ಮೇಘ ಶೆಟ್ಟಿ.. ಕನ್ನಡ ಕಿರುತೆರೆ ಲೋಕದಲ್ಲಿ ಅಪಾರ ಹೆಸರು ಮಾಡಿರುವ ಕರಾವಳಿ ಚೆಲುವೆ.. ಕನ್ನಡಿಗರ ಮನಸ್ಸು ಗೆದ್ದ ಈ ನಟಿ ಕಮಾಲ್ ಮಾಡಿದ್ದು ಜೊತೆ ಜೊತೆಯಲಿ ಧಾರಾವಾಹಿ ಮೂಲಕ.. ಜೊತೆ ಜೊತೆಯಲಿ ಅನುವಾಗಿ ಜನ ಸಾಮಾನ್ಯರ ತಲುಪಿದ ಮೇಘರವರ ನಗು ಕೂಡ ಒಂದೇ ಸಮನೆ ಸುರಿಯುವ ಮಳೆಯಂತೆ.. ಸದಾ ನಗು ಮೊಗದಿ ಸಾಮಾಜಿಕ ಜಾಲತಾಣಗಳಲ್ಲಿ ಹೈ ಆಕ್ಟೀವ್ ಇರುವ ನಟಿ ಮೇಘ ಶೆಟ್ಟಿ ಐ ಎ ಎಸ್ ಓದುವ ಕನಸಿಟ್ಟುಕೊಂಡಿದ್ದ ಹುಡುಗಿಗೆ ಜೊತೆಜೊತೆಯಲಿ ಧಾರಾವಾಹಿಯ ಅವಕಾಶ ಸಿಕ್ಕಿತು.

ಅದನ್ನು ಒಪ್ಪಿಕೊಂಡು ಅನುವಾಗಿ ಜನರ ಮುಂದೆ ಬಂದರು.. ಧಾರಾವಾಹಿ ಶುರುವಾದ ಎರಡೇ ವಾರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆದರು.. ಅನು ಧಾರಾವಾಹಿಯಿಂದ ಸಿನಿಮಾಗೆ ಕಾಲಿಡುವಂತಾಯಿತು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದರು.. ಈಗ ಲವ್ ಮಾಕ್ಟೈಲ್ ಸಿನಿಮಾದ ಕೃಷ್ಣ ಜೊತೆ ದಿಲ್ ಪಸಂದ್ ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ..

ಜೊತೆಗೆ ಹಲವಾರು ಸಿನಿಮಾಗಳು ಕೂಡ ಮೇಘ ಕೈ ಅಲ್ಲಿದೆ.. ಒಂದು ಸಲ ಸೀರಿಯಲ್ ಇಂದ ಮೇಘ ಹೊರ ನಡೆದು ಸುದ್ದಿಯೂ ಆಗಿದ್ರು. ಆದರೆ ನಗು ಮೊಗದಿ ಖುಷಿ ಖುಷಿಯಾಗಿ ಇರುವ ಅನು ಹಿಂದೆ ನೋವಿನ ಕತೆಯಿದೆ. ಹೌದು ಮೇಘ ಅವರು ತಮ್ಮ ಅಣ್ಣನ ಅಗಲಿಕೆ ಬಗ್ಗೆ ಜೀ ಕುಟುಂಬ ಅವಾರ್ಡ್ಸ್ ಅಲ್ಲಿ ಮಾತನಾಡಿ ದುಖಃ ತೋಡಿಕೊಂಡಿದ್ದಾರೆ. ಮೇಘಾ ಶೆಟ್ಟಿ ಅವರ ತಂದೆ ತಾಯಿಗೆ ಒಟ್ಟು ನಾಲ್ವರು ಮಕ್ಕಳು..

ಒಬ್ಬ ಗಂಡು ಮಗ ಹಾಗೂ ಮೂವರು ಹೆಣ್ಣು ಮಕ್ಕಳು.. ಆದರೆ ಮೇಘಾ ಶೆಟ್ಟಿಗೆ ಮೂರು ವರೆ ವರ್ಷ ವಯಸ್ಸಿದ್ದಾಗಲೇ ಅವರು ತನ್ನ ಅಣ್ಣನನ್ನು ಕಳೆದುಕೊಳ್ಳುತ್ತಾರಂತೆ. ಅವರ ಅಣ್ಣ ಜೀ’ವ ಕಳೆದುಕೊಂಡದ್ದು ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.. ಅಷ್ಟಕ್ಕೂ ಮೇಘಾ ಶೆಟ್ಟಿ ಅಣ್ಣ ಇಲ್ಲವಾಗಿದ್ದು ಬೇರೆ ಯಾವ ಸಂದರ್ಭದಲ್ಲಿಯೂ ಅಲ್ಲ.. ಅದು ವರನಟ ಡಾ ರಾಜ್ ಕುಮಾರ್ ಅವರ ಅಂ’ತಿ’ಮ ಸಂ’ಸ್ಕಾ’ರದ ದಿನದಂದು.. ಮೇಘ ಅವರ ಅಣ್ಣ, ಅಣ್ಣಾವ್ರ ಅಪ್ಪಟ ಅಭಿಮಾನಿ. ಅದು ಡಾಕ್ಟರ್ ರಾಜಕುಮಾರ್ ಅವರು ಬದುಕಿಗೆ ವಿ’ದಾ’ಯ ಹೇಳಿ ಹೊರಟ ದಿನ..

ಕೊನೆಯ ಬಾರಿ ಅಣ್ಣಾವ್ರನ್ನ ನೋಡಲು ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.. ಆಗ ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಪೊಲೀಸರು ಹರ ಸಾಹಸ ಪಟ್ಟಿದ್ರಂತೆ.. ಆದರೂ ಆತ ಸಂದರ್ಭದಲ್ಲಿ 8 ಜನರು ಆ ದಿನ ಸ’ತ್ತು ಹೋಗಿ ಸುದ್ದಿಯಾಗಿದ್ರು.. ಆ 8 ಜನರಲ್ಲಿ ಒಬ್ಬರೇ ಮೇಘ ಶೆಟ್ಟಿ ಅವರ ಅಣ್ಣ ಆಗಿದ್ರು.. ಅಣ್ಣನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮೇಘ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಈಗಲೂ ಕೂಡ ನುಂಗಲಾಗದ ಕಹಿ ಸತ್ಯವಾಗಿ ಉಳಿದುಕೊಂಡಿದೆ. ಅಂತ ಖುದ್ದು ಮೇಘ ಅವರೇ ಹೇಳಿ ಕಂಬನಿ ಮಿಡಿದಿದ್ದಾರೆ.. ನೋಡಿ ಸ್ನೇಹಿತರೆ, ನಗುವ ಸುಂದರ ಮುಖದಲ್ಲಿ ಸಾಕಷ್ಟು ನೋವಿರುತ್ತದೆ ಅನ್ನೋದಕ್ಕೆ ಮೇಘ ಶೆಟ್ಟಿ ಅವರೇ ಸಾಕ್ಷಿ ಆಗಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!