ಕೆಲವೊಂದು ಸಂದರ್ಭಗಳಲ್ಲಿ ಪ್ರೀತಿಸಿದ್ದು ಬೇರೆಯವರನ್ನು ಮದುವೆಯಾಗುವುದು ಬೇರೆಯವರನ್ನು ಎಂಬ ಘಟನೆಗಳು ಸಂಭವಿಸುತ್ತವೆ. ಎಲ್ಲಾ ಸಂದರ್ಭಗಳಲ್ಲೂ ಪ್ರೀತಿಸಿದ ಹುಡುಗ ಅಥವಾ ಹುಡುಗಿಯನ್ನೇ ಮದುವೆಯಾಗುತ್ತೇವೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಂದು ಬಲು ಪಾರೂಪದ ಘಟನೆಯೊಂದು ಸಂಭವಿಸಿದೆ.

ಮದುವೆಯಾಗಿ ಏಳು ವರ್ಷಗಳ ಕಾಲ ಸಂಸಾರ ನಡೆಸಿದ ನಂತರ ಪತಿ ತನ್ನ ಪತ್ನಿಯನ್ನು ಆಕೆ ಪ್ರೀತಿಸಿದ ಪ್ರಿಯಕರನ ಜೊತೆಗೆ ಕಳುಹಿಸಿಕೊಟ್ಟಿದ್ದಾನೆ. ಬಹುಶಃ ಇಂತಹ ಘಟನೆಗಳು ಸಂಭವಿಸುವುದು ಬಹಳ ಅಪರೂಪ ಎಂದೇ ಹೇಳಬಹುದು. ಇದು ಯಾವುದೋ ಸಿನಿಮಾ ಅಥವಾ ಧಾರವಾಹಿಯಲ್ಲಿ ನಡೆದ ಘಟನೆ ಅಲ್ಲ. ವಾಸ್ತವವಾಗಿ ನಿಜ ಜೀವನದಲ್ಲಿ ನಡೆದ ಸತ್ಯ ಘಟನೆ.

ಮದುವೆ ಆಗಿ ಅದೆಷ್ಟೋ ವರ್ಷಗಳ ನಂತರ ತನ್ನ ಪತ್ನಿ ಬೇರೆ ವ್ಯಕ್ತಿಯನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗೊತ್ತಾದರೆ ಪತ್ನಿ ಜೊತೆ ಜಗಳ ಆಗಬಹುದು ಅಥವಾ ಡಿವೋರ್ಸ್ ಆಗಬಹುದು. ಕೆಲವೊಮ್ಮೆ ಕೊ@ ಗಳೇ ನಡೆದುಹೋಗುತ್ತದೆ. ಆದರೆ ಪಾಟ್ನಾದಲ್ಲಿ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿಕೊಡುವ ಮೂಲಕ ಮಾನವೀಯತೆಯ ಮತ್ತೊಂದು ಮೆಟ್ಟಿಲನ್ನು ಹತ್ತಿದ್ದಾನೆ ಈ ಪುಣ್ಯಾತ್ಮ.

ಪಾಟ್ನಾದ ಸುಲ್ತಾನ್ ಪುರ ನಿವಾಸಿಯಾದ ಉತ್ತಮ್ ಮಂಡಲ್ ಎಂಬುವನು ಕಳೆದ ಏಳು ವರ್ಷದ ಹಿಂದೆ ಸಪ್ನಾ ಎನ್ನುವ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದನು. ಆರಂದಭಲ್ಲಿ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು.  ಇಬ್ಬರೂ ಸುಖವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಸುಖ ಸಂಸಾರದ ಫಲವಾಗಿ ಸಪ್ನಾ ಹಾಗೂ ಉತ್ತಮ್ ಅವರಿಗೆ ಇಬ್ಬರು ಮಕ್ಕಳು ಕೂಡ ಜನಿಸಿದ್ದರು. ಆದರೆ ಇಷ್ಟೆಲ್ಲಾ ಆದ ಬಳಿಕ ಸಪ್ನಾ ಮತ್ತೊಬ್ಬ ಹುಡುಗನ ಜೊತೆಗೆ ಪ್ರೀತಿಯಲ್ಲಿ ಬಿದ್ದಳು. ತನ್ನ ಗಂಡನಿಗೂ ಮಿಗಿಲಾಗಿ ಆತನನ್ನು ಪ್ರೀತಿ ಮಾಡುತ್ತಿದ್ದಳು. ಈ ಬಗ್ಗೆ ಪತಿ ಉತ್ತಮ್ ತಿಳಿದಾಗ ಸಪ್ನಾಳಿಗೆ ಬುದ್ದಿ ಹೇಳಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ.

ಆದರೆ ಸಪ್ನಾ ತನ್ನ ಹಠವನ್ನು ಮಾತ್ರ ಬಿಡಲು ಸುತ್ರಾಂ ಒಪ್ಪಲಿಲ್ಲ. ಅದೆಷ್ಟೇ ಒಲೈಕೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಷ್ಟು ವರ್ಷ ಸಂಸಾರ ಮಾಡಿದ ಗಂಡ ಮಕ್ಕಳನ್ನು ಬಿಟ್ಟು ತಾನು ಪ್ರೀತಿಸಿದ ಪ್ರಿಯಕರ ಜೊತೆಗೆ ಹೆಚ್ಚು ಒಲವನ್ನು ಬೆಳೆಸಿಕೊಂಡಿದ್ದಳು. ಕೊನೆಗೆ ಉತ್ತಮ್ ಮಂಡಲ್ ತನ್ನ ಪತ್ನಿಯ ಮನೆಯವರಿಗೂ ಈ ವಿಷಯವನ್ನು ತಿಳಿಸಿದ. ಅವರು ಕೂಡ ಸಪ್ನಾಳಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಸಪ್ನಾ ಮಾತ್ರ ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ಉತ್ತಮ್ ಮಂಡಲ್ ಬೇರೆ ದಾರಿ ಕಾಣದೇ ತನ್ನ ಪತ್ನಿಯನ್ನು ಆಕೆ ಪ್ರೀತಿಸಿದ ಪ್ರಿಯಕರನ ಜೊತೆಗೆ ತಮ್ಮ ಗ್ರಾಮದ ಬಳಿಯೇ ಇದ್ದ ದುರ್ಗಾ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾನೆ.

ಸಪ್ನಾ ತನ್ನ ಪ್ರಿಯಕರನ ಜೊತೆ ಮದುವೆ ಮಾಡಿಕೊಂಡು ಆತನ ಜೊತೆಗೆ ಆತನ ಮನೆಗೆ ಹೋದಳು. ಉತ್ತಮ್ ಮಂಡಲ್ ತನ್ನ ಮಕ್ಕಳೊಂದಿಗೆ ಜೀವನ ಮಾಡಲು ಮುಂದಾಗಿದ್ದಾರೆ. ಮಕ್ಕಳು ಇದೀಗ ತಾಯಿ ಇಲ್ಲದೆ ತನ್ನ ತಂದೆ ಜೊತೆಗೆ ಜೀವನ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಉತ್ತಮ್ ಮಾಡಿದ ಕೆಲಸಕ್ಕೆ ಕನಿಕರವನ್ನು ವ್ಯಕ್ತಪಡಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •