ನಟಿ ಮೇಘನಾ ರಾಜ್ ಹಾಗೂ ಕುಟುಂಬ ಸದ್ಯ ಕೊರೊನಾ ಚಿಕಿತ್ಸೆಯಲ್ಲಿದ್ದು ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ.. ಈ ನಡುವೆ ಮೇಘನಾ ರಾಜ್ ಮಗುವಿನ ಫೋಟೋವೊಂದನ್ನು ಹಂಚಿಕೊಂಡು ಕ್ಷಮಿಸಿ ಈ ಮಗು ನನ್ನದಲ್ಲ ಎಂದಿದ್ದಾರೆ.. ಹೌದು ಕಳೆದ ವಾರ ನವೆಂಬರ್ 8 ರಂದು ಮೇಘನಾ ಅವರ ತಾಯಿ ಪ್ರಮಿಳಾ ಸುಂದರ್ ಅವರಿಗೆ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು.. ಇದರ ಬೆನ್ನಲ್ಲೇ ಮರುದಿನ ಮೇಘನಾ..‌ಮಗು.. ಹಾಗೂ ಸುಂದರ್ ರಾಜ್ ಅವರಿಗೂ ಸಹ ಕೊರೊನಾ ಪಾಸಿಟಿವ್ ಎಂದು ತಿಳಿದಿದ್ದು ಮೇಘನಾ ಮತ್ತು ಮಗುವನ್ನು ಮನೆಯಲ್ಲಿಯೇ ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.. ಆದರೆ ಸುಂದರ್ ರಾಜ್ ಅವರು ಮತ್ತು ಪ್ರಮಿಳಾ ಸುಂದರ್ ಅವರಿಗೆ ವಯಸ್ಸಾಗಿರುವ ಕಾರಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ..

ಇನ್ನು 6 ದಿನಗಳ ವರೆಗೆ ಚಿಕಿತ್ಸೆ ಮುಂದುವರೆಸಿ ಬಳಿಕ ಮತ್ತೆ ಕೊರೊನಾ ಪರೀಕ್ಷೆ ನಡೆಸಿದ ನಂತರ ವರದಿಯಲ್ಲಿ ಕೊರೊನಾ ವಾಸಿಯಾಗಿದೆಯೋ ಇಲ್ಲವೋ ಎಂಬ ವಿಚಾರ ತಿಳಿಯಲಿದೆ.. ಸದ್ಯ ದೇವರ ದಯೆ ಮೇಘನಾ ಹಾಗೂ ಮಗುವಿಗೆ ಯಾವುದೇ ಕೊರೊನಾ ಲಕ್ಷಣಗಳು ಇರದೇ ವರದಿಯಲ್ಲಿ ಮಾತ್ರ ಪಾಸಿಟಿವ್ ಬಂದಿದ್ದು ಆದರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.. ಇನ್ನು ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಮಾಡುವ ಮೇಘನಾ ರಾಜ್ ಅವರು ಮಗುವೊಂದರ ಫೋಟೋವನ್ನು ಹಂಚಿಕೊಂಡು ಈ ಮಗು ನನ್ನದಲ್ಲ ಎಂದಿದ್ದಾರೆ.. ಹೌದು ಎರಡು ದಿನಗಳ ಹಿಂದಷ್ಟೇ ಮೇಘನಾ ರಾಜ್ ಅವರು ಮಗನ ಕುರಿತು ಸ್ಟೇಟಸ್ ಒಂದನ್ನು ಅಪ್ಡೇಟ್ ಮಾಡಿದ್ದರು..

meghana-raj-son

ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನನ್ನ ಮಗನನ್ನು ಬೆಳೆಸುತ್ತೇನೆ.. ಇದು ನನ್ನ ಪ್ರತಿಜ್ಞೆ ಎಂದಿದ್ದರು.. ಮಗನನ್ನು ಒಳ್ಳೆಯ ದಾರಿಯಲ್ಲಿ ಅದರಲ್ಲೂ ಹೆಣ್ಣು ಮಕ್ಕಳಿಗೆ ಗೌರವ ನೀಡುವ ರೀತಿಯಲ್ಲಿ‌‌ ಮಗನನ್ನು ಬೆಳೆಸುತ್ತೇನೆ.. ಎಂದು ಎಲ್ಲಾ ಹೆಣ್ಣು ಮಕ್ಕಳ ಪೋಷಕರಿಗೆ ತಿಳಿಯುವಂತೆ ಪ್ರತಿಜ್ಞೆ ಮಾಡಿದ್ದರು.. ಮೇಘನಾ ಅವರ ಮಾತಿಗೆ ಬಹಳ ಮೆಚ್ಚುಗೆಯೂ ವ್ಯಕ್ತವಾಗಿತ್ತು.. ಗಂಡು ಮಕ್ಕಳನ್ನು ಹೆಣ್ಣು ಮಕ್ಕಳಿಗೆ ಗೌರವ ಕೊಡುವ ರೀತಿಯಲ್ಲಿ ಬೆಳೆಸಬೇಕಾದದ್ದು ಎಲ್ಲಾ ಪೋಷಕರ ಕರ್ತವ್ಯ ಅದನ್ನು ನೀವು ಪಾಲಿಸುತ್ತಿರುವುದು ಸಂತೋಷದ ವಿಚಾರ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು‌‌..

ಆದರೆ ಇದರ ಜೊತೆ ಯೂಟ್ಯೂಬ್ ನಲ್ಲಿ ಮೇಘನಾ ಅವರ ಕುರಿತ ಮತ್ತೊಂದು ವಿಚಾರ ಸುದ್ದಿಯಾಗಿತ್ತು.. ಹೌದು ಚಿರು ಅವರು ಇಲ್ಲವಾದ ಬಳಿಕ ಮೇಘನಾ ಬಗ್ಗೆ ಮಗುವಿನ ಬಗ್ಗೆ ಕೆಲವೊಂದು ಇಲ್ಲ ಸಲ್ಲದ ವಿಚಾರಗಳು ಸುದ್ದಿಯಾಗುತ್ತಲೇ ಇದ್ದವು.. ಕೆಲವೊಂದಕ್ಕೆ ಖುದ್ದು ಮೇಘನಾ ರಾಜ್ ಅವರೇ ಸ್ಪಷ್ಟನೆ ನೀಡಿದ್ದರು.. ಮತ್ತೆ ಕೆಲವನ್ನು ನಿರ್ಲಕ್ಷಿಸಿ ಸುಮ್ಮನಾಗುತ್ತಿದ್ದರು.. ಆದರೆ ಕಳೆದ ಎರಡು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಮೇಘನಾ ಮಗುವಿನ ಹೊಸ ವೀಡಿಯೋ ಇದು ಎಂದು ಬೇರೆ ಯಾವುದೋ ಮಗುವಿನ ವೀಡಿಯೋವನ್ನು ಯಾರೋ ಹರಿಬಿಟ್ಟಿದ್ದರು.. ವೀಡಿಯೀ ಬಹಳಷ್ಟು ವೈರಲ್ ಆಗಿತ್ತು.. ಅದು ನಿಜವಾಗಲೂ ಮೇಘನಾರ ಮಗುವೇ ಎಂದು ಬಹಳಷ್ಟು ಜನರು ಅಂದುಕೊಂಡಿದ್ದರು.. ಆದರೆ ಇದೀಗ ಖುದ್ದು ಮೇಘನಾ ಅವರೇ ಆ ಮಗುವಿನ ಫೋಟೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ..

ಹೌದು ಮೇಘನಾರ ಮಗು ಎಂದು ವೈರಲ್ ಆದ ಮಗುವಿನ ಫೋಟೋ ಹಂಚಿಕೊಂಡಿರುವ ಮೇಘನಾ ರಾಜ್ ಅವರು.. “ಈ ಮಗು ನಿಜಕ್ಕೂ ಬಹಳ ಮುದ್ದಾಗಿದೆ.. ಆದರೆ ಕ್ಷಮಿಸಿ ಇದು ಜೂನಿಯರ್ ಚಿರು ಅಲ್ಲ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಮೇಘನಾ ಹಾಗೂ ಮಗುವಿನ ವಿಚಾರದಲ್ಲಿ ಇದು ಹೊಸದೇನಲ್ಲ.. ಈ ಮೊದಲು ಮೇಘನಾಗೆ ಅವಳಿ ಜವಳಿ ಮಗು ಆಗಿದೆ ಎಂದೂ ಸಹ ಹೆರಿಗೆಗೂ ಮುನ್ನವೇ ಸುದ್ದಿಯಾಗಿತ್ತು.. ಈ ವಿಚಾರವನ್ನು‌ ಮಾದ್ಯಮದ ಜೊತೆ ಮಾತನಾಡುವ ಸಮಯದಲ್ಲಿಯೂ ತಿಳಿಸಿದ್ದರು.. ಇದೀಗ ಮತ್ತೊಮ್ಮೆ ಇದೇ ರೀತಿಯಾಗಿದ್ದು ಖುದ್ದು ಮೇಘನಾರೇ ಸ್ಪಷ್ಟನೆ ನೀಡುವಂತಾಗಿದೆ.. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ಚಿಂತಿಸಬೇಡಿ.. ನಾವುಗಳು ಇದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುವುದಿಲ.. ಜೂನಿಯರ್ ಚಿರು..‌ ನೀವು ಹಾಗೂ ನಿಮ್ಮ ತಂದೆ ತಾಯಿ ಆದಷ್ಟು ಬೇಗ ಕೊರೊನಾದಿಂದ ಚೇತರಿಸಿಕೊಂಡು ಗುಣಮುಖರಾಗಿ ಮತ್ತೆ ಸಂತೋಷದ ವಾತಾವರಣ ಮನೆಯಲ್ಲಿ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •