ಇಂದಿನ ಆಧುನಿಕ ಜಗತ್ತಿನಲ್ಲಿ, ವಿದ್ಯಾವಂತ ಯುಗದಲ್ಲಿಯೂ ಸಹ, ಅನೇಕ ಸಂಪ್ರದಾಯಗಳು ಯೋಚಿಸುವಂತೆ ಮಾಡುತ್ತವೆ, ಅನೇಕ ಆಚರಣೆಗಳು ಇಂದಿಗೂ ರೂಢಿಯಾಗಿ ಬೆಳೆದುಬಂದು ಜನರನ್ನು ಒತ್ತಾಯಿಸುವ ಮೂಲಕ ಅವುಗಳ ಆಚರಣೆ ನಡೆಯುತ್ತಿವೆ. ಹೌದು ಈ ಸಂಪ್ರದಾಯಗಳು ಸಂಪ್ರದಾಯವಾದಿ ಮತ್ತು ಪ್ರಾಚೀನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತವೆ.

ರಾಜಸ್ಥಾನದ ಉದಯಪುರದ ಒಂದು ಬುಡಕಟ್ಟು ಜನಾಂಗದಲ್ಲಿ ಹುಡುಗರು ಮತ್ತು ಹುಡುಗಿಯರು ಪ್ರಾಯಕ್ಕೆ ಬಂದ ನಂತರ ಒಟ್ಟಿಗೆ ಇರುತ್ತಾರೆ, ಮದುವೆಗೆ ಮೊದಲು ದೈಹಿಕ ಸಂಬಂಧವನ್ನು ಮಾಡಿಕೊಳ್ಳುತ್ತಾರೆ ಹಾಗೂ ಮಕ್ಕಳನ್ನು ಪಡೆದ ನಂತರವೇ ಪರಸ್ಪರ ಮದುವೆಯಾಗುತ್ತಾರೆ ಎಂಬ ಸಂಪ್ರದಾಯವಿದೆ.

Marriage

ಇಲ್ಲಿ ಮದುವೆಗೆ ಮೊದಲು ಸಂಬಂಧಗಳು ರೂಪುಗೊಳ್ಳುತ್ತವೆ. ಹೌದು ಗರೇಶಿಯಾ ಬುಡಕಟ್ಟು ಜನಾಂಗದವರು ರಾಜಸ್ಥಾನದ ಉದಯಪುರದ ಸಿರೋಹಿ ಮತ್ತು ಪಾಲಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ, ಇದರಲ್ಲಿ ಒಂದು ಸಂಪ್ರದಾಯವು ಈ ರೀತಿ ಆಚರಣೆಯ ಮಾಡುವಲ್ಲಿ ಪ್ರಚಲಿತದಲ್ಲಿದೆ, ಅದು ಇಂದಿನ ಸಮಾಜಕ್ಕಿಂತಲೂ ಮುಂದಿದೆ. ಪರಸ್ಪರ ಒಪ್ಪಿಗೆಯಿಂದ ಪರಸ್ಪರ ಬದುಕಲು ಒಪ್ಪುವ ಯುವಕರು ಲೈವ್-ಇನ್-ಸಂಬಂಧವನ್ನು ತಮ್ಮ ಸ್ವಾತಂತ್ರ್ಯವೆಂದು ಪರಿಗಣಿಸುತ್ತಾರೆ.

ಈ ಹಳ್ಳಿಯಲ್ಲಿ ಜನರು ನೂರಾರು ವರ್ಷಗಳಿಂದ ಲೈವ್-ಇನ್ ನಲ್ಲಿ ವಾಸಿಸುವ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ ಎಂದು ಅಲ್ಲಿನ ಜನರು ಹೇಳುತ್ತಾರೆ. ಇಲ್ಲಿ, ಮೊದಲು ಲೈವ್-ಇನ್ ನಲ್ಲಿ ವಾಸಿಸಿ ಮಕ್ಕಳನ್ನು ಹುಟ್ಟಿಸಿದ ನಂತರ ಹೋಗಿ ಮದುವೆಯಾಗುತ್ತಾರೆ. ಗರಸಿಯಾ ಬುಡಕಟ್ಟು ಜನಾಂಗದಲ್ಲಿ ಮಕ್ಕಳನ್ನು ಹುಟ್ಟಿಸುವ ಮೊದಲು ವಿವಾಹವಾದರೆ, ಮದುವೆಯ ನಂತರ ಮಕ್ಕಳು ಹುಟ್ಟಲ್ಲ ಎಂಬ ಹಳೆಯ ನಂಬಿಕೆ ಇದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •