ಮೇಘನಾ-ರಾಜ್

ಮಗನ ಜೊತೆ ಕ್ರಿಸ್ಮಸ್ ಆಚರಣೆ ಮಾಡುತ್ತಿರುವ ಮೇಘನಾ ರಾಜ್..ಆದರೆ ಏನಾಗಿದೆ ನೋಡಿ..

Cinema/ಸಿನಿಮಾ Home Kannada News/ಸುದ್ದಿಗಳು

ಮೇಘನಾ ರಾಜ್ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೀಗ ಮಗ ರಾಯನ್ ಜೊತೆ ಕ್ರಿಸ್ಮಸ್ ಆಚರಣೆಯ ಸಂಭ್ರಮದಲ್ಲಿದ್ದಾರೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಅವರ ತಾಯಿ ಕ್ರೈಸ್ತರಾಗಿದ್ದು ಕಳೆದ ಸಾಕಷ್ಟು ವರ್ಷಗಳಿಂದಲೂ ಅವರ ಮನೆಯಲ್ಲಿ ಅದ್ಧೂರಿಯಾಗಿ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತಿದೆ.. ಈ ಹಿಂದೆ ಅಂದರೆ ಐದಾರು ವರ್ಷದ ಹಿಂದಿನವರೆಗೂ ಸಹ ಮೊದಲ ತಲೆಮಾರಿನ ಕಲಾವಿದರು ಹಾಗೂ ಸುಂದರ್ ರಾಜ್ ಪ್ರಮಿಳಾ ಸುಂದರ್ ಅವರುಗಳು ಅಭಿನಯಿಸುತ್ತಿದ್ದ ಸಿನಿಮಾಗಳ ನಟ ನಟಿಯರು ಹಾಗೂ ಬಹುತೇಕ ಸ್ಯಾಂಡಲ್ವುಡ್ ನ ಎಲ್ಲರನ್ನೂ ಸಹ ಅಹ್ವಾನಿಸಿ ಕ್ರಿಸ್ಮಸ್ ಆಚರಣೆ ಮಾಡುತ್ತಿದ್ದರು.. ಆದರೆ ಚಿರು ಇಲ್ಲವಾದ ನಂತರ ಈ ಆಚರಣೆಗಳನ್ನೆಲ್ಲಾ ನಿಲ್ಲಿಸಿದ ಕುಟುಂಬ ಕಳೆದ ವರ್ಷ ಯಾವುದೇ ಆಚರಣೆ ಮಾಡಲಿಲ್ಲ..

ಆದರೀಗ ರಾಯನ್ ಹುಟ್ಟಿ ವರ್ಷವಾಗಿದೆ ಮಗನ ಜೊತೆ ಮೇಘನಾ ರಾಜ್ ಕ್ರಿಸ್ಮಸ್ ಆಚರಣೆ ಮಾಡುತ್ತಿದ್ದಾರೆ.. ಆದರೆ ಇಂತಹ ಸಂತೋಷದ ಸಮಯದಲ್ಲಿ ಮೇಘನಾ ರಾಜ್ ಕಣ್ಣೀರಿಟ್ಟು ಭಾವುಕರಾಗಿದ್ದಾರೆ.. ಹೌದು ಕಳೆದ ವರ್ಷ ಚಿರು ಸರ್ಜಾ ಅಕಾಲಿಕವಾಗಿ ಇಲ್ಲವಾದ ಬಳಿಕ ಮೇಘನಾ ರಾಜ್ ಅವರ ಸಂಪೂರ್ಣ ಜೀವನವೇ ಬದಲಾಗಿ ಹೋಯ್ತು.. ಇತ್ತ ನಾಲ್ಕು ತಿಂಗಳ ಬಳಿಕ ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್ ಮಗುವಿನ ಮುಖ ನೋಡಿ ನೋವುಗಳನ್ನು ಮರೆಯಲು ಮುಂದಾದರು.. ಚಿರು ನೆನಪುಗಳ ಜೊತೆಯೇ ಜೀವನ ಮುಂದುವರೆಸಿದರು.. ವರ್ಷದ ನಂತರ ತಮ್ಮ ವೃತ್ತಿ ಬದುಕನ್ನು ಮತ್ತೆ ಪುನರಾರಂಭ ಮಾಡಿದ ಮೇಘನಾ ರಾಜ್ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.. ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಆನ್ಲೈನ್ ಜಾಹೀರಾತುಗಳಲ್ಲಿ ಮೇಘನಾ ರಾಜ್ ಬ್ಯುಸಿ ಆದರು..

Tamil Actress Meghana Raj Hot Gallery - Actress Album

ಸಾಲು ಸಾಲು ಜಾಹೀರಾತುಗಳನ್ನು ಒಪ್ಪಿಕೊಂಡು ಪ್ರಮೋಟ್ ಮಾಡುತ್ತಿದ್ದಾರೆ.. ಇದರ ಜೊತೆಗೆ ಮಳಯಾಳಂ ಸಿನಿಮಾದ ಅವಕಾಶವೂ ಬಂದಿದ್ದು ಮುಂದಿನ ವರ್ಷ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.. ಇನ್ನು ಇತ್ತ ತಿಂಗಳ ಹಿಂದಷ್ಟೇ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದ ಮೇಘನಾ ರಾಜ್ ಮಗನಿಗೆ ಯಾವುದೇ ಕೊರತೆಯಾಗದಂತೆ ಸಂಭ್ರಮ ಆಚರಿಸಿದ್ದರು.. ಆದರೆ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬಕ್ಕೆ ಇತ್ತ ಸರ್ಜಾ ಕುಟುಂಬದ ಯಾರೊಬ್ಬರೂ ಸಹ ಆಗಮಿಸಿದೇ ಇದ್ದದ್ದು ಎರಡೂ ಕುಟುಂಬದ ಮಡುವೆ ಮನಸ್ತಾಪ ಮೂಡಿದೆ ಎನ್ನುವುದು ಬಹಿರಂಗವಾಗಿತ್ತು..

ಇನ್ನು ಮಗುವಿನ ನಾಮಕರಣದ ಸಮಯದಲ್ಲಿಯೇ ಎರಡೂ ಕುಟುಂಬದ ನಡುವೆ ಮನಸ್ತಾಪ ಮೂಡಿತ್ತು ಎನ್ನುವ ವಿಚಾರ ಹೊರಂಬಂದು ಸಮಜಾಯಿಸಿ ನೀಡಿದರೂ ಸಹ ಜನರಿಗೆ ಎರಡೂ ಕುಟುಂಬದ ನಡುವೆ ಶಾಸ್ತ್ರ ಹೆಸರು ನಾಮಕರಣ ವಿಚಾರಗಳಿಗೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ಮೂಡಿರೋದಂತೂ ಸತ್ಯ ಎನಿಸಿತ್ತು.. ಇನ್ನು ನಾಮಕರಣಕ್ಕೆ ಅರ್ಜುನ್ ಸರ್ಜಾ ಅವರೂ ಸಹ ಭಾಗಿಯಾಗದೇ ಇದ್ದದ್ದು ಅವರಿಗೆ ಕೆಲ ವಿಚರಗಳಲ್ಲಿ ನೋವಿದೆ ಎನ್ನುವ ಮಾತು ಕೇಳಿ ಬಂದಿತ್ತು.. ಇನ್ನು ಇತ್ತ ಮೇಘನಾ ರಾಜ್ ಕೆಲ ದಿನಗಳ ಹಿಂದಷ್ಟೇ ವರ್ಷಗಳ ನಂತರ ಮೊದಲ ಬಾರಿಗೆ ದೃಶ್ಯ 2 ಸಿನಿಮಾ ನೋಡಲು ಆಗಮಿಸಿದ್ದು ಸಧ್ಯ ಮೊನ್ನೆಯೂ ಗಜಾನನ ಅಂಡ್ ಗ್ಯಾಂಗ್ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು..

ಇನ್ನು ಇದೀಗ ಕ್ರಿಸ್ಮಸ್ ಸಂಭ್ರಮದಲ್ಲಿರುವ ಮೇಘನಾ ರಾಜ್ ಮಗನಿಗಾಗಿ ಮನೆಯನ್ನು ಸಂಪೂರ್ಣ ಲೈಟಿಂಗ್ಸ್ ನಿಂದ ಸಿಂಗರಿಸಿದ್ದು ಎರಡು ವರ್ಷದ ನಂತರ ಮತ್ತೆ ಅದ್ಧೂರಿಯಾಗಿ ಕ್ರಿಸ್ಮಸ್ ಆಚರಣೆಗೆ ಸಕಲ ತಯಾರಿ ನಡೆಸಿದ್ದಾರೆ.. ಇನ್ನು ಇತ್ತ ಮೇಘನಾ ರಾಜ್ ಕ್ರಿಸ್ಮಸ್ ಆಚರಣೆ ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಂಜನೇಯನ ಭಕ್ತನ ಮಗನ ಕೈಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಿಸುತ್ತಿದ್ದೀರಿ ಎಂದೂ ಸಹ ಕಮೆಂಟ್ ಮಾಡಿದ್ದು ಸಧ್ಯ ಮೇಘನಾ ರಾಜ್ ಇದ್ಯಾವುದಕ್ಕೂ ಅಷ್ಟು ಗಮನ ನೀಡದೇ ರಾಯನ್ ಜೊತೆ ಕ್ರಿಸ್ಮಸ್ ಸಂಭ್ರಮದಲ್ಲಿದ್ದಾರೆ.. ಇನ್ನು ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಆಗಿರುವ ಮೇಘನಾ ರಾಜ್ ಅವರು ಅಭಿಮಾನಿಗಳ ಜೊತೆ ಆಗಾಗ ಮಾತನಾಡುತ್ತಾ ಅವರ ಜೊತೆ ಸಮಯ ಕಳೆಯುತ್ತಿರುತ್ತಾರೆ..

Meghana Raj Meghana Raj Photo Shared By Ravi37 | Photo Gallery Images

ಅದೇ ರೀತಿ ಮೊನ್ನೆಯೂ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಮೇಘನಾ ರಾಜ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.. ಹೌದು ಮಗನಿಗಾಗಿ ಕ್ರಿಸ್ಮಸ್ ನಲ್ಲಿ ಯಾವ ಉಡುಗೊರೆ ಕೇಳುತ್ತೀರಾ ಎಂದು ಕೇಳಿದ ಅಭಿಮಾನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮೇಘನಾ ರಾಜ್.. ಭಾವುಕರಾಗಿ ಮಗನ ಫೋಟೋ ಜೊತೆಗೆ ಚಿರು ಸರ್ಜಾ ಅವರ ಮದುವೆಯ ಸಮಯದ ಫೋಟೋವನ್ನು ಹಂಚಿಕೊಂಡಿದ್ದಾರೆ.. ಮಗನಿಗೆ ಚಿರುವನ್ನೇ ಮತ್ತೆ ಕೊಟ್ಟುಬಿಡು ಎಂದು ಕೇಳುತ್ತೇನೆ ಎಂದಿದ್ದಾರೆ.. ಮೇಘನಾ ರಾಜ್ ಅವರ ನೋವಿನ ಈ ಮಾತುಗಳು ಅಭಿಮಾನಿಗಳನ್ನು ಭಾವುಕರನ್ನಾಗಿಸಿದ್ದು ಮೇಘನಾ ಅವರಿಗೆ ಕಮೆಂಟ್ ಮೂಲಕ ಧೈರ್ಯ ತುಂಬಿದ್ದಾರೆ..

 
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...