megha-shetty

ಜೊತೆಜೊತೆಯಲಿ ಧಾರಾವಾಹಿ ನಟಿಸದೆ ಇದ್ದಿದ್ರೆ,ಇದನ್ನ ಮಾಡ್ತಿದ್ದೆ!ನಟಿ ಮೇಘ ಶೆಟ್ಟಿಯಾ ಗುರಿ ಏನು.?

Home Kannada News/ಸುದ್ದಿಗಳು
 • ಕನ್ನಡದ ಖ್ಯಾತ ನಟ ಅನಿರುದ್ಧ್ ಹಾಗೂ ಮೇಘ ಶೆಟ್ಟಿ ನಟಿಸುತ್ತಿರೋ ಕನ್ನಡದ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’. ಸೌತ್ ಇಂಡಿಯಾದ ಕಿರುತೆರೆಯಲ್ಲಿ ನಂ.1 ಧಾರಾವಾಹಿಯಾಗಿ ದಾಖಲೆ ಬರೀತಿರೋ ಈ ಕನ್ನಡದ ಧಾರಾವಾಹಿಯ ನಟಿ ಮೇಘ ಶೆಟ್ಟಿ ನ್ಯೂಸ್ ಫಸ್ಟ್ ಇನ್ಸ್ ಟಾಗ್ರಾಮ್ ಲೈವ್ ಬಂದಿದ್ರು.
 • ಲಾಕ್ ಡೌನ್ ಸಮಯ ಕಷ್ಟವಾಗಿದ್ರೂ, ಸರ್ಕಾರ ನಮ್ಮೆಲ್ಲರಿಗಾಗಿ ಮಾಡಿರೋ ರೂಲ್ಸ್ ಫಾಲೋ ಮಾಡಲೇಬೇಕು, ಆದ್ರೆ ಪಾಸಿಟಿವ್ ಆಗಿ ತಗೊಂಡ್ರೆ ಮನೆಯವರಿಗೆ ಸಮಯ ಕೊಟ್ಟಂತಾಗುತ್ತೆ, ಸದ್ಯ ಅವರು ಮನೆಯಲ್ಲಿ ತಂದೆ, ತಾಯಿ ಇಬ್ಬರು ಅಕ್ಕಂದಿರ ಜೊತೆ ಅಡಿಗೆ, ಮನೆ ಕೆಲಸ ಮಾಡ್ತಾ ಆರಾಮಾಗಿ ಕಾಲ ಕಳೀತಿದ್ದಾರಂತೆ.

  ಮೇಘ ಶೆಟ್ಟಿ ಅವರಿಗೆ ಕಿರುತೆರೆಗೆ ಬರದೇ ಇದ್ದಿದ್ರೆ, ಐ ಎ ಎಸ್ ಮಾಡಬೇಕು ಅನ್ನೋ ಮಹತ್ವಾಕಾಂಕ್ಷೆ ಇತ್ತಂತೆ. ಇವತ್ತಿಗೂ ಆ ಆಸೆ ಹಾಗೆಯೇ ಉಳಿದಿದ್ದು ಮುಂದೆ ಸಮಯ ಒದಗಿ ಬಂದ್ರೆ ಐಎಎಸ್ ಮಾಡ್ತೀನಿ ಎಂದ್ರು. ಇನ್ನು, ಲಾಕ್ ಡೌನ್ ಮುಗಿಯುತ್ತಿದ್ದಂತೆ ಸೀರಿಯಲ್ ಶೂಟಿಂಗ್ ಆದಷ್ಟು ಬೇಗ ಶುರುವಾಗುತ್ತೆ. ಶುರುವಾಗ್ತಿದ್ದಂತೆ ನಾನು ತಿಳಿಸಿಕೊಡ್ತೀನಿ ಅಂತಲೂ ಹೇಳಿದ್ದಾರೆ.

  ಇನ್ನು, ಅನಿರುದ್ಧ್ ಸರ್ ಜೊತೆ ಆ್ಯಕ್ಟ್ ಮಾಡ್ತಿರೋದು ತುಂಬಾ ಖುಷಿಯಿದೆ. ಅನಿರುದ್ಧ್ ಸರ್ ಶೂಟಿಂಗ್ ಮಾಡುವಾಗ ನಟನೆ ಹೇಳಿಕೊಡ್ತಾರೆ, ಅವರು ತುಂಬಾ ಪಾಸಿಟಿವ್. ನಾನು ಹೊಸಬಳು, ಧಾರಾವಾಹಿಯಲ್ಲಿ ಎಲ್ಲಾ ಹಿರಿಯ ಕಲಾವಿದರು. ಆದ್ರೆ ಎಲ್ಲರೂ ಸೆಟ್ ನಲ್ಲಿ ಅಡ್ಜೆಸ್ಟ್ ಆದ್ರು. ಈಗಂತೂ ನನ್ನ ಇಡೀ ಕರ್ನಾಟಕದ ಜನ ಕಂಡುಹಿಡಿದು ಪ್ರೀತಿಯಿಂದ ಮಾತನಾಡಿಸ್ತಾರೆ, ನಂಗೆ ಅದೇ ಖುಷಿ. ನಾವಷ್ಟೇ ಅಲ್ಲ, ಈ ಸೀರಿಯಲ್ ಹಿಂದೆ ಕೆಲಸ ಮಾಡೋ ಟೆಕ್ನಿಷಿಯನ್ಸ್ ಪರಿಶ್ರಮ ಹೆಚ್ಚಿಗೆ ಇದೆ. ಅವರಿಗೆಲ್ಲಾ ಹ್ಯಾಟ್ಸ್ ಆಫ್ ಎಂದ್ರು.

  megha-shetty

  ಅನಿರುದ್ಧ್ ಸರ್ ಹಾಗೂ ನೀವು ಯಾಕೆ ಸಿನಿಮಾ ಮಾಡಬಾರದು ಅನ್ನೋ ಪ್ರೇಕ್ಷಕರ ಪ್ರಶ್ನೆಗೆ, ಸದ್ಯಕ್ಕೆ ಸೀರಿಯಲ್ ನಲ್ಲಿ ಬ್ಯುಸಿಯಿರೋದ್ರಿಂದ ಕಷ್ಟ, ಮುಂದೊಂದಿನ ಸಾಧ್ಯವಾದ್ರೆ ಖಂಡಿತ ಸಿನಿಮಾ ಮಾಡೋ ಆಸೆಯಿದೆ ಎಂದ್ರು. ಹಾಗೇ ಸಾಕಷ್ಟು ಆಫರ್ ಗಳು ಬರ್ತಿವೆ. ಈ ಸೀರಿಯಲ್ ನಲ್ಲೇ ನಾ ಬ್ಯುಸಿಯಿದ್ದೀನಿ. ಇದು ಮುಗಿದಮೇಲೆ ಸಿನಿಮಾ ಕಡೆ ಗಮನ ಹರಿಸ್ತೀನಿ. ಕಥೆ ಚೆನ್ನಾಗಿದೆ ಅಂದ್ರೆ ಖಂಡಿತ ಯಾವ ಸ್ಟಾರ್ ನಟರ ಜೊತೆಗಾದ್ರೂ ಹೀರೋಯಿನ್ ಆಗಿ ನಟಿಸುವ ಆಸೆಯಿದೆ ಎಂದ್ರು.

  ಹಾಗೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ತುಂಬಾನೇ ಇಷ್ಟ. ಅವರ ಜೊತೆ ನಟಿಸೋಕೆ ಖಂಡಿತ ಆಸೆಯಿದೆ ಎಂದ್ರು. ಕೊನೆಯದಾಗಿ ಸೀರಿಯಲ್ ನ ಟೈಟಲ್ ಟ್ರ್ಯಾಕ್ ನೂರು ಜನ್ಮ ಕೂಡಿಬಾಳುವ ಜೋಡಿ ನಮ್ಮದು ಅಂತಾ ಹಾಡಿ ರಂಜಿಸಿದ್ರು. ಎಲ್ಲರೂ ಮನೆಯಲ್ಲಿ ಸೇಫ್ ಆಗಿರಿ. ಆರೋಗ್ಯವಾಗಿರಿ, ಹುಷಾರಾಗಿರಿ ಅಂತಾ ಪ್ರೇಕ್ಷಕರಲ್ಲಿ ಕೇಳಿಕೊಂಡ್ರು.

  ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...

ಇದನ್ನು ಓದಿ, << ಇಲ್ಲಿ ಒತ್ತಿ >>