ನ್ಯಾಯಾಲಯದಲ್ಲಿ ಎಲ್ಲರ ಸಮ್ಮುಖದಲ್ಲಿ ಭಗವಾನ್ ಅವರಿಗೆ ಮೀರ ರಾಘವೇಂದ್ರ ಅವರು ಮಸಿ ಬಳಿದಿದ್ದು, ಸಾಕಷ್ಟು ಸಂಚಲನವನ್ನು ಉಂಟು ಮಾಡಿದ್ದಂತೂ ನಿಜ.! ಈ ಕುರಿತು ಮಾಧ್ಯಮದವರು ಮೀರ ರಾಘವೇಂದ್ರ ಅವರ ಬೆನ್ನತ್ತಿ ಪ್ರಶ್ನಿಸಿದಾಗ ಸ್ವತಃ ಅವರು ಈ ಕುರಿತು ಮಾತನಾಡಿರುವುದು ಹಾಗೂ ನೀಡಿರುವ ಹೇಳಿಕೆ ಶಾಕಿಂಗ್ ಆಗಿದೆ.ವಕೀಲೆ ಮೀರಾ ರಾಘವೇಂದ್ರ ಅವರು ನ್ಯಾಯಾಲಯದಲ್ಲಿ ಎಲ್ಲರೂ ಬಹಿರಂಗವಾಗಿ ಎಲ್ಲರ ಮುಂದೆಯೇ ಭಗವಾನ್ ಅವರಿಗೆ ಮಸಿ ಬಳೆದರು. ಇದಾದ ಬಳಿಕ ನ್ಯಾಯಾಲಯದಲ್ಲಿ ಸಾಕಷ್ಟು ಕೋಲಾಹಲವೇ ಎದ್ದೇಳಿತು. ಈ ಕುರಿತು ವಕೀಲೆ ಮೀರ ರಾಘವೇಂದ್ರ ಅವರು ನಮ್ಮ ಧರ್ಮದ ಮೇಲೆ ಶ್ಯಾನೆ ಕಟ್ಟೆ ಒಡೆಯಿತು, ನಿರಂತರವಾದ ಹಾವಳಿ ನಡೆಯಿತು. ರಾಮನನ್ನು ಅವಹೇಳನಕಾರಿ ಮಾತುಗಳಿಂದ ಅವಮಾನಿಸಿದರು, ಜಾತಿಯ ನಿಂದನೆ ಅಪಹಾಸ್ಯ, ಹಿಂದೂ ಧರ್ಮಕ್ಕೆ ನಿರಂತರವಾಗಿ ಬೈಗುಳವನ್ನು ನೀಡುತ್ತಿದ್ದರು.

Meera-Raghavendra

ಹಿಂದೂ ಪದವೇ ಅವಮಾನಕರ ಪದವನ್ನು ಬಳಸಿ, ಮಾನ ಮರ್ಯಾದೆ ನಾಚಿಕೆ ಇರುವವರು ಬಳಸಬಾರದು ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಹೇಳಿದರು. ಇದನ್ನ ಹೇಳಕ್ಕೆ ಅವರ್ಯಾರು.? ಅವರ್ಯಾರೂ ಅದನ್ನು ಹೇಳೋದಿಕ್ಕೆ ನಿರಂತರವಾಗಿ ನಿರಂತರವಾಗಿ ಅವರು ಹೇಳಿದ್ದನ್ನು ಗಮನಿಸುತ್ತಿದ್ದೆ ನನಗೆ ಇದು ಸ್ವಲ್ಪವೂ ಸರಿ ಅನಿಸಲಿಲ್ಲ, ಅವರು ನನ್ನ ಎದುರುಗಡೆ ಮುಖಾಮುಖಿಯಾಗಿ ಸಿಕ್ಕರು, ಆಗ ನಾನು ನನ್ನ ಉದ್ದೇಶವನ್ನು ಈಡೇರಿಸಿಕೊಂಡೆ.ಈ ಹಿಂದೆ ವಕೀಲೆ ಮೀರಾ ರಾಘವೇಂದ್ರ ಅವರು ಭಗವಾನ್ ಅವರ ವಿರುದ್ಧ ಕಂಪ್ಲೇಂಟನ್ನು ದಾಖಲಿಸಿದ್ದರು. ಆ ಪ್ರಕರಣದಲ್ಲಿ ಅವರಿಗೆ ಬೇಲ್ ದೊರಕಿತು. ಇದೇ ವಿಚಾರಕ್ಕೆ ಮೀರ ರಾಘವೇಂದ್ರ ಅವರು ದ್ವೇಷವನ್ನು ಸಾಧಿಸುವ ನಿಟ್ಟಿನಲ್ಲಿ ಮಸಿ ಬಳಿದಿದ್ದಾರೆ ಎಂಬ ಆರೋಪ ಇದೆ ಇದಕ್ಕೇನು ಉತ್ತರ ಎಂದಾಗ.

ವಕೀಲೆಯಾಗಿ ನನಗೂ ಗೊತ್ತು ಬೇಲ್ ಯಾವಾಗ ಸಿಗುತ್ತದೆ ಎಂಬ ಅರಿವು ಕೂಡ ನಮಗಿರುತ್ತದೆ. ನ್ಯಾಯಾಲಯದ ಮುಂದೆ ಹಾಜರಿದ್ದರೆ ಖಂಡಿತ ಬೇಲ್ ಸಿಗಲಿದೆ. ಅದರ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿದೆ. ಮಸಿ ನಾನು ಮುಂಚಿತವಾಗಿಯೇ ತಂದಿಟ್ಟುಕೊಂಡಿರಲಿಲ್ಲ. ಅದಕ್ಕೂ ಮುನ್ನ ಎಲ್ಲರಿಗೂ ಸ್ಪಷ್ಟಪಡಿಸಬೇಕಾದ ವಿಚಾರ, ಕೋರ್ಟ್ ಆವರಣದಲ್ಲಿ ನಡೆದಿರುವುದು ಕೋರ್ಟ್ ಒಳಗಲ್ಲ.! ಅವರು ಬೇಲ್ ಪಡೆಯಲು ಕೋರ್ಟ್ ಗೆ ಹಾಜರಾಗಿದ್ದು ನನಗೆ ತಿಳಿಯಿತು. ಆಗ ಅವ್ರಿಗೆ ಒಂದಿಷ್ಟು ಸಮಯವಿತ್ತು ನಾನು ಆ ಸಮಯದಲ್ಲಿ ಈ ನಿರ್ಧಾರವನ್ನು ಮಸಿಬಳಿಯುವ ನಿರ್ಧಾರವನ್ನು ಕೈಗೊಂಡೆ.ನನಗೆ ಭಗವಾನ್ ಅವರು ನನ್ನ ಕುರಿತು ಕಂಪ್ಲೇಂಟ್ ಕೊಟ್ಟಿರುವುದು ಬಹಳ ಖುಷಿಯಿದೆ.

ಒಂದು ಧರ್ಮದ ಹೋರಾಟದಲ್ಲಿ ನಾನು ಇದ್ದೇನೆ ಎಂಬುದು ನನಗೆ ಸಂತೋಷವಿದೆ. ಈ ವಿಚಾರವಾಗಿ ನಾನು ನಿರಂತರವಾಗಿ ಹೋರಾಡಲು ಸಿದ್ಧಳಿದ್ದೇನೆ ಇದಕ್ಕೆ ಸಂಬಂಧಿಸಿದಂತೆ ನಾನು ಸೆಣಸಾಡಲು ಸಿದ್ಧ. ನಾನೊಬ್ಬಳು ವಕೀಲೆ ನನಗೂ ಗೊತ್ತಿದೆ ಯಾವ ರೀತಿ ಹೋರಾಡಬೇಕು ಎಂಬುದು. ಟೀಕೆ ಕೇವಲ ಎಡಬಿಡಂಗಿಗಳು ಮಾತ್ರ ಮಾಡಲು ಸಾಧ್ಯ ಅದು ಕೊಂಚ ಅಷ್ಟೆ ಎಂಬುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಇದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ವಿನಃ ಯಾರೂ ಟೀಕಿಸಿ ವಿರೋಧಿಸುವವರು ತೀವ್ರ ಕಡಿಮೆ ಎಂದು ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •