ಕನ್ನಡ ಕಿರುತೆರೆಯ ಮೂಲಕ ಹಲವಾರು ನಟಿಯರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂತಹ ನಟಿಯರಲ್ಲಿ ನಟಿ ಮಯೂರಿ ಕೂಡ ಒಬ್ಬರು. ಹೌದು ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಅಶ್ವಿನಿ ಅವರು ಸಾಕಷ್ಟು ಖ್ಯಾತಿಯನ್ನು ಗಳಿಸಿದರು. ಇನ್ನು ಇವರು ನಂತರದಲ್ಲಿ ಕೃಷ್ಣ ಲೀಲಾ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೃಷ್ಣ ಲೀಲಾ ಚಿತ್ರದಲ್ಲಿ ನಟ ಅಜಯ್ ರಾವ್ ಅವರೊಂದಿಗೆ ನಟಿಸಿ ಸೈ ಎನಿಸಿಕೊಂಡರು. ನಂತರದಲ್ಲಿ ಅವರು ಕರಿಯ 2, 8 ಎಂಎಂ, ಆಟಕ್ಕುಂಟು ಲೆಕ್ಕಕ್ಕಿಲ್ಲ, ನನ್ನ ಪ್ರಕಾರ, ಮೌನಂ, ಇಷ್ಟಕಾಮ್ಯ ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಅಷ್ಟೇ ಅಲ್ಲದೆ ಇತ್ತೀಚೆಗೆ ತೆರೆಕಂಡ ಪೊಗರು ಸಿನಿಮಾದಲ್ಲಿ ಕೂಡ ಅವರು ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಕಿರುತೆರೆಯ ಧಾರಾವಾಹಿಯ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮಯೂರಿ ಇತ್ತೀಚಿಗಷ್ಟೇ ಗರ್ಭಿಣಿಯಾಗಿದ್ದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

Mayuri

ಹೌದು ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಮಯೂರಿ ಅವರು ಕಳೆದ ವರ್ಷದಲ್ಲಿ ಲಾಕ್ ಡೌನ್ ಸಮಯದಲ್ಲಿ ಜೂನ್ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟಿ ಮಯೂರಿ ಅವರು ತಮ್ಮ ಗೆಳೆಯ ಅರುಣ ಎಂಬುವರನ್ನು ಮದುವೆಯಾದರು. ಇನ್ನು ಮದುವೆಯಾಗಿ ಕೆಲವು ತಿಂಗಳುಗಳಲ್ಲಿ ಸಿಹಿಸುದ್ದಿಯನ್ನು ಕೂಡ ನೀಡಿದರು. ಇದೀಗ ನಟಿ ಮಯೂರಿ ಅವರು ಗರ್ಭಿಣಿಯಾಗಿದ್ದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಶೂಟ್ ನಲ್ಲಿ ಮಯೂರಿ ಅವರು ಸಕತ್ತಾಗಿ ಕಾಣಿಸಿಕೊಂಡಿದ್ದಾರೆ.

ಹೌದು ನಟಿ ಮಯೂರಿ ಅವರು ಅಂಬಿಕಾ ಫೋಟೋಗ್ರಾಫಿ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಇನ್ನು ಅವರು 5 ತಿಂಗಳ ಗರ್ಭಿಣಿ ಆಗಿದ್ದಾಗಲೂ ಕೂಡ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ಫೋಟೋಗಳಲ್ಲಿ ಪತಿ ಅರುಣ ಅವರ ಜೊತೆ ಫೋಟೋ ಕೂಡ ಹೊಡಿಸಿ ಕೊಂಡಿದ್ದಾರೆ. ನಟಿ ಮಯೂರಿ ಅವರು ಲ್ಯಾವೆಂಡರ್ ಕಲರ್ ನೆಟ್ ಗೌನ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಗಾಗಲ್ ಹಾಕಿಕೊಂಡು ಮಾಡರ್ನ್ ಲುಕ್ ನಲ್ಲಿ ಕೂಡ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಅವರ ಫೋಟೋಗಳನ್ನು ನೀವು ಇಲ್ಲಿ ವೀಕ್ಷಿಸಬಹುದು. ಇನ್ನು ನಟಿ ಮಯೂರಿ ಅವರ ಈ ಫೋಟೋಗಳು ನಿಮಗೆ ಇಷ್ಟವಾಗಿದ್ದರೆ ಸುದ್ದಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

 

View this post on Instagram

 

A post shared by mayuri (@mayurikyatari)

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •