ಫತೇಪುರ್ ಪೊಲೀಸರು ನೇಪಾಳದ ಮೌಲ್ವಿಯನ್ನು ಉತ್ತರ ಪ್ರದೇಶದ ಗಾಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಬಂಧಿಸಿದ್ದಾರೆ. ಮೌಲಾನಾ ಕಳೆದ 15 ವರ್ಷಗಳಿಂದ ಭಾರತದಲ್ಲಿ ನಕಲಿ ಗುರುತುಗಳು ಮತ್ತು ದಾಖಲೆಗಳೊಂದಿಗೆ ವಾಸಿಸುತ್ತಿದ್ದಾನೆ‌. ಈತನ ಮೇಲೆ ಇಲ್ಲಿ ಆತ ಮುಸ್ಲಿಂ ಮಕ್ಕಳನ್ನು ಪ್ರಚೋದಿಸುವ ಮತ್ತು ಹಿಂದೂ ಹುಡುಗಿಯರನ್ನು ಮತಾಂತರ ಮಾಡಿದ ಆರೋಪವೂ ಇದೆ. ಮಸೀದಿ ಸದಸ್ಯರೇ ಈತನ ವಿರುದ್ಧ ದೂರು ನೀಡಿದ್ದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಅವರು ಮಾತನಾಡುತ್ತ, ನೇಪಾಳ ದೇಶದ ಶಂಕಿತ ನಾಗರೀಕರು ಮೇವಾತಿ ಮೊಹಲ್ಲಾ ಪೊಲೀಸ್ ಠಾಣೆ ಘಾಜಿಪುರ ಜಿಲ್ಲೆ ಫತೇಪುರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದನು. ಇಲ್ಲಿ ವಾಸವಾಗಿದ್ದಾಗ, ಈತ 2016 ರಲ್ಲಿ ಈತ ವೋಟರ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದನು. ಒಂದು ಜಂಟಿ ತಂಡವು ತನಿಖೆ ನಡೆಸಿ ನಂತರ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು” ಎಂದು ಹೇಳಿದ್ದಾರೆ. ಈಗ ಈ ಪ್ರಕರಣವನ್ನ ಪೊಲೀಸರು ತನಿಖೆ ನಡೆಸುತ್ತಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.

ಪೊಲೀಸ್ ತನಿಖೆಯ ಸಮಯದಲ್ಲಿ, ಮೌಲಾನಾ ತಾನು ನೇಪಾಳದ ಮಹೋತ್ರಿ ಜಿಲ್ಲೆಯ ನಿವಾಸಿಯಾಗಿದ್ದು, 2001 ರಲ್ಲಿ ಫತೇಪುರಕ್ಕೆ ಬಂದು 5 ವರ್ಷಗಳ ಕಾಲ ಅಲ್ಲಿಯೇ ಇದ್ದೆ. ಇದರ ನಂತರ ನಾನು ಗಾಜಿಪುರಕ್ಕೆ ಬಂದೆ ಮತ್ತು ಅಲ್ಲಿನ ಬಡಿ ಮಸೀದಿಯ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದೆನು ಎಂದು ಹೇಳಿದ್ದಾನೆ. ಮಸ್ಜಿದ್ ಕಮಿಟಿ 2006 ರಲ್ಲಿ ಬಡಿ ಮಸೀದಿಯ ಜವಾಬ್ದಾರಿಯನ್ನು ಈತನಿಗೆ ನೀಡುವ ಮೂಲಕ ಮೌಲ್ವಿಯನ್ನಾಗಿ ಮಾಡಿದರು. ಇಲ್ಲಿ ಈತ ನಮಾಜ್ ಕಲಿಸುವುದರೊಂದಿಗೆ ಮಕ್ಕಳಿಗೆ ಇಸ್ಲಾಮಿಕ್ ಶಿಕ್ಷಣವನ್ನ ನೀಡುತ್ತಿದ್ದನು. ಆದರೆ ಎರಡು ವರ್ಷದಿಂದ ಈತನ ವರ್ತನೆ ಬದಲಾಗಿತ್ತು. ಈತನ ಕೆಲಸಗಳನ್ನ ನೋಡಿದ ಮಸೀದಿಯ ಸದಸ್ಯರು ಆತನನ್ನು ಇಮಾಮ್ ಹುದ್ದೆಯಿಂದ ತೆಗೆದು ಹಾಕಿದರು ಮತ್ತು ಸೆಪ್ಟೆಂಬರ್ 24 ರಂದು ಆತನ ವಿರುದ್ಧ ದೂರು ನೀಡಿದರು.

ಮಸ್ಜಿದ್ ಕಮಿಟಿ ಸದಸ್ಯನಿಂದ ಗಂಭೀರ ಆರೋಪ

ಫತೇಪುರ್ ಮಸೀದಿ ಕಮಿಟಿ ಸದಸ್ಯ ಮಜೀದ್ ಖಾನ್ ಮಾತನಾಡುತ್ತ, ಮುಸ್ಲಿಂ ಯುವಕರಿಗೆ ಮೌಲಾನಾ ತಪ್ಪು ಶಿಕ್ಷಣ ನೀಡುತ್ತಿದ್ದನು. ಫಿರೋಜ್ ಎಲ್ಲಿಂದಲೋ ಇಲ್ಲಿಗೆ ಬಂದನು. ಇದರ ನಂತರ ಆತನನ್ನ ಮಸೀದಿಯಲ್ಲಿ ಜಾಗ ಕೊಡಲಾಯಿತು. ಇಲ್ಲಿ ಆತ ಮೌಲಾನಾ ಆದನು ಮತ್ತು ಮಕ್ಕಳಿಗೆ ಕಲಿಸುವುದನ್ನು ಮುಂದುವರಿಸಿದನು. ಈಗ ಈತ ಇಲ್ಲಿಗೆ ಬಂದು 14-15 ವರ್ಷಗಳೇ ಕಳೆದಿವೆ. ಆದರೆ 2 ವರ್ಷಗಳ ಹಿಂದೆ ಅವನನ್ನು ಮಸೀದಿಯಿಂದ ಹೊರಹಾಕಲಾಯಿತು. ಯಾಕಂದ್ರೆ ಈತ ಮಕ್ಕಳಿಗೆ ತಪ್ಪು ಶಿಕ್ಷಣ ನೀಡುತ್ತಿದ್ದರು. ಆತ ಮಕ್ಕಳಿಗೆ – ‘ಅನ್ಯ ಕೋಮಿನ (ಹಿಂದೂ) ಯುವತಿಯರನ್ನ ಕರೆತನ್ನಿ, ಹಣ, ಮಜಾ ಎರಡೂ ಸಿಗತ್ತೆ’ ಈ ರೀತಿಯಾಗಿ ಆತ ಪ್ರಚೋದನಕಾರಿಯಾಗಿ ಮಕ್ಕಳೆದುರು ಮಾತನಾಡುತ್ತಿದ್ದ ಎಂದು ಹೇಳುತ್ತಾರೆ‌.

ಮಜೀದ್ ಖಾನ್ ಮುಂದೆ ಮಾತನಾಡುತ್ತ, ಒಮ್ಮೆ ಈತ ಒಬ್ಬ ಬ್ರಾಹ್ಮಣ ಹುಡುಗಿಯನ್ನು ಓಡಿಸಿಕೊಂಡು ಕರೆತಂದಿದ್ದ, ನಂತರ ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಿದ ನಂತರ, ಫಿರೋಜ್ ಆಕೆಯನ್ನ ಮದುವೆಯಾದನು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಪೋಲಿಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಫಿರೋಜ್‌ನನ್ನ ಊರಿಂದ ಹೊರಹಾಕಬೇಕು, ಹಾಗೆ ಮಾಡಿದರೆ ಮಾತ್ರ ಹಳ್ಳಿಯ ಒಗ್ಗಟ್ಟು ಒಡೆಯುವುದಿಲ್ಲ” ಎನ್ನುತ್ತಾರೆ. ಈ ವ್ಯಕ್ತಿ ತನ್ನನ್ನು ನೇಪಾಳಿ ಎಂದು ಹೇಳಿಕೊಳ್ಳುತ್ತಾನೆ, ಆದರೆ ಆತ ಬಾಂಗ್ಲಾದೇಶದವನಾಗಿರಬಹುದು ಅಥವಾ ರೋಹಿಂಗ್ಯಾ ಆಗಿರಬಹುದು.

ಏತನ್ಮಧ್ಯೆ, ಆರೋಪಿ ಫಿರೋಜ್ ಆಲಂ ಹೇಳುವ ಪ್ರಕಾರ “ತನ್ನ ವಿರುದ್ಧದ ಮತಾಂತರದ ಆರೋಪಗಳು ಸುಳ್ಳು. ನನ್ನ ಪತ್ನಿ ತೀರಿಕೊಂಡಿದ್ದು ಇಬ್ಬರು ಹೆಣ್ಣು ಮಕ್ಕಳು ನೇಪಾಳದಲ್ಲಿ ವಾಸಿಸುತ್ತಿದ್ದಾರೆ. ನಾನು ಭಾರತದಲ್ಲಿ ಪಡೆದ ಪಾಸ್‌ಪೋರ್ಟ್ ಅನ್ನು ಹಜ್‌ಗೆ ಹೋಗಲು ಮಾಡಿಸಿಕೊಂಡಿದ್ದೆ. ಆದರೆ ಹೋಗಲು ಸಾಧ್ಯವಾಗಲಿಲ್ಲ”. ಈ ಪ್ರಕರಣದಲ್ಲಿ ಆಲಂನ ಇಬ್ಬರು ಸಹಚರರನ್ನು ಪೊಲೀಸರು ಈಗ ಹುಡುಕುತ್ತಿದ್ದಾರೆ. ಈ ಪ್ರಕರಣದಲ್ಲಿ ಉಮರ್ ಗೌತಮ್ ಕನೆಕ್ಷನ್‌ನ್ನೂ ಪೊಲೀಸರು ಹುಡುಕುತ್ತಿದ್ದಾರೆ. ದೇಶಾದ್ಯಂತ ಮತಾಂತರದ ಜಾಲವನ್ನು ಬೀಸಿರುವ ಉಮರ್ ಕಳೆದ 10 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಈಗ ಉಮರ್ ಗಾಜಿಪುರ ಮಸೀದಿಗೆ ಬಂದಿದ್ದನ್ನು ಮತ್ತು ಮಸೀದಿಯಿಂದ ಹೊರಹಾಕಲ್ಪಟ್ಟ ಇಮಾಮ್ ನನ್ನು ಭೇಟಿಯಾಗಿರುವ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ತೊಡಗಿದ್ದಾರೆ. ಆತ ಶಹರ್ ನೂರುಲ್ ಹುದಾ ಇಂಗ್ಲಿಷ್ ನಲ್ಲಿ ಬಂದು ಹೋಗುತ್ತಿದ್ದನು. ಮತಾಂತರದ ಕಾರ್ಯತಂತ್ರವನ್ನು ಇಲ್ಲಿ ರಹಸ್ಯ ಸಭೆಗಳಲ್ಲಿ ನಡೆಸಲಾಗುತ್ತಿತ್ತು ಎಂದು ಪೋಲಿಸರು ತಿಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •