ದಿನ ನಿತ್ಯ ಹಲವಾರು ಧಾರಾವಾಹಿಗಳು ದೂರದರ್ಶನದಲ್ಲಿ ಬರುತ್ತದೆ, ಅದರಲ್ಲಿ ಕೆಲವು ಧಾರಾವಾಹಿಗಳು ನಮ್ಮ ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಕೆಲವೊಂದು ಧಾರಾವಾಹಿಗಳನ್ನು ನೋಡಿದ ನಂತರ ನಮಗೆ ಇದು ಯಾವಾಗ ಮುಗಿಯುತ್ತದೆ ಎಂಬ ಭಾವ ಬರುತ್ತದೆ ಇನ್ನು ಕೆಲವು ಧಾರಾವಾಹಿಗಳು ಹಲವು ವರ್ಷಗಳಿಂದ ಪ್ರಸಾರವಾಗುತ್ತಿದ್ದರೂ ನಮಗೆ ಯಾವುದೇ ರೀತಿಯ ಬೇಜಾರು ಬರುವುದಿಲ್ಲ. ಯಾವುದೇ ಸೀರಿಯಲ್ ನ ಕಥೆ ಪ್ರೇಕ್ಷಕರಿಗೆ ಹತ್ತಿರವಾಗಬೇಕು ಎಂದರೆ ಆ ಕಥೆಯು ಅವರ ಜೀವನಕ್ಕೆ ಹೊಂದುವಂಥದ್ದು ಇರಬೇಕು. ಇಂತಹ ಕತೆಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿಯು ಕೂಡ ಒಂದು.

Megha-Shetty

ಈ ಧಾರಾವಾಹಿಯು 2019 ರಲ್ಲಿ ಶುರುವಾಗಿತ್ತು.ಇಡೀ ಕನ್ನಡ ಧಾರಾವಾಹಿಯ ರಂಗದಲ್ಲಿ ಅತ್ಯಂತ ಪ್ರಸಿದ್ಧವಾದಂತಹ ಧಾರಾವಾಹಿ ಎಂದರೆ ಅದು ಜೊತೆಜೊತೆಯಲಿ ಎಲ್ಲರ ಮನೆ ಮನೆಯಲ್ಲೂ ಕೂಡ ಅದು ದೊಡ್ಡ ಮಟ್ಟದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹಾಗೆ ಅಲ್ಲಿ ನಟಿಸುವಂಥ ಆರ್ಯವರ್ಧನ್ ಆಗಲಿ ಅಥವಾ ಆಗಲಿ ಎಲ್ಲರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದ್ದರು.

ಧಾರಾವಾಹಿಯಲ್ಲಿ ಆರ್ಯವರ್ಧನ್ ಒಬ್ಬ ಬಿಸಿನೆಸ್ ಮನ್ ರಾಗಿರುತ್ತಾರೆ ಅವರು ಅನು ಎಂಬುವಳ ಜೊತೆ ಪ್ರೇಮಕ್ಕೆ ಮೀರುತ್ತಾರೆ ಅವರ ವಯಸ್ಸಿನ ಅಂತರ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಆದರೂ ಅವರ ನಡುವೆ ಪ್ರೇಮ ಹುಟ್ಟುತ್ತದೆ. ಇದು ಎಲ್ಲ ಪ್ರೇಕ್ಷಕರಿಗೂ ಮನಮುಟ್ಟಿದ ವಿಷಯ. ಇದು ಅವರ ಧಾರಾವಾಹಿಯ ಪಾತ್ರಗಳು ಆದರೆ ನಿಜಜೀವನದಲ್ಲಿ ಅವರ ವಯಸ್ಸು ಎಷ್ಟು ಎಂಬ ಕುತೂಹಲ ನಮ್ಮಲ್ಲಿ ಕಾಡುತ್ತಾ ಇರುತ್ತದೆ.

Megha-Shetty

ಧಾರಾವಾಹಿಯಲ್ಲಿ ಅನು ಎಂಬ ಪಾತ್ರವನ್ನು ಮಾಡಿದ್ದ ಮೇಗಾ ಶೆಟ್ಟಿಯವರು ಮೂಲತಃ ಮಂಗಳೂರಿನವರು ಅವರ ವಯಸ್ಸು ಈಗ 22 ವರ್ಷ ಮಾತ್ರ. ಇವರು ತಮ್ಮ ಧಾರಾವಾಹಿ ಲೋಕಕ್ಕೆ ಪಾದಾರ್ಪಣೆ ಮಾಡಿರುವುದು ಜೊತೆ ಜೊತೆಯಲಿ ಧಾರಾವಾಹಿಯಿಂದ. ಇವರಿಗೆ ದೊಡ್ಡ ಐಎಎಸ್ ಆಫೀಸರ್ ಆಗಬೇಕೆಂಬ ಆಸೆ ಇತ್ತಂತೆ ಆದರೆ ಅವರು ಈಗ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಇದರ ಜತೆಜತೆಗೆ ಆ ಕನಸನ್ನು ಕೂಡ ಪೂರ್ಣಗೊಳಿಸುವ ಆಸೆಯಲ್ಲಿದ್ದಾರೆ ಮೆಗಾ. ಇವರ ಅಕ್ಕ ಕೂಡ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಟನೆಯನ್ನು ಮಾಡುತ್ತಾರೆ. ಮೆಗಾ ಶೆಟ್ಟಿ ಅವರು ಬೆಳೆದಿದ್ದು ಹಾಗೂ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದು ಬೆಂಗಳೂರಿನಲ್ಲಿಯೇ. ಇವರು MBA ಅನ್ನು ಪೂರ್ಣಗೊಳಿಸಿ ನಂತರ ಧಾರಾವಾಹಿಯ ಆಡಿಷನ್ ಗಳಲ್ಲಿ ಪಾಲ್ಗೊಂಡು ಈಗ ಯಶಸ್ವಿಯಾದ ನಟಿಯಾಗಿ ಹೊರಹೊಮ್ಮಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •