ನಟಿ ಮೇಘನಾ ರಾಜ್

ಹೊಸ ಬಿಸಿನೆಸ್ ಹಾಗು ಕೆಲಸ ಶುರು ಮಾಡಿದ ನಟಿ ಮೇಘನಾ ರಾಜ್! ಯಾವ ಬಿಸಿನೆಸ್ ನೋಡಿ

Cinema/ಸಿನಿಮಾ Home Kannada News/ಸುದ್ದಿಗಳು

ಚಿಕ್ಕ ವಯಸ್ಸಿನಿಂದಲೂ ಕನ್ನಡ ಚಿತ್ರರಂಗದ ಹಿರಿಯರ ಜೊತೆ ಆಡಿ ಬೆಳೆದವರು ನಟಿ ಮೇಘನಾ ರಾಜ್. ಮೇಘನಾ ರಾಜ್ ಅವರಿಗೆ ಕನ್ನಡ ಚಿತ್ರರಂಗವೇ ಕುಟುಂಬ ಇದ್ದಂತೆ. ಮೇಘನಾ ರಾಜ್ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಅಭಿನಯ ಶುರು ಮಾಡಿ ನಂತರ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿ ಯಶಸ್ಸು ಗಳಿಸಿದರು. ಅದರಲ್ಲೂ ಮಲಯಾಳಂ ಚಿತ್ರರಂಗದಲ್ಲಿ ಮೇಘನಾ ರಾಜ್ ಅವರಿಗೆ ಬಹಳ ಜನಪ್ರಿಯತೆ ಇದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಮಲಯಾಳಂ ಸಿನಿಮಾದಲ್ಲಿ ನಟನೆ ಕಡಿಮೆ ಮಾಡಿದ್ದರು ಮೇಘನಾ.

ಚಿರು ದಿಢೀರ್ ಎಂದು ಇಹ ಲೋಕ ತ್ಯ ಜಿಸಿದರು. ಆದರೆ ಚಿರು ರೂಪದಲ್ಲಿ ಈಗ ಮೇಘನಾ ಅವರ ಜೊತೆ ಜ್ಯೂನಿಯರ್ ಚಿರು ಇದ್ದಾನೆ. ಜ್ಯೂನಿಯರ್ ಚಿರು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿದ್ದಾರೆ. ಜ್ಯೂನಿಯರ್ ನ ಎಲ್ಲಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತವೆ. ತಮ್ಮ ಸಂಪೂರ್ಣ ಸಮಯವನ್ನು ಜ್ಯೂನಿಯರ್ ಚಿರುವನ್ನು ನೋಡಿಕೊಳ್ಳಲು ಮೀಸಲಾಗಿ ಇಟ್ಟಿದ್ದಾರೆ ಮೇಘನಾ. ಮೇಘನಾ ಅವರು ಹೆಚ್ಚಾಗಿ ಹೋರಗಡೆ ಬರುವುದಿಲ್ಲ. ಮೀಡಿಯಾ ಮುಂದೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಮೇಘನಾ.

ಆದರೆ ಈಗ ಮೇಘನಾ ರಾಜ್ ಅವರು ಹೊಸ ಕೆಲಸ ಒಂದನ್ನು ಶುರು ಮಾಡಿಕೊಂಡಿದ್ದಾರೆ, ಮನೆಯಲ್ಲೇ ಇದ್ದುಕೊಂಡು ಹೊಸ ಪ್ರಯತ್ನ ಶುರು ಮಾಡಿದ್ದಾರೆ ಮೇಘನಾ. ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪ್ರಾಡಕ್ಟ್ ಗಳಿಗೆ ಆನ್ ಲೈನ್ ಪ್ರೊಮೋಷನ್ ಮಾಡುತ್ತಿದ್ದಾರೆ ಮೇಘನಾ ರಾಜ್. ಮೇಘನಾ ಆವರಿಗೆ ಸಾವರರು ಫಾಲೋವರ್ಸ್ ಗಳಿದ್ದಾರೆ, ಹಾಗಾಗಿ ಅವರು ಆನ್ ಲೈನ್ ಪ್ರಮೋಷನ್ ಮಾಡಿದರೆ ಹೆಚ್ಚಿನ ಜನರಿಗೆ ಪ್ರಾಡಕ್ಟ್ ಗಳು ರೀಚ್ ಆಗಲಿದೆ. ಮಕ್ಕಳಿಗೆ ಸಂಬಂಧಪಟ್ಟ ಕೆಲವು ಪ್ರಾಡಕ್ಟ್ ಗಳನ್ನು ಪ್ರೊಮೋಟ್ ಮಾಡುತ್ತಿದ್ದಾರೆ ಮೇಘನಾ.

ಇನ್ನು ಮೇಘನಾ ಅವರು ಕೆಲ ತಿಂಗಳುಗಳ ನಂತರ ಸಿನಿಮಾ ನಟನೆ ಶುರು ಮಾಡುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಜ್ಯೂನಿಯರ್ ಚಿರು ಹುಟ್ಟಿದ ನಂತರ ಸಂದರ್ಶನ ಒಂದರಲ್ಲಿ, ನಟನೆ ಬಿಟ್ಟು ಇರಲು ಸಾಧ್ಯವಿಲ್ಲ, ಕೆಲ ಸಮಯದ ನಂತರ ಮರಳಿ ಬರುತ್ತೇನೆ, ಕೊನೆಯವರೆಗೂ ಅಭಿನಯ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಮೇಘನಾ ಯಾವಾಗ ವಾಪಸ್ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕೆಲವು ಮೂಲಗಳ ಪ್ರಕಾರ ನಟಿ ಮೇಘನಾ ರಾಜ್ ಅವರು ಈ ವರ್ಷದ ಕೊನೆಗೆ ಮತ್ತೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಸೃಜನ್ ಲೋಕೇಶ್ ಜೊತೆ ನಟಿಸಿರುವ ಒಂದು ಸಿನಿಮಾ ಬಿಡುಗಡೆಗೆ ರೆಡಿ ಆಗಿದ್ದು, ಥಿಯೇಟರ್ ಗಳು ಓಪನ್ ಆದ ನಂತರ, ಸಿನಿಮಾ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...