ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದ ನಂತರ ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಜೋ ಬಿಡನ್ ಟ್ರಂಪ್ ರವರನ್ನ ಭಾರೀ ಅಂತರದಿಂದ ಸೋಲಿಸಿದ್ದಾರೆ. ಚುನಾವಣೆಯಲ್ಲಿ ಸೋಲಿನ ಹೊರತಾಗಿಯೂ, ಅದನ್ನು ಸ್ವೀಕರಿಸಲು ಟ್ರಂಪ್ ಸಿದ್ಧರಿರಲಿಲ್ಲ. ಅವರು ಚುನಾವಣೆಯಲ್ಲಿ ರಿಗ್ಗಿಂಗ್ ಆರೋಪಗಳನ್ನು ಸಹ ಮಾಡಿದ್ದಾರೆ. ಈಗ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೆಲಾನಿಯಾ ಟ್ರಂಪ್ ಅವರ ಮಾಜಿ ಸಹಾಯಕರನ್ನು ಉಲ್ಲೇಖಿಸಿ ಮಾಧ್ಯಮ ವರದಿಯಲ್ಲಿ, ಅಧ್ಯಕ್ಷೀಯ ಚುನಾವಣೆಯ ಸೋಲಿನ ನಂತರ ತಾನು ಈಗ ಡೊನಾಲ್ಡ್ ಟ್ರಂಪ್ ಅವರನ್ನು ತೊರೆಯಬಹುದು ಎಂದು ಹೇಳಿದ್ದಾರೆ.

ಡೈಲಿಮೇಲ್‌ನ ಮೀಡಿಯಾ ರಿಪೋರ್ಟ್ಸ್ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಮಾಜಿ ರಾಜಕೀಯ ಸಹಾಯಕ ಒಮರೋಸಾ ಮನಿಗಾಲ್ಟ್ ನ್ಯೂಮನ್ ಅವರು ಟ್ರಂಪ್ ಮತ್ತು ಮಿಲೇನಿಯಾ ಅವರ 15 ವರ್ಷಗಳ ವಿವಾಹ ಬಂಧವು ಈಗ ಕೊನೆಗೊಂಡಿದೆ ಎಂದು ಹೇಳಿದ್ದಾರೆ. ಮಿಲೇನಿಯಾ ಈಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಅವರು ಹೇಳುತ್ತಾರೆ. ಟ್ರಂಪ್ ವೈಟ್ ಹೌಸ್ ನಿಂದ ಹೊರಬಂದ ಕೂಡಲೇ ಮಿಲೇನಿಯಾ ಅವರನ್ನು ವಿಚ್ಛೇದನ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಮ್ಯಾನಿಗಾಲ್ಟ್ ಪ್ರಕಾರ, ಮಿಲೇನಿಯಾ ಈಗ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳಲು ಒಂದು ಮಾರ್ಗವನ್ನು ಹುಡುಕುತ್ತಿದ್ದಾರಂತೆ.

ಮದುವೆಯಾದಾಗಿನಿಂದ ಮೆಲಾನಿಯಾ ಟ್ರಂಪ್ ಅವರೊಂದಿಗೆ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮಿಲೇನಿಯಾ ಟ್ರಂಪ್ ಅವರ ಮಾಜಿ ಸಹೋದ್ಯೋಗಿ ಸ್ಟೆಫನಿ ವೋಲ್ಕಾಫ್ ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅವರು ತಮ್ಮ ಮಗ ಬ್ಯಾರನ್ ಜೊತೆಗೆ ಟ್ರಂಪ್ ಅವರ ಆಸ್ತಿಯಲ್ಲಿ ಸಮಾನ ಪಾಲನ್ನು ಕೋರಿದ್ದಾರೆ. ವೈಟ್ ಹೌಸ್ ನಲ್ಲಿ ಟ್ರಂಪ್ ಮತ್ತು ಮಿಲೇನಿಯಾ ಅವರು ಮಲಗುವ ಕೋಣೆಗಳು ಕೂಡ ಬೇರೆ ಬೇರೆ ಆಗಿವೆ ಎಂದು ವೋಲ್ಕಾಫ್ ಹೇಳಿಕೊಂಡಿದ್ದಾರೆ.

ಮಿಲೇನಿಯಾ ಟ್ರಂಪ್ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಉತ್ತಮ ಸಂಬಂಧವಿದೆ ಎಂದು ಮಾತನಾಡುತ್ತಿದ್ದರು. ಇಬ್ಬರೂ ಜನವರಿ 22, 2005 ರಂದು ವಿವಾಹವಾದರು. ಮಿಲೇನಿಯಾ ಡೊನಾಲ್ಡ್ ಟ್ರಂಪ್ ಅವರ ಮೂರನೇ ಪತ್ನಿಯಾಗಿದ್ದಾರೆ.

ಟ್ರಂಪ್ ಸೋತರೂ ಮತ್ತೆ ಆಗಲಿದ್ದಾರೆ ಅಮೇರಿಕಾದ ಅಧ್ಯಕ್ಷ?

ಅಮೆರಿಕದಲ್ಲಿ ಬಿರುಸಿನ ಮುಖಾಮುಖಿಯ ಬಳಿಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ‘ಜೋ ಬಿಡನ್’ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದಾರೆ. ಜೋ ಬಿಡನ್ ಅಮೆರಿಕದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಮತ್ತು ಕ್ಯಾಲಿಫೋರ್ನಿಯಾದ ಸೆನೆಟರ್ ‘ಕಮಲಾ ಹ್ಯಾರಿಸ್’ ಯುಎಸ್ ಉಪಾಧ್ಯಕ್ಷ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

Millenia Trump

ಕಾನೂನಾತ್ಮಕ ಹೋರಾಟ ನಡೆಸುತ್ತೇನೆ ಎಂದ ಟ್ರಂಪ್

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಲನ್ನ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬಿಡೆನ್ ತಾವು ಗೆಲುವು ಸಾಧಿಸಿದ್ದೇನೆ ಅಂತ ತಪ್ಪಾಗಿ ಹೇಳಿಕೊಳ್ಳಬಾರದು ಎಂದು ಹೇಳಿದರು. ಈ ರೀತಿ ನಾನೂ ಹೇಳಿಕೊಳ್ಳಬಹುದು. ಈ ಚುನಾವಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ನಾನು ಸೋಮವಾರ ಕಾನೂನು ಕ್ರಮಗಳನ್ನು ಪ್ರಾರಂಭಿಸಲಿದ್ದೇನೆ ಎಂದಿದ್ದಾರೆ.

ಟ್ರಂಪ್ ಮಾಡಿದ್ದ ಟ್ವೀಟ್‌ನ್ನ ತೆಗೆದುಹಾಕಿದ ಟ್ವಿಟ್ಟರ್

ಇದಕ್ಕೂ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡಿ ಚುನಾವಣೆಯಲ್ಲಿ ಭಾರಿ ಪ್ರಮಾಣದ ರಿಗ್ಗಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಟ್ವಿಟರ್ ಟ್ರಂಪ್ ಅವರ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

ಆಫ್ರಿಕನ್ ಅಮೆರಿಕನ್ ಮತದಾರರಿಗೆ ಧನ್ಯವಾದ ಅರ್ಪಿಸಿದ ಬಿಡೆನ್

ತನ್ನ ಗೆಲುವಿಗೆ ಆಫ್ರಿಕನ್-ಅಮೆರಿಕನ್ ಮೂಲದ ಮತದಾರರಿಗೆ ಬಿಡೆನ್ ಧನ್ಯವಾದ ಅರ್ಪಿಸಿದರು. ಆರಂಭಿಕ ಹಂತದಲ್ಲಿ ತಾನು ಹಿಂದೆಯಿದ್ದರೂ ಈ ಜನರು ನನಗೆ ಮುನ್ನಡೆ ತಂದುಕೊಟ್ಟರು ಎಂದು ಅವರು ಹೇಳಿದ್ದಾರೆ.

ಬಿಡೆನ್ ಅಧ್ಯಕ್ಷರಾದ ನಂತರ ಜನರನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಅವರು ಹೇಳಿದ್ದೇನು?

ಜೋ ಬಿಡೆನ್ ಅವರು ಮಾತನಾಡುತ್ತ ನಾನು ಜನರ ಆಶಯಗಳನ್ನ, ಭರವಸೆಗಳನ್ನ ಎಂದಿಗೂ ಮುರಿಯಲು ಅಲ್ಲ, ಜನರ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ವಿಜಯದ ನಂತರ ನಾನು ರಾಜ್ಯಗಳನ್ನು ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ನೋಡುವುದಿಲ್ಲ ಬದಲಾಗಿ ನಾನು ಎಲ್ಲಾ ರಾಜ್ಯಗಳನ್ನು ಯುನೈಟೆಡ್ ಸ್ಟೇಟ್ಸ್‌ನ ದೃಷ್ಟಿಕೋನದಿಂದ ಮಾತ್ರ ನೋಡುತ್ತೇನೆ ಎಂದು ಜೋ ಬಿಡನ್ ಹೇಳಿದರು.

‘ನಿಮ್ಮೆಲ್ಲರ ವಿಶ್ವಾಸವನ್ನು ಗೆಲ್ಲಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ’ ಎಂದು ಬಿಡೆನ್ ಹೇಳಿದರು. ಯುಎಸ್ ಚುನಾವಣೆಯಲ್ಲಿ ರಿಪಬ್ಲಿಕನ್ ಪ್ರಭಾವ ಹೊಂದಿರುವ ರಾಜ್ಯಗಳನ್ನು ಕೆಂಪು ಮತ್ತು ಡೆಮೋಕ್ರಾಟ್ ಪರ ರಾಜ್ಯಗಳಲ್ಲಿ ನೀಲಿ ಬಣ್ಣದಲ್ಲಿ ತೋರಿಸಲಾಗಿದೆ.

ಕರೋನಾ ವೈರಸ್ ಸಾಂಕ್ರಾಮಿಕವನ್ನು ನಿಲ್ಲಿಸುವುದು ನನ್ನ ಮೊದಲ ಕೆಲಸ. ಇದಕ್ಕಾಗಿ ನಾನು ಸೋಮವಾರ ಕಮಿಟಿಯನ್ನ ರಚಿಸುತ್ತೇನೆ. ಇದು ಉನ್ನತ ಮಟ್ಟದ ವಿಜ್ಞಾನಿಗಳು ಮತ್ತು ತಜ್ಞರನ್ನು ಹೊಂದಿರಲಿದೆ. ಅವರು ರೂಪಿಸುವ ಯೋಜನೆಯನ್ನು ಜನವರಿ 2021 ರಿಂದ ಜಾರಿಗೆ ತರಲಾಗುವುದು ಎಂದು ಬಿಡೆನ್ ಹೇಳಿದರು.

ಟ್ರಂಪ್ ಬೆಂಬಲಿಗರಿಗೆ ಬಿಡೆನ್ ಕಹಿ ಹಾಗು ದ್ವೇಷ ಮರೆತು ಸ್ನೇಹ ಸಂದೇಶವನ್ನೂ ನೀಡಿದರು.

ನನಗೆ ಮತ ಚಲಾಯಿಸದವರ ಪರವಾಗಿಯೂ ನಾನು ಕೆಲಸವನ್ನು ಮಾಡುತ್ತೇನೆ ಎಂದು ಬಿಡೆನ್ ಹೇಳಿದರು.

ಕರೋನಾ ಸಾಂಕ್ರಾಮಿಕ ರೋಗವನ್ನು ತಡೆಯಲು ಆ್ಯಕ್ಷನ್ ಪ್ಲ್ಯಾನ್ ಜಾರಿ ಮಾಡಲಾಗುವುದು

ಕರೋನಾ ವೈರಸ್ ಸಾಂಕ್ರಾಮಿಕವನ್ನು ನಿಲ್ಲಿಸುವುದು ನನ್ನ ಮೊದಲ ಕೆಲಸ. ನಾನು ಸೋಮವಾರ ಸಮಿತಿಯನ್ನು ಪ್ರಕಟಿಸುತ್ತೇನೆ. ಇದು ಉನ್ನತ ಮಟ್ಟದ ವಿಜ್ಞಾನಿಗಳು ಮತ್ತು ತಜ್ಞರನ್ನು ಹೊಂದಿರುತ್ತದೆ. ಅವರ ಯೋಜನೆಯನ್ನು ಜನವರಿ 2021 ರಿಂದ ಜಾರಿಗೆ ತರಲಾಗುವುದು ಎಂದು ಬಿಡೆನ್ ಹೇಳಿದರು.

ಟ್ರಂಪ್ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ

ಅಮೇರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಯಾವಾಗ ಏನು ಹೇಳಿಬಿಡ್ತಾರೀ ಏನು ಮಾಡಿಬಿಡ್ತಾರೋ ಗೊತ್ತೇ ಆಗಲ್ಲ ಅಂತ ಅಮೇರಿಕಾ ಅಷ್ಟೇ ಯಾಕೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಮಾತನಾಡಿಕೊಳ್ಳುತ್ತವೆ. ಈ ಬಾರಿ ಅಮೇರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯ ಬಳಿಕ ಅವರ ಹೇಳಿಕೆಯ ಬಗ್ಗೆ ಚರ್ಚೆ ಶುರುವಾಗಿದೆ. ಡೋನಾಲ್ಡ್ ಟ್ರಂಪ್ ಮಾತನಾಡುತ್ತ ಒಂದು ವೇಳೆ ಚುನಾವಣೆಯಲ್ಲಿ ಸೋತರೂ ತಾನು ಅಷ್ಟು ಸಲೀಸಾಗಿ ವೈಟ್ ಹೌಸ್ ಖಾಲಿ ಮಾಡುವವನಲ್ಲ ಎಂದಿದ್ದಾರೆ. ಅಮೇರಿಕಾದಲ್ಲಿ ಈಗಾಗಲೇ ಮತ ಎಣಿಕೆ ಕಾರ್ಯ ಮುಕ್ತಾಯವಾಗಿ ಬಿಡೆನ್ ಜಯಗಳಿಸಿದ್ದಾರೆ ಆದರೆ ಈಗ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ. ಆದರೆ ಇದೀಗ ಬರುತ್ತಿರುವ ಸುದ್ದಿಯ ಪ್ರಕಾರ ಡೋನಾಲ್ಡ್ ಟ್ರಂಪ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ ಹಾಗು ಅವರು ಚುನಾವಣೆ ಸೋತ ಬಳಿಕ ಈಗ ವೈಟ್ ಹೌಸ್ ಖಾಲಿ ಮಾಡಲ್ಲ ಅಂತ ಹೇಳಿದರೆ ಏನಾಗಬಹುದು?

ಈ ಬಗೆಗಿನ ಮಾಹಿತಿಯನ್ನ ನ್ಯಾಶನಲ್ ಹೆರಾಲ್ಡ್ ನ ಲೇಖನವೊಂದನ್ನ ಅದರ ಎಡಿಟರ್-ಇನ್-ಚೀಫ್ ಜಫರ್ ಆಗಾ ರವರು ಬರೆದಿರುವಂತೆ ಟ್ರಂಪ್ ತಾನು ಗೆಲ್ಲುತ್ತೇನೆ ಎಂಬ ಎಲ್ಲ ಭರವಸೆಗಳನ್ನೂ ಈಗಾಗಲೇ ಕಳೆದುಕೊಂಡಿದ್ದಾರೆ ಮತ್ತು ಅವರು ಅಮೇರಿಕಾ ಅಧ್ಯಕ್ಷನಾಗಿ ವೈಟ್ ಹೌಸ್ ನಲ್ಲಿನ ತಮ್ಮ ಕುರ್ಚಿಗಾಗಿ ಕಾನೂನಿನ ಮೂಲಕ ಹೋರಾಡುವ ದಾರಿಯನ್ನ ಹುಡುಕುತ್ತಿದ್ದಾರೆ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲ ಅವರು ಮುಂದೆ ಬರೆಯುತ್ತ “ಡೋನಾಲ್ಡ್ ಟ್ರಂಪ್ ಈಗಾಗಲೇ ಅಮೇರಿಕಾದ ಸುಪ್ರೀಂಕೋರ್ಟ್ ನಲ್ಲಿ ತಮಗೆ ಬೇಕಾದ ಜಡ್ಜ್ ಗಳನ್ನ ನೇಮಿಸಿಕೊಂಡಿದ್ದಾರೆ. ಅಮೇರಿಕಾ ಅಧ್ಯಕ್ಷ ತಮ್ಮ ಸೋಲನ್ನ ಒಪ್ಪಿಕೊಳ್ಳಲು ಸಿದ್ಧರಾಗದಿದ್ದರೆ ಅವರು ಅಮೇರಿಕಾದ ರಾಷ್ಟ್ರಪತಿ ಚುನಾವಣೆಯ ಇತಿಹಾಸದಲ್ಲೇ ನಡೆದಿರದಂತಹ ಕೆಲಸವನ್ನ ಮಾಡಲಿದ್ದಾರೆ. ಇದು ಅಮೇರಿಕಾದ ಪ್ರಜಾಪ್ರಭುತ್ವಕ್ಕೂ ಕಂ-ಟ-ಕ ತರಬಹುದು” ಎಂದು ಬರೆದಿದ್ದಾರೆ.

ಇಂದು, ಇಡೀ ಜಗತ್ತಿನ ಕಣ್ಣುಗಳು ಅಮೆರಿಕ ಅಧ್ಯಕ್ಷರ ಚುನಾವಣೆಯ ಫಲಿತಾಂಶದ ಮೇಲೆ ಕೇಂದ್ರೀಕೃತವಾಗಿದೆ. ಯುಎಸ್ ಅಧ್ಯಕ್ಷರು ಚುನಾವಣಾ ಜನಾದೇಶವನ್ನು ಪಾಲಿಸಲು ನಿರಾಕರಿಸಿದರೆ, ಅದು ಅಮೇರಿಕಾದ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾ’ರೀ ಪೆ-ಟ್ಟು ಕೊಡಲಿದೆ ಮತ್ತು ಅಮೆರಿಕದ ಪ್ರಜಾಪ್ರಭುತ್ವದ ಮೇಲೆ ಪ್ರಶ್ನೆ ಉದ್ಭವವಾದರೆ ಅಮೇರಿಕಾವನ್ನ ಗ್ಲೋಬಲ್ ಡೆಮಾಕ್ರಟಿಕ್ ಐಕಾನ್ ಅಂತ ಕರೆಯುತ್ತಿದ್ದ ಫ್ರೀ ವರ್ಲ್ಡ್ ಅಂದರೆ ಅನ್ಯ ರಾಷ್ಟ್ರಗಳ ಸ್ಥಿತಿ ಏನಾಗಬೇಡ? ಡೊನಾಲ್ಡ್ ಟ್ರಂಪ್ ಕಾನೂನು ಮಾರ್ಗವನ್ನು ಅನುಸರಿಸಿ ವೈಟ್ ಹೌಸ್ ಬಿಡಲು ನಿರಾಕರಿಸಿದರೆ ಅಮೆರಿಕದ ಪ್ರಜಾಪ್ರಭುತ್ವಕ್ಕೆ ಏನಾಗಬಹುದು ಎಂದು ಎಲ್ಲರೂ ಚಿಂತಿತರಾಗಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •