ಕನ್ನಡ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟಿಯರು ಇದ್ದು, ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಇಂತಹ ನಟಿಯರ ಸಾಲಿನಲ್ಲಿ ರಚಿತಾ ರಾಮ್ ಅವರ ಹೆಸರು ಕೂಡ ಸೇರುತ್ತದೆ. ಹೌದು ಕನ್ನಡ ಚಿತ್ರರಂಗದಲ್ಲಿ ರಚಿತಾ ರಾಮ್ ಪ್ರತಿಯೊಬ್ಬರಿಗೂ ಚಿರಪರಿಚಿತ. ಕನ್ನಡದ ದರ್ಶನ್ ಅವರೊಂದಿಗೆ ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾ ರಾಮ್ ಅವರು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೌದು ರಚಿತಾ ರಾಮ್ ಅವರು ದರ್ಶನ್ ಸೇರಿದಂತೆ ಸುದೀಪ್, ಉಪೇಂದ್ರ, ನಿಖಿಲ್ ಕುಮಾರಸ್ವಾಮಿ, ಪುನೀತ್ ರಾಜಕುಮಾರ್, ನಿನಾಸಂ ಸತೀಶ್, ಧ್ರುವ ಸರ್ಜಾ ಹೀಗೆ ಕನ್ನಡದ ಅನೇಕ ಖ್ಯಾತನಟರೊಂದಿಗೆ ಸಿನಿ ಪರದೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಇವರ ಮುದ್ದಿನ ಅಕ್ಕ ಮದುವೆಯಾಗಿದ್ದು, ಈ ಮದುವೆ ಸಮಾರಂಭದಲ್ಲಿ ರಚಿತರಾಮ್ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದ್ದು ಇದನ್ನು ತಪ್ಪದೇ ಓದಿ.

marriage-3

ಹೌದು ರಚಿತಾ ರಾಮ್ ಅವರು ಕನ್ನಡದ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದು, ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಚಿತಾ ರಾಮ್ ಅವರ ಹಲವಾರು ಅಭಿಮಾನಿ ಪೇಜ್ ಗಳು ಕೂಡ ಇವೆ. ಇನ್ನು ರಚಿತಾ ರಾಮ್ ಅವರು ಕನ್ನಡ ಮಾತ್ರವಲ್ಲದೆ ಇದೀಗ ತೆಲುಗು ಚಿತ್ರರಂಗಕ್ಕೆ ಕೂಡ ಕಾಲಿಟ್ಟಿದ್ದಾರೆ. ಇನ್ನು ಇವರ ಮುದ್ದಿನ ಅಕ್ಕ ಕೂಡ ನಟಿಯಾಗಿದ್ದು ಹಲವಾರು ಸಿನಿಮಾ ಹಾಗೂ ಕಿರುತೆರೆಯ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಹೌದು ರಚಿತಾ ರಾಮ್ ಅವರ ಮುದ್ದಿನ ಅಕ್ಕನ ಹೆಸರು ನಿತ್ಯಾ ರಾಮ್. ನಿತ್ಯ ಅವರು ಬೆಂಕಿಯಲ್ಲಿ ಅರಳಿದ ಹೂವು, ರಾಜಕುಮಾರಿ, ಕರ್ಪೂರದ ಗೊಂಬೆ, ಮನೆದೇವ್ರು ಹೀಗೆ ಕನ್ನಡದ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ತೆಲುಗು ಕಿರುತೆರೆ 2 ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಇನ್ನು ಕನ್ನಡದ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಂದಿನಿ ಧಾರಾವಾಹಿಯಲ್ಲಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ನಂತರದ ದಿನಗಳಲ್ಲಿ ‘ಮುದ್ದಿನ ಮನಸ್ಸು’ ಎಂಬ ಕನ್ನಡದ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದರು.

marriage-3

ಇದೀಗ ನಿತ್ಯಾ ರಾಮ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವರ ಪತಿ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿದ್ದಾರೆ. ಇನ್ನು ಮದುವೆಗೂ ಮುಂಚೆ ಮನೆಯಲ್ಲಿ ಅರಿಶಿನ ಶಾಸ್ತ್ರ, ಮೆಹಂದಿ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಬಹುತೇಕ ಬೆಳ್ಳಿತೆರೆಯ ನಟ ಹಾಗೂ ನಟಿಯರು ಮತ್ತು ಕಿರುತೆರೆಯ ನಟ ಹಾಗೂ ನಟಿಯರು ಪಾಲ್ಗೊಂಡಿದ್ದರು.

ನಿತ್ಯಾ ರಾಮ್ ಅವರು ಅರಿಶಿನ ಕಾರ್ಯಕ್ರಮದಲ್ಲಿ ಬಿಳಿ ಸಿರಿಯಲಿ ಮಿಂಚಿದ್ದರೆ, ಮೆಹಂದಿ ಕಾರ್ಯಕ್ರಮದಲ್ಲಿ ಹಳದಿ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದರು. ಇನ್ನು ಇವರ ವಿವಾಹ ಬೆಂಗಳೂರಿನ ತಾಜ್ ವೆಸ್ಟ್ ಅಂಡ್ ಹೋಟೆಲಿನಲ್ಲಿ ನಡೆದಿದ್ದು, ಅವರ ಮದುವೆಯ ವಿಡಿಯೋ ತುಣುಕುಗಳನ್ನು ನೀವು ಈ ಕೆಳಗೆ ವೀಕ್ಷಿಸಬಹುದು. ಇನ್ನು ನಿತ್ಯಾ ರಾಮ್ ಅವರು ತಮ್ಮ ದಾಂಪತ್ಯ ಜೀವನದಲ್ಲಿ ಸುಖವಾಗಿ ಹಾಗೂ ಆರೋಗ್ಯದಿಂದ ಇರಲಿ ಎಂದು ನಾವೆಲ್ಲರೂ ಹಾರೈಸೋಣ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದರೆ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •