Millet

ರಾಗಿ ಮುದ್ದೆ ತಿನ್ನುವುದರಿಂದ ಆಗುವ 9 ಪ್ರಯೋಜನಗಳು,ನೋಡಿ…

Health/ಆರೋಗ್ಯ Home Kannada News/ಸುದ್ದಿಗಳು

ಹಾಯ್ ಫ್ರೆಂಡ್ಸ್ ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಯಾಕೆಂದರೆ ಅದು ರುಚಿ ಸಪ್ಪುಗೆ ಇರುವುದರಿಂದ. ಆದರೆ ರಾಗಿ ಮುದ್ದೆಯ ಈ ಪ್ರಯೋಜನಗಳನ್ನು ಕೇಳಿದ ಮೇಲೆ ರಾಗಿ ಇಷ್ಟ ಪಡದೇ ಇರೋದೇ ಇಲ್ಲ ಅಂದ್ರು ತಪ್ಪಿಲ್ಲ. ರಾಗಿ ನಮ್ಮ ದೇಹದಲ್ಲಿ ಉಂಟು ಮಾಡುವ ಜಾದು ನಿಮಗೆ ಗೊತ್ತಾಯ್ತು ಅಂದ್ರೆ ನಾಳೆಯಿಂದಲೇ ರಾಗಿ ಉಣ್ಣುವುದನ್ನ ಆರಂಭಿಸುತ್ತೀರಿ. ಹೆಚ್ಚಾಗಿ ರಾಗಿಯನ್ನ ಅಗೆಯುವುದಕ್ಕಿಂತ ನುಂಗುವುದೇ ವಾಡಿಕೆ. ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ಕಷಾಯ ಹಾಗೆ ರಾಗಿ ರೊಟ್ಟಿ ಹೀಗೆ ಅನೇಕ ಬಗೆಯ recipeಗಳು ರಾಗಿಯಿಂದ ತಯಾರಿಸಬಹುದು.

ಈ ಪ್ರತಿಯೊಂದು ಆಹಾರ ಪದಾರ್ಥವು ದೇಹಕ್ಕೆ ತಂಪನ್ನ ಮತ್ತು ಆರೋಗ್ಯವನ್ನ ನೀಡುವಂತಹವು. ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾಗಿರವುದು. ಅದಕ್ಕೆ ಇರುವ ಘನತೆ ಬೇರೆ ಧಾನ್ಯಗಳಿಗೆ ಇಲ್ಲ ಅಂದ್ರು ತಪ್ಪಿಲ್ಲ. ದೇಹದ ತೂಕವನ್ನ ಇಳಿಸುವ ಯೋಚನೆ ಇದ್ದೋರು ರಾಗಿಯನ್ನ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಸಸ್ಯಾಹಾರಿಗಳಿಗೆ protein ಶ್ರೀಮಂತವಾಗಿರುವ ರಾಗಿ ದೇಹದ ತೂಕವನ್ನ ಇಳಿಸುವವರಿಗೆ ವರದಾನವೇ ಸರಿ. ಇನ್ನು ದಕ್ಷಿಣ ಭಾರತ ರಾಗಿ ಮುದ್ದೆ ತುಂಬಾ ಜನಪ್ರಿಯ. ಅದರಲ್ಲೂ ಕರ್ನಾಟಕದಲ್ಲಂತೂ ಪ್ರತಿದಿನ ರಾಗಿ ಮುದ್ದೆಯನ್ನ ತಿಂದ್ರೆ ದೈನಂದಿನ ಕಾಯಕವನ್ನ ಆರಂಭಿಸುವವರು ಬಹಳಷ್ಟು ಜನ.

ರಾಗಿ ಮುದ್ದೆಯ ಆರೋಗ್ಯದ ಬಗ್ಗೆ ನಿಮಗೆ ತಿಳಿದರೆ ರಾಗಿ ಮುದ್ದೆಯ ಸೇವನೆಯಿಂದ ಒದಗುವ ಈ ಪ್ರಯೋಜನಗಳನ್ನ ನೋಡಿದ್ರೆ ನೀವೇ ಆಶ್ಚರ್ಯ ಪಡ್ತಿರ. ಮೊದಲನೇದು ದೇಹದ ಕೊಬ್ಬನ್ನ ಹಾಗು ತೂಕವನ್ನ ಇಳಿಸುವಲ್ಲಿ ಇದು ಸಹಾಯಕಾರಿ. ಹೆಚ್ಚಿನಕೊಬ್ಬನ್ನ ಹಾಗು ತೂಕವನ್ನ ಕರಗಿಸುವ ಯೋಚನೆ ನಿಮ್ಮದಾಗಿದ್ದರೆ ರಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಸೇವಿಸಿಕೊಳ್ಳಿ. ರಾಗಿಯಲ್ಲಿರುವ amino acid dry fruit fun ಹಸಿವನ್ನ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇನ್ನು ಎರಡನೆಯದಾಗಿ ಮೂಳೆಗಳಿಗೆ ಉತ್ತಮ.

ಇದು ರಾಗಿಯ ಮುದ್ದೆ ಇನ್ನೊಂದು ಪರಿಣಾಮಕಾರ ಪ್ರಯೋಜನ. ನಿಮ್ಮ ಮೂಳೆಗಳನ್ನ ಬಲಪಡಿಸುವ ಶಕ್ತಿಯನ್ನ ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ calcium ಮತ್ತು vitamin D ಇದ್ದು ಮಕ್ಕಳಿಗೂ ಹಾಗು ವೃದ್ಧರಿಗೆ ಅವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನ ಇದು ನಿಸ್ಸಂದೇಹವಾಗಿ ಎಂದು ಹೇಳಲಾಗುತ್ತಿದೆ. ಇನ್ನು ಮೂರನೆಯದು ಮಧುಮೇಹಿಗಳಿಗೆ ಇದು ಸೂಕ್ತ. ಆಹಾರ ಮಧುಮೇಹದಿಂದ ನೀವು ಬಳಲುತ್ತಿದ್ದಿರಾ ಹಾಗಾದರೆ ನಿಮಗೆ ಸೇವಿಸಲು ಇದೊಂದು ಪರಿಪೂರ್ಣ ಆಹಾರ ಅಂತಹೇಳಬಹುದು. ಮಧುಮೇಹದ ಮತ್ತು ಜೀರ್ಣಾಂಗ ವ್ಯೂಹದ ಅಸ್ವಸ್ಥತೆಗಳೇ ಅಪಾಯದಿಂದ ರಾಗಿ ಮುದ್ದೆ ಕಡಿಮೆ ಮಾಡುತ್ತದೆ ನಿವಾರಿಸುತ್ತದೆ.

ಇನ್ನು ನಾಲ್ಕನೆಯದು cholesterol ಮಟ್ಟವನ್ನು ಇದು ಕಡಿಮೆ ಮಾಡುತ್ತದೆ. ರಾಗಿಯಲ್ಲಿರುವ amino acid licitin ಹಾಗು methinine ನಿಮ್ಮ ಜೀರ್ಣಾಂಗ ವಿವಾಹದಲ್ಲಿರುವ ಹೆಚ್ಚುವರಿ ಕೊಬ್ಬ ಕೆಳಮಟ್ಟಕ್ಕೆ ತರುವ ಮೂಲಕ ನಿಮ್ಮ cholesterol ಮಟ್ಟವನ್ನ ಕಡಿಮೆ ಮಾಡುತ್ತದೆ. ಇನ್ನು ಐದನೇದು ನೀವು anemia ದಿಂದ ಬಳಲುತ್ತಾ ಇದ್ರೆ ನಿಮ್ಮ ದೇಹಕ್ಕೆ ಅಗತ್ಯವಿರುವ ನೈಸರ್ಗಿಕ iron ಅನ್ನ ಇದು ನೀಡುತ್ತದೆ. ಇನ್ನು ಆರನೇದು ರಾಗಿಗಿರುವ ಮತ್ತೊಂದು ಮಹತ್ವದ ಗುಣ ಅಂದ್ರೆ ನಿಮಗೆ relaxation ಕೊಡೋದು.

ಒತ್ತಡಪೂರ್ಣ ಜೀವನದಿಂದ ಮುಕ್ತಿ ಸಿಗಲು ನಿಮ್ಮ ಪತ್ಯದಲ್ಲಿ ಸೇರಿಸಲೇಬೇಕಾದ ಉತ್ತಮವಾದ ಆಹಾರ ರಾಗಿ ಮುದ್ದೆ. ಇನ್ನು ಏಳನೇದು ದೇಹಕ್ಕೆ ತಂಪನ್ನ ನೀಡುತ್ತದೆ. ಬೇಸಿಗೆ ಸಮಯದಲ್ಲಿ ಇದನ್ನ ಸೇವಿಸೋದ್ರಿಂದ ದೇಹ ತಂಪಾಗಿ ಇಡೋದೇ ಅಲ್ಲದೆ ದೇಹಕ್ಕೆ ಅಗತ್ಯವಾಗುವ ಶಕ್ತಿಯನ್ನ ಇದು ಒದಗಿಸುತ್ತದೆ. ಇನ್ನು ಎಂಟನೆಯದು ಸದೃಢತೆಗೆ ಮತ್ತೊಂದು ಹೆಸರು ರಾಗಿ.

Ragi is farmers' staple turned city superfood | Deccan Herald

ಮುದ್ದೆ ನಿಮ್ಮ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನ ವೃದ್ಧಿಸಲು ರಾಗಿ ಮುದ್ದೆಯನ್ನ ನೀವು ಆಯ್ಕೆ ಮಾಡಿಕೊಂಡರೆ ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿ ಇಡುತ್ತದೆ. ಇನ್ನು ಒಂಬತ್ತನೆಯದ್ದು ಮಲಬದ್ಧತೆ ಕೂಡ. ಇದು ಉಪಯೋಗಕಾರಿ ರಾಗಿ ಮುದ್ದೆಯಲ್ಲಿರುವ fiber ಗುಣ ಮಲಬದ್ಧತೆಗೆ ಸಹಾಯಕಾರಿ. ಈ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ. ಧನ್ಯವಾದಗಳು

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...