ಸುಂದರ್ ರಾಜ್ ಅವರ ಕುಟುಂಬ ಹಾಗೂ ಸರ್ಜಾ ಕುಟುಂಬದಲ್ಲಿ ನೋವುಗಳು ಮರೆಯಾಗಿ ನಿನ್ನಿಯಿಂದ ಸಂಭ್ರಮ ಮುಗಿಲು ಮುಟ್ಟಿದೆ.. ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ.. ಚಿರು ಮರುಜನ್ಮ ಪಡೆದು ಮೇಘನಾರಿಗೆ ಮಗುವಾಗಿ ಹುಟ್ಟಿ ಬಂದಿದ್ದಾರೆ.. ಈ ಸಮಯದಲ್ಲಿ ಮೇಘನಾ ರಾಜ್ ಅವರ ಅಣ್ಣ ತೇಜ್ ಅವರು ಮಗುವಿಗೆ ಸೋದರ ಮಾವನಾಗಿದ್ದು ವಿಶೇಷ ರೀತಿಯಲ್ಲಿ ಉಡುಗೊರೆ ನೀಡಿದ್ದಾರೆ..

ಹೌದು ಮೇಘನಾ ರಾಜ್ ಅವರು ನಿನ್ನೆ ಬೆಳಿಗ್ಗೆ 11.07 ಕ್ಕೆ ಅಕ್ಷ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ಎರಡೂ ಕುಟುಂಬಗಳು ಆಸ್ಪತ್ರೆಯಲ್ಲಿಯೇ ಹಾಜರಿದ್ದು ಮಗುವನ್ನು ಸಂತೋಷದಿಂದ ಬರಮಾಡಿಕೊಂಡರು.. ಈ ಸಮಯದಲ್ಲಿ ಮಾತನಾಡಿದ ಮೇಘನಾ ಅವರ ಅಣ್ಣ ತೇಜ್.. ನನ್ನ ತಂಗಿ ಬಹಳ ಧೈರ್ಯವಂತೆ.. ಕಳೆದ ನಾಲ್ಕು ತಿಂಗಳು ಮಗುವಿಗಾಗಿ ಅವಳು ಗಟ್ಟಿ ಮನಸ್ಸು ಮಾಡಿಕೊಂಡು ದಿಟ್ಟವಾಗಿ ಇದ್ದದ್ದನ್ನು ನೋಡಿದ್ದೇನೆ..

Meghana

ಅವಳು ನನ್ನ ತಂಗಿ ಎಂದು ಹೇಳಲು ಹೆಮ್ಮೆಯಾಗುತ್ತದೆ.. ಮಗು ಸಂಪೂರ್ಣವಾಗಿ ಚಿರು ರೀತಿಯೇ ಇದೆ.. ಕಣ್ಣು ಕೂದಲು ಮೂಗು ಎಲ್ಲವೂ ಚಿರುವಿನ ಪ್ರತಿರೂಪವೇ‌‌.. ಈ ಕಂದನಿಗೆ ಸಿಕ್ಕ ವೆಲ್ಕಮ್ ಬೇರೆ ಯಾರಿಗೂ ಸಿಕ್ಕಿರಲು ಸಾಧ್ಯವಿಲ್ಲ.. ಜೂನಿಯರ್ ಚಿರು ಸದಾಕಾಲ ಸಂತೋಷವಾಗಿ ಬಾಳಬೇಕು ಎನ್ನುವುದೇ ನನ್ನ ಹಾರೈಕೆ.. ನಿಮ್ಮೆಲ್ಲರ ಆಶೀರ್ವಾದ ಮೇಘನಾ ಹಾಗೂ ಮಗುವಿನ ಮೇಲೆ ಸದಾ ಹೀಗೆ ಇರಲಿ ಎಂದು ಕೇಳಿಕೊಂಡಿದ್ದಾರೆ‌‌..

ಇನ್ನು ಮಗುವಿಗೆ ಸೋದರ ಮಾವನಾದ ಸಂಭ್ರಮದಲ್ಲಿರುವ ತೇಜ್ ಅವರು ವಿಶೇಷ ರೀತಿಯಲ್ಲಿ ಉಡುಗೊರೆ ನೀಡಿದ್ದಾರೆ.. ಹೌದು ಸೋದರ ಮಾವ ಅನ್ನೋದೆ ಬಹಳ ಸ್ಪೆಷಲ್.. ಈ ಸಮಯದಲ್ಲಿ ತೇಜ್ ನಿನ್ನೆಯ ದಿನವನ್ನು ಇನ್ನೂ ಸಹ ವಿಶೇಷವನ್ನಾಗಿಸಿದ್ದಾರೆ.. ಹೌದು ಸಾಮಾನ್ಯವಾಗಿ ಸಿನಿಮಾ ನಟರು ತಮ್ಮ ತಮ್ಮ ಹುಟ್ಟುಹಬ್ಬಗಳಲ್ಲಿ ಸಿನಿಮಾಗಳ ಟೀಸರ್ ಅಥವಾ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವುದನ್ನು ನೋಡಿದ್ದೇವೆ.. ಆದರೆ ತೇಜ್ ಅವರು ಮಾತ್ರ ತಮ್ಮ ಅಳಿಯ ಹುಟ್ಟಿದ ದಿನ ತಮ್ಮ ಸಿನಿಮಾದ ಮ್ಯಾಸಿವ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •