ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಟಾಂಗ್ ನೀಡುವ ಮೂಲಕ ಪ್ರಧಾನಿ ಮೋದಿಯವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯನವರು ಹೇಳಿರುವುದಾದರೂ ಏನು ನೋಡೋಣ ಬನ್ನಿ.? ಗ್ಯಾಸ್ ಬೆಲೆ 440 ರೂಪಾಯಿ. ನರೇಂದ್ರ ಮೋದಿಜಿ ಇದೇನಾ ಅಚ್ಛೇ ದಿನ್ ಅಂದರೆ.? ಇದೇನಾ ಅಚ್ಚೇ ದಿನ್.! ನೀವು ಮಹಿಳೆಯರು ಹೈ… ೮೦೦-೯೦೦ ರೂಪಾಯಿ ಗ್ಯಾಸ್ ಬೆಲೆ ಕೊಡಲು ಸಿದ್ಧರಾಗಿದ್ದೀರಾ. ಮೋದಿ, ಮೋದಿ ಯುವಕರು ಅಲ್ಲಿ ಮೋದಿ ಕೆಲಸ ಕೊಡಿಸಲಿದ್ದಾರೆ. ಉದ್ಯೋಗ ನೀಡಲಿದ್ದಾರೆ. ಮೋದಿ, ಮೋದಿ ಎಂದು ಹೋಗುತ್ತಿದ್ದಾರೆ.

ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇನೆ. 5 ವರ್ಷದಲ್ಲಿ ಹತ್ತು ಕೋಟಿ ಉದ್ಯೋಗ ಸೃಷ್ಟಿ ಮಾಡಲಿದ್ದೇನೆ ಎಂದು ಇದೇ ನರೇಂದ್ರ ಮೋದಿ ಅವರು 2014 ರಲ್ಲಿ ಇಡೀ ದೇಶದ ಜನರಿಗೆ ಭರವಸೆ ಕೊಟ್ಟರು. ಹತ್ತು ಕೋಟಿ ಬೇಡ, ಇರುವ ಉದ್ಯೋಗಗಳಾದರೂ ಉಳಿದುಕೊಂಡಿದೆಯಾ.?

 

ಕೊರೊನ ರೋಗ ಬಂತು. ಕರೋನ ರೋಗ ವಾಸಿ ಮಾಡಲಿಕ್ಕೆ ಏನೇನು ಕ್ರಮ ಬೇಕೋ ಅದನ್ನು ತೆಗೆದುಕೊಳ್ಳುವುದು ಬಿಟ್ಟು. ಚಪ್ಪಾಳೆ ತಟ್ಟಿ, ದೀಪ ಹಚ್ಚಿ, ಗಂಟೆ ಬಾರಿಸಿ ಇಂಥ ಪ್ರಧಾನಿ ಯಾವನಾದರೂ ಬಂದಿದ್ದಾನಾ ಇಲ್ಲಿಯವರೆಗೂ.? ದೇಶದಲ್ಲಿ ಪ್ರಧಾನಮಂತ್ರಿ ಆಗಲಿಕ್ಕೆ ನಾಲಾಯಕ್ಕು ಅಂತ ಮಾತನ್ನು ಅವರಿಗೆ ಹೇಳಲು ಬಯಸುತ್ತೇನೆ. ಪಾಪ ಉದ್ಯೋಗ ಕೇಳಿದ ಯುವಕರು ಈಗ ಮೋದಿ, ಮೋದಿ ಎನ್ನುತ್ತಿದ್ದಾರಲ್ಲ, ಆ ಹುಡುಗರಿಗೆ ಇಂದು ಉದ್ಯೋಗ ಕೇಳಿದರೆ ಹೋಗಿ ಪಕೋಡ ಮಾರಿಕೋ ಹೋಗಿ ಎನ್ನುತ್ತಾರೆ. ತಯಾರ ನೀವು ಪಕೋಡ ಮಾರೋದಿಕ್ಕೆ.?

ಇವತ್ತು ಈ ದೇಶದ ಎಕನಾಮಿ ಹಾಳಾಗಿ ಹೋಗಿದೆ. ಯಡಿಯೂರಪ್ಪ ನರೇಂದ್ರ ಮೋದಿ ಸೇರಿಕೊಂಡು ಕರ್ನಾಟಕವನ್ನು ಹಾಳು ಮಾಡಿದ್ದಾರೆ. ಕರ್ನಾಟಕದಿಂದ 1 ವರ್ಷಕ್ಕೆ ಕೇಂದ್ರಕ್ಕೆ ಎಷ್ಟು ಹಣ ಹೋಗಲಿದೆ ಗೊತ್ತಾ.? ತೆರಿಗೆಯಾಗಿ ಹೋಗುತ್ತದೆ ನಿಮಗೆ ಗೊತ್ತಿದೆಯಾ.? ಎರಡೂವರೆ ಲಕ್ಷ ಕೋಟಿ. ಅದರಲ್ಲಿ ನಮಗೆ ಬರುವುದು ಕೇವಲ 34%ಅಷ್ಟೇ.! ಮಿಕ್ಕಿದ್ದು ಅವರೇ ಲಪಟಾಯಿಸುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •