇತ್ತೀಚೆಗೆ ಮಿಸ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಕಿರೀಟವನ್ನು ಧರಿಸಿದರು. ಇದೀಗ ಅವರ ಆಕೆಯ ಕಥೆ, ಇಚ್ಛಾಶಕ್ತಿ ಕೆಲವರಿಗೆ ಮಾದರಿಯಾಗಲಿದೆ.

Miss-India

ಉತ್ತರ ಪ್ರದೇಶದ ಕುಶಿನಗರದಲ್ಲಿ ಜನಿಸಿದ ಮಾನ್ಯಾ ಓಂಪ್ರಕಾಶ್ ಸಿಂಗ್ ಆಟೋರಿಕ್ಷಾ ಚಾಲಕನ ಮಗಳು. ಅಂದಹಾಗೆ ಮಾನ್ಯಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳೊಂದಿಗೆ ಸುದೀರ್ಘವಾದ ಸ್ಪೂರ್ತಿದಾಯಕ ಟಿಪ್ಪಣಿಯನ್ನು ಬರೆದುಕೊಂಡಿದ್ದಾರೆ. ತನ್ನ ತಾಯಿಯ ಬಗ್ಗೆ ಮಾತನಾಡಿದ ಅವರು, ಅಧ್ಯಯನವನ್ನು ಪೂರ್ಣಗೊಳಿಸಲು ತಾಯಿಯ ಆಭರಣಗಳನ್ನು ಅಡವಿಟ್ಟಿರುವುದಾಗಿ ತಿಳಿಸಿದ್ದಾರೆ.

ಮಾನ್ಯಾ ಸಿಂಗ್ ತಮ್ಮ ಇನ್ಸ್ಟಾಗ್ರಾಮ್’ನಲ್ಲಿ ಶೇರ್ ಮಾಡಿರುವ ಪೋಸ್ಟ್ ಸಾರಾಂಶ ಹೀಗಿದೆ… “ ನಾನು ಆಹಾರ ಮತ್ತು ನಿದ್ರೆ ಇಲ್ಲದೆ ಹಲವಾರು ರಾತ್ರಿಗಳನ್ನು ಕಳೆದಿದ್ದೇನೆ. ಅನೇಕ ಮಧ್ಯಾಹ್ನಗಳನ್ನು ಮೈಲಿಗಟ್ಟಲೆ ನಡೆದು ಕಳೆದಿದ್ದೇನೆ. ಹದಿಹರೆಯದಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಬೇಕಾಯಿತು. ನನಗೆ ಶಾಲೆಗೆ ಹೋಗಲು ಅವಕಾಶವಿರಲಿಲ್ಲ. ನಾನು ಪುಸ್ತಕಗಳಿಗಾಗಿ ಹಾತೊರೆಯುತ್ತಿದ್ದೆ, ಆದರೆ ಆ ಸಮಯದಲ್ಲಿ ಅದೃಷ್ಟ ನನ್ನ ಪರವಾಗಿರಲಿಲ್ಲ. ಅಂತಿಮವಾಗಿ, ನನ್ನ ಹೆತ್ತವರು ನಾನು ಪದವಿ ಪಡೆಯಲು, ಪರೀಕ್ಷಾ ಶುಲ್ಕವನ್ನು ಪಾವತಿಸಲು ತಮ್ಮ ಬಳಿಯಿದ್ದ ಆಭರಣಗಳನ್ನು ಅಡವಿಟ್ಟರು. ನನ್ನ ತಾಯಿ ಓದಿಸಲು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ.

manya-singh

ಮಾನ್ಯಾ ಅವರೊಂದಿಗೆ, ಮಾನಿಕಾ ಶಿಯೋಕಂದ್ ವಿಎಲ್‌ಸಿಸಿ ಫೆಮಿನಾ ಮಿಸ್ ಗ್ರ್ಯಾಂಡ್ ಇಂಡಿಯಾ 2020 ಮತ್ತು ಮಾನಸ ವಾರಣಾಸಿ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಕಿರೀಟವನ್ನು ಪಡೆದರು. 2017ರಲ್ಲಿ ಮಿಸ್ ವರ್ಲ್ಡ್  ಆದ ಮಾನುಶಿ ಚಿಲ್ಲರ್ ಮಿಸ್ ಇಂಡಿಯಾ ರನ್ನರ್ ಅಪ್ ಮಾನ್ಯಾ ಸಿಂಗ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮಾನುಶಿ ಚಿಲ್ಲರ್ ಅವರು 2017 ರಲ್ಲಿ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ರಾಷ್ಟ್ರಕ್ಕೆ  ಕೀರ್ತಿ ತಂದರು. ಇದೀಗ ಅವರು ಮಾನ್ಯಾ ಅವರ ಸಾಧನೆ ಮತ್ತು ಗೆಲುವನ್ನು ಶ್ಲಾಘಿಸಿದ್ದಾರೆ. “ನಿಮಗೆ ಹೃತ್ಪೂರ್ವಕ ಅಭಿನಂದನೆಗಳು, ನಾವು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ” ಎಂದು ಅವರು ಬರೆದುಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •