ಕೊರೊನಾದ ಈ ಕಷ್ಟ ಕಾಲದಲ್ಲಿಯೂ ಶುಭ ಸಮಾರಂಭಗಳು ಮದುವೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ಕಡಿಮೆಯೇನೂ ಆಗಿಲ್ಲ.. ಒಳ್ಳೆಯ ವಿಚಾರ ಎಂದರೆ ಅದ್ಧೂರಿ ಮದುವೆಗಳಿಗೆ ಬಹುತೇಕ ಬ್ರೇಕ್ ಬಿದ್ದಿದ್ದು ಹೆಣ್ಣೆತ್ತವರಿಗೆ ಕೊಂಚ ಹೊರೆ ಕಡಿಮೆಯಾಗಿದೆ ಎನ್ನಬಹುದು.. ಇನ್ನು ಇಂದು ಮತ್ತೊಂದು ವಿಶೇಷ ಮದುವೆ ನಡೆದಿದ್ದು.. ಮದುವೆ ನಡೆಯುವ ಸಮಯದಲ್ಲಿ ಖುದ್ದು ಶಾಸಕರೇ ಎಂಟ್ರಿ‌ ನೀಡಿದ್ದು ಪ್ರೇಮಿಗಳು ಶಾಕ್ ಆಗಿದ್ದಾರೆ..

ಹೌದು ದಾವಣಗೆರೆಯಲ್ಲಿ ಈ ಘಟನೆ ನಡೆದಿದ್ದು ಪ್ರೇಮಿಗಳು ಮನೆಯಿಂದ ಓಡಿ ಬಂದು ದೇವಸ್ಥಾನದಲ್ಲಿ ಮದುವೆಯಾಗುತ್ತಿದ್ದ ಸಮಯದಲ್ಲಿ ಶಾಸಕರಾದ ರೇಣುಕಾಚಾರ್ಯ ಅವರು ಎಂಟ್ರಿ ನೀಡಿದ್ದಾರೆ.. ಹೌದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಗ್ರಾಮದ ಶಿವಕುಮಾರ್ ಹಾಗೂ ಭೂಮಿಕಾ ಎಂಬುವವರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು..

Middle

ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದು ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.. ಮನೆಯವರು ಮದುವೆ ಬೇಡ ಎನ್ನುತ್ತಿದ್ದಂತೆ ಇಬ್ಬರೂ ಮನೆಯಿಂದ ಹೊರ ಬಂದು ಮದುವೆಯಾಗುವ ನಿರ್ಧಾರ ಮಾಡಿದ್ದು ಇಂದು ಸ್ನೇಹಿತರ ಸಹಾಯ ಪಡೆದು ಮಮೆಯಿಂದ ಹೊರ ಬಂದು ದೇವಸ್ಥಾನದಲ್ಲಿ ಮದುವೆಯಾಗುತ್ತಿದ್ದರು.. ಅದೇ ಸಮಯಕ್ಕೆ ಶಾಸಕರಾದ ರೇಣುಕಾಚಾರ್ಯ ಅವರು ಆಗಮಿಸಿ ಹುಡುಗ ಹಾಗೂ ಹುಡುಗಿಗೆ ಬುದ್ಧಿ ಹೇಳಿದ್ದಾರೆ.. ಅಷ್ಟೇ ಅಲ್ಲದೇ ಹುಡುಗಿಯ ತಂದೆ ಬೆಳಿಗ್ಗೆ ನನ್ನ ಜೊತೆ ಮಾತನಾಡಿ ಅಳುತ್ತಿದ್ದ.. ಮಗಳು ಹೀಗೆ ಮಾಡಿಬಿಟ್ಲು ಅಂತ ಕಣ್ಣೀರು ಹಾಕ್ತಿದ್ದ ಎಂದಿದ್ದಾರೆ.. ಮದುವೆ ನಡೆಸಿ ಇಬ್ಬರಿಗೂ ಆಶೀರ್ವಾದ ಮಾಡಿದ್ದಾರೆ..

Middle

ಇತ್ತ ಯಾರೂ ಇಲ್ಲ ಎಂದು ಮದುವೆಯಾಗುತ್ತಿದ್ದ ಜೋಡಿಗೆ ಖುದ್ದು ಕ್ಷೇತ್ರದ ಶಾಸಕರೇ ಬಂದು ಆಶೀರ್ವಾದ ಮಾಡಿದ್ದು.. ಮೊದಮೊದಲು ಮದುವೆ ನಿಲ್ಲಿಸಲು ಬಂದರೇನೋ ಎಂದು ಭಯ ಪಟ್ಟಿದ್ದಾರೆ.. ನಂತರ ಆಶೀರ್ವಾದ ಪಡೆದಿದ್ದಾರೆ.. ಆದರೆ ಮದುವೆಯಾದ ಕೂಡಲೇ ಮೊದಲು ಹುಡುಗಿಯ ಅಪ್ಪ ಅಮ್ಮನ ಬಳಿ ಹೋಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಎಂದು ತಿಳಿಸಿ ಅದೇ ಜಾಗದಲ್ಲಿ ಹುಡುಗಿಯ ಅಪ್ಪನಿಗೂ ಫೋನ್ ಮಾಡಿ ಮಗಳು ಅಳಿಯ ಮದುವೆ ಆಗಿದ್ದಾರೆ.. ನಾನೇ ಆಶೀರ್ವಾದ ಮಾಡಿದ್ದೀನಿ.. ಮನೆಗೆ ಬರ್ತಾರೆ ನೀವ್ ಕೂಡ ಆಶೀರ್ವಾದ ಮಾಡಿ.. ಚೆನ್ನಾಗಿ ಬಾಳಿ ಬದುಕಲಿ ಎಂದು ಹುಡುಗಿಯ ಅಪ್ಪನಿಗೂ ಸಹ ಬುದ್ಧಿ ಹೇಳಿದ್ದಾರೆ..

Middle

ಅಷ್ಟೇ ಅಲ್ಲದೇ ಪ್ರೀತಿಸಿ ಮದುವೆಯಾದ್ರೆ ಮಾತ್ರ ಸಾಲದು.. ಒಬ್ಬರನೊಬ್ಬರು ಚೆನ್ನಾಗಿ ನೋಡಿಕೊಳ್ಳಬೇಕು.. ಅತ್ತೆ ಮಾವನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬುದ್ಧಿ ಹೇಳಿ ಸಾಕಷ್ಟು ಸಮಯ ಅವರೊಟ್ಟಿಗೆ ಕಳೆದು ಅವರ ಜೊತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ.. “ನನ್ನ ಮತ ಕ್ಷೇತ್ರದ ಕುಂಕುವ ಗ್ರಾಮದ ನನ್ನ ಹಿತೈಷಿಗಳ ಮಕ್ಕಳಾದ ಭೂಮಿಕಾ ಮತ್ತು ಶಿವಕುಮಾರ್ ಅವರು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಅವರ ಪೋಷಕರಿಗೆ ಮನವೊಲಿಸಿ ನವ ಜೋಡಿಗಳಿಗೆ ಶುಭ ಕೋರಿ ಆಶೀರ್ವಾದ ಮಾಡಿದೆನು.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಸದ್ಯ ಶಾಸಕರು ಪ್ರೇಮಿಗಳನ್ನು ಸಹ ದೂರ ಮಾಡದೇ ಹೆತ್ತ ಅಪ್ಪನ ಜೊತೆಯೂ ಒಂದು ಮಾಡಿ.. ಅವರ ಬಳಿಗೆ ತೆರಳಿ ಆಶೀರ್ವಾದ ಪಡೆಯುವಂತೆ ಮಾಡಿ ಅವರನ್ನೂ ಸಹ ಮದುವೆ ಒಪ್ಪಿಕೊಳ್ಳುವಂತೆ ಮಾಡಿದ್ದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಕಮೆಂಟ್ ಮೂಲಕ ನೂತನ ಜೋಡಿಗೆ ಶುಭ ಕೋರಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •