ಮೇಘನಾ ರಾಜ್.. ದೂರದಲ್ಲಿ ನಿಂತು ನೋಡಿದವರಿಗೆ ಇವರ ರೀತಿ ಧೈರ್ಯವಂತರಾಗಬೇಕು ಎಂದು ಬಹಳಷ್ಟು ಹೆಣ್ಣು ಮಕ್ಕಳು ಅಂದುಕೊಂಡದ್ದೂ ಉಂಟು.. ಆದರೆ ಕಳೆದ ಐದು ತಿಂಗಳಿಂದ ಮೇಘನಾ ರಾಜ್ ಕಷ್ಟಗಳನ್ನು ದಾಟಿ ಭರವಸೆ ತಂದು ಕೊಂಡದ್ದರ ಬಗ್ಗೆ ಮಾತಮಾಡಿದ್ದಾರೆ..

ಹೌದು ಇಂದು ಮೇಘನಾ ರಾಜ್ ಅವರ ಮಗನ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ಆಯೋಜಿಸಲಾಗಿತ್ತು.. ತವರು ಮನೆ ಶಾಸ್ತ್ರ ಇದಾಗಿತ್ತು.. ಇದೇ ಸಮಯದಲ್ಲಿ ಮಾದ್ಯಮದವರನ್ನು‌ ಆಹ್ವಾನಿಸಿ ಮೇಘನಾ ಮಾತನಾಡಿದ್ದಾರೆ.. ಹೌದು ಮೊದಲ ಬಾರಿಗೆ ಮಾದ್ಯಮದ ಮುಂದೆ ಎಲ್ಲವನ್ನು ಹೇಳಿಕೊಂಡಿದ್ದಾರೆ.. ಇಲ್ಲಿದೆ ನೋಡಿ..

ಮಾತು ಶುರು‌ ಮಾಡುತ್ತಲೇ ಕಣ್ಣೀರು ತಡೆಯಲಾಗದೇ ಸ್ವಲ್ಪ ಸಮಯ ಸುಮ್ಮನೆ ಕೂತ ಮೇಘನಾ ಅವರು ಮೊದಲಿಗೆ ಎಲ್ಲಾ ಜನರಿಗೆ.. ಮಾದ್ಯಮದವರಿಗೆ ಧನ್ಯವಾದಗಳನ್ನು ತಿಳಿಸಿದರು.. ನೀವೆಲ್ಲರು ನನಗೆ ಕೊಟ್ಟ ಸಪೋರ್ಟ್ ನಾನು ಎಂದೂ ಮರೆಯೋದಿಲ್ಲ.. ಚಿರು ಹಾಗೂ ನನ್ನನ್ನು ನಿಮ್ಮೆಲ್ಲರ ಕುಟುಂಬದ ಸದಸ್ಯರು ಎಂದು ಕೊಂಡು ಬಹಳಷ್ಟು ಪ್ರೀತಿ‌ ಕೊಟ್ಟಿದ್ದೀರ.. ನನಗೆ ಆ ವಿಚಾರದ ಬಗ್ಗೆ ಬಹಳ ಸಂತೋಷ ಇದೆ.. ಐದು ತಿಂಗಳ ಹಿಂದೆ ಏನು ನಡೆಯಿತು ಎಂದು ಎಲ್ಲರಿಗೂ ತಿಳಿದೇ ಇದೆ.. ಆ ಕುರಿತು ಮಾತನಾಡುವುದು ಬೇಡ.. ಅದರ ಬಗ್ಗೆ ಮಾತನಾಡಿದ್ರೆ ನನಗೆ ಮಾತನಾಡಲು ಸಾಧ್ಯವಾಗೋದಿಲ್ಲ..

ಇವತ್ತು ಮಗುವಿಗೆ ತವರು ಮನೆಯ ತೊಟ್ಟಿಲ ಶಾಸ್ತ್ರ ಮಾಡ್ತಾ ಇದ್ದೇವೆ.. ನಾಮಕರಣ ಸಧ್ಯದಲ್ಲಿಯೇ ಮಾಡ್ತೇವೆ.. ಚಿರು ಮಗ ಅಲ್ವಾ‌.. ಸ್ವಲ್ಪ ಸ್ಪೆಷಲ್ ಆಗಿಯೇ ಹೆಸರನ್ನು ಇಡಬೇಕು.. ಇನ್ನೂ ಏನೂ ಡಿಸೈಡ್ ಮಾಡಿಲ್ಲ.. ಶಾಸ್ತ್ರದ ಪ್ರಕಾರ ಒಂದು ಅಕ್ಷರ ಕೊಟ್ಟಿದ್ದಾರೆ.. ಅದನ್ನೆಲ್ಲಾ ನಾಮಕರಣದ ದಿನ ಹೇಳ್ತೇನೆ..

Meghna-raj-love

ಚಿರು ಹೋದ ನಂತರ ನಾನು ಸಂಪೂರ್ಣ ಬ್ಲಾಂಕ್ ಆಗಿದ್ದೆ.. ಈಗಲೂ ಬ್ಲಾಂಕ್ ಆಗಿಯೇ ಇದೀನಿ.. ಆ ಸಮಯದಲ್ಲಿ ನಾನು ಯಾಕ್ ಇರ್ಬೇಕು.. ಇನ್ನೇನಿದೆ ನನ್ನ್ ಲೈಫಲ್ಲಿ.. ನಾನು ಕೂಡ ಇರಬಾರದು.. ಈ ರೀತಿಯೆಲ್ಲಾ ನಿರ್ಧಾರ ಮಾಡ್ತಾ ಇದ್ದೆ.. ಆದರೆ ನಮಗೆ ನಮ್ಮದೇ ಜವಾಬ್ದಾರಿಗಳು ಕಣ್ಣ ಮುಂದೆ ಬರ್ತಾ ಹೋಯ್ತು.. ಅಪ್ಪ ಅಮ್ಮ ಇದಾರೆ.. ಮಗು ಇದೆ..‌ ಹೀಗೆ ಬದುಕೋಕೆ ಒಂದೊಂದೆ ಕಾರಣ ಸಿಗ್ತಾ ಹೋಯ್ತು..

ನಾನು ಸಾಮಾನ್ಯವಾಗಿ ಮುಂದೆ ಏನಾಗ್ಬೇಕು ಎಲ್ಲವನ್ನು ಪ್ಲಾನ್‌ ಮಾಡ್ತಾ ಇದ್ದೆ.. ಆದರೆ ಚಿರು ಮಾತ್ರ ಆ ಕ್ಷಣವನ್ನು ಜೀವಿಸುತ್ತಿದ್ದರು.. ಮುಂದೆ ಏನಾಗತ್ತೋ ಯಾರಿಗೊತ್ತು.. ಈ ಕ್ಷಣ ಸಂತೋಷವಾಗಿರ್ಬೇಕು ಅನ್ನೋರು.. ಇವಾಗ ನಾನ್ ಕೂಡ ಅದೇ ರೀತಿ ಆಗಿದ್ದೀನಿ.. ಈ ಕ್ಷಣ ಮಗು ಇದೆ.. ಮಗುವಿಗಾಗಿ ಸಂತೋಷದಿಂದ ಇರಬೇಕು.. ನಾನ್ ಯಾವಾಗ್ಲೂ ಹೆಣ್ಣ್ ಮಗು ಬೇಕು ಅಂತ ಕೇಳ್ತಾ ಇದ್ದೆ.. ಆದರೆ ಚಿರು ಮಾತ್ರ ಸದಾ ನಮಗೆ ಗಂಡು ಮಗುನೇ ಆಗೋದು ಅನ್ನೋರು.. ಅವರ ಆಸೆ ಪ್ರಕಾರ ಗಂಡು ಮಗುವೇ ಆಗಿದೆ.. ಅವನೇ ನನಗೆ ಎಲ್ಲಾ” ಎಂದು ಕಣ್ಣೀರಿಟ್ಟರು..

ಅಷ್ಟೇ ಅಲ್ಲದೇ ಅಪ್ಪ ಅಮ್ಮನ ಬಗ್ಗೆ ಮಾತನಾಡಿ ನನ್ನ ಜೀವನದ ದೊಡ್ಡ ಸಪೋರ್ಟ್ ಇವರು.. ಅಪ್ಪ ಅಂತು ಬಹಳ ಕಾಳಜಿ.. ಅದು ಮಾಡಬೇಡ ಇದು ಮಾಡಬೇಡ ಅನ್ನೋರು.. ನನಗೂ ಕೂಡ ಅವರು ಯಾವತ್ತೂ ಹರಕೆ ಹೊತ್ತುಕೊಂಡಿಲ್ಲ.. ಮಗುವಿಗಾಗಿ ತಿರುಪತಿಗೆ ಹೋಗಿ ಹರಕೆ ತೀರ್ಸಿ ಬಂದಿದ್ದಾರೆ.. ನಮ್ಮ ಅಪ್ಪ ಗಡ್ಡ ಬಿಟ್ಟಿದ್ದು ಯಾವತ್ತೂ ನೋಡಿರ್ಲಿಲ್ಲ.. ನಾನ್ ಮಗುಗೆ ಅದನ್ನೇ ಹೇಳ್ತಾ ಇರ್ತೀನಿ ನೋಡು ನಿಮ್ ತಾತ ನಿನಗೋಸ್ಕರ ಏನೇನೆಲ್ಲಾ ಮಾಡ್ತಾ ಇದಾರೆ ಅಂತ..

ನಮ್ಮ ಕುಟುಂಬ ಮಾತ್ರ ಅಲ್ಲ ಜನರು ಎಷ್ಟು ಪ್ರೀತಿ ಧೈರ್ಯ ಕೊಟ್ರು ಅಂದ್ರೆ ಹೇಳೋಕೆ ಸಾಧ್ಯ ಇಲ್ಲ.. ಉತ್ತರ ಕರ್ನಾಟಕದ ಮಹಿಳಾ ಸಂಘದವರು ತೊಟ್ಟಿಲು ತಂದು ಕೊಟ್ಟಿದ್ದಾರೆ.. ಅದೇ ತೊಟ್ಟಿಲ್ಲನ್ನ ನಾವು ಇವತ್ತು ಶಾಸ್ತ್ರಕ್ಕೆ ಬಳಸ್ತಾ ಇದ್ದೀವಿ.. ಬಹಳ ಖುಷಿ ಆಗ್ತಾ ಇದೆ ನಿಮ್ಮೆಲ್ಲರಿಗೂ ನಾನ್ ಋಣಿ.. ನಿಮ್ಮ ಆಶೀರ್ವಾದ ಮಗು ಮೇಲೆ ಇರಲಿ ಎಂದು ಮನವಿ ಮಾಡಿದರು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •