ಮನುಶ್ಯ ಯಾವುದೇ ಕಾರಣಕ್ಕೂ ಈ 4 ಜಾಗಗಳಲ್ಲಿ ನಿಲ್ಲಬಾರದಂತೆ,ಅವುಗಳು ಯಾವುದು ಗೊತ್ತ…

Home Kannada News/ಸುದ್ದಿಗಳು

ಚಾಣುಕ್ಯರು ಹೇಳುವ ಹಾಗೆ ಮನುಷ್ಯ ಯಾವತ್ತಿಗೂ ಕೂಡ ಇಂತಹ ನಾಲ್ಕು ಸ್ಥಳಗಳಲ್ಲಿ ಇರಲೇ ಬಾರದಂತೆಯಾಕೆ ಮತ್ತು ಎಲ್ಲಿ ಎಂಬುದನ್ನು ನಾನು ನಿಮಗೆ ಈಗ ತಿಳಿಸಿಕೊಡುತ್ತೇನೆ ಯಾವತ್ತಿಗೂ ಎಂತಹ ಕಷ್ಟ ಬಂದರೂ ನಿಮ್ಮ ಜೀವನದಲ್ಲಿ ಬದಲಾವಣೆಗಳು ಕಾಣಬೇಕಾದರೆ ಈ ರೀತಿ ಮಾಡಿ ನಿಮ್ಮ ಜೀವನದಲ್ಲಿ ಯಶಸ್ಸು ಸಿಗುವುದು ಹಾಗೆ ನೀವು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಅನುಭವಿಸಬೇಕಾದರೆ ಈ ಚಾಣಕ್ಯರ ನಾಲ್ಕು ಮಾತುಗಳನ್ನು ತಪ್ಪದೇ ಪಾಲಿಸಿ ಹಾಗೂ ನೀವು ಕೂಡ ಮಾಹಿತಿ ಅನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ.

ಚಾಣುಕ್ಯರು ಹೇಳುವ ಹಾಗೆ ಮನುಷ್ಯ ಆತನಿಗೆ ಬೆಲೆ ಇಲ್ಲದ ಕಡೆ ಗೌರವ ಇಲ್ಲದ ಕಡೆ ಇರಲೇಬಾರದು ಅಂತ ಹೇಳಿದ್ದಾರೆ, ಯಾರಿಗೇ ಆಗಲಿ ಆತನ ಜೀವನದಲ್ಲಿ ಹಣ ಇಲ್ಲದಿದ್ದರೂ ಆತನಿಗೆ ಆತ್ಮವಿಶ್ವಾಸವಿರಬೇಕು ಆತ್ಮವಿಶ್ವಾಸವಿದ್ದಾಗ ಆತನಿಗೆ ಧೈರ್ಯವಿರುತ್ತದೆ ಅ ಧೈರ್ಯ ಇದ್ದಾಗ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಹಣವೇನು ಹಣಕ್ಕೂ ಮೀರಿದ ವಸ್ತುವನ್ನು ಆತನ ಜೀವನದಲ್ಲಿ ಅವನು ಪಡೆದುಕೊಳ್ಳಬಹುದು ಅಂತ ಚಾಣಕ್ಯರು ಈ ರೀತಿಯಾಗಿ ತಿಳಿಸಿದ್ದಾರೆ.

ಎರಡನೇ ವಿಚಾರವೇನು ಅಂದರೆ ಚಾಣಕ್ಯರು ಹೇಳಿದ್ದಾರೆ ಮನುಷ್ಯ ಆತನಿಗೆ ಎಲ್ಲಿ ತನ್ನ ಇಷ್ಟಪಡುವವರು ಸಿಗುವುದಿಲ್ಲವೋ ತನ್ನನ್ನು ಯಾರೂ ಇಷ್ಟಪಡುವುದಿಲ್ಲವೋ ಅಲ್ಲಿ ಇರಬಾರದು ಅಂತ ಹೇಳಿದ್ದಾರೆ ಯಾಕೆ ಅಂತ ಹೇಳುವುದಾದರೆ ಮನುಷ್ಯ ಸಂಘಜೀವಿ ಆತನಿಗೆ ಸ್ವಲ್ಪ ನೋವಾದರೂ ಅದನ್ನು ತನಗೆ ಇಷ್ಟ ಪಡುವವರಿಗೆ ಅಥವಾ ತಾನು ಇಷ್ಟಪಡುವವರಿಗೆ ಹೇಳಿಕೊಂಡರೆ ಎಷ್ಟೋ ಸಮಾಧಾನವಾಗುತ್ತದೆ ನಂತರ ಆ ಕಷ್ಟ ಅಲ್ಲಿಯೇ ಪರಿಹಾರವಾಗುತ್ತದೆ ಆತನ ನೋವಿಗೆ ಪರಿಹಾರ ಸಿಕ್ಕ ಹಾಗೆ ಆಗುತ್ತದೆ ಆದರೆ ಮನುಷ್ಯನಿಗೆ ಆತನನ್ನು ಇಷ್ಟಪಡುವವರೇ ಆತನ ಜೊತೆ ಇಲ್ಲದಿದ್ದಾಗ ಯಾರಿದ್ದರೇನು ಎಲ್ಲವೂ ಇದ್ದರೂ ಅದೆಲ್ಲವೂ ಕೂಡ ವ್ಯರ್ಥವಾಗಿ ಬಿಡುತ್ತದೆ.

ಮೂರನೇ ವಿಚಾರವೆಂದರೆ ಯಾವಾಗ ಮನುಷ್ಯ ಹೊಸದನ್ನು ಕಲಿಯುವುದಿಲ್ಲವೋ ಹೊಸತನ್ನು ಎಲ್ಲಿ ಕಲಿಯುತ್ತಿಲ್ಲ ಆತನಿಗೆ ಹೊಸ ಅನುಭವಗಳು ಆಗುತ್ತಿರುವುದಿಲ್ಲ ವೋ ಅಂತಹ ಜಾಗದಲ್ಲಿ ಇರಬಾರದು ಯಾಕೆ ಎಂದರೆ ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಕಲಿಕೆಯಲ್ಲಿ ನಿರಂತರವಾಗಿರಬೇಕು ಆಗಲೇ ಆತ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ .

ಮನುಷ್ಯನಿಗೆ ಎಲ್ಲಿ ಹೊಸ ಅನು-ಭವಗಳೇ ಸಿಗುವುದಿಲ್ಲವೋ ಆಗ ಆತ ಇದ್ದಲ್ಲಿಯೇ ಇರುತ್ತಾನೆ ಆತನ ಜೀವನದಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ. ಇಂತಹ ಜೀವನ ಇದ್ದರೆಷ್ಟು ಹೋದರೆಷ್ಟು ಆದ್ದರಿಂದ ಚಾಣಕ್ಯರು ಹೇಳುವ ಹಾಗೆ ಮನುಷ್ಯ ಕಲಿಕೆ ಇಲ್ಲದೆಡೆ ಇರಬಾರದೆಂದು ಹೇಳಿದ್ದಾರೆ.

ಚಾಣಕ್ಯರು ಹೇಳಿದ್ದಾರೆ ಯಾವುದೇ ಜಾಗದಲ್ಲಿಯೂ ಬಲವಂತವಾಗಿ ಇರಬಾರದು ಅಥವಾ ಅಪೂರ್ಣತೆಯ ಮನಸ್ಸಿನಿಂದ ಇರಬಾರದು, ಆತ ಕೆಲಸ ಮಾಡುತ್ತಿರುವಂತಹ ಜಾಗವಾಗಲಿ, ಆತ ಇರುವಂತಹ ಜಾಗವಾಗಲಿ ಅವನು ಅಲ್ಲಿ ಇಷ್ಟಪಟ್ಟು ಇರಬೇಕು ಹೊರತು ಬಲವಂತವಾಗಿ ಇರಬಾರದು ಉದಾಹರಣೆಗೆ ಕೆಲವರು ಕೆಲಸ ಮಾಡುತ್ತಿರುವಂತಹ ಜಾಗದಲ್ಲಿ ಇಷ್ಟ ಇಲ್ಲದೆ ಕೆಲಸ ಮಾಡುತ್ತಿರುತ್ತಾರೆ ಅವರಿಗೆ ಆ ಕೆಲಸ ಮಾಡುವುದಕ್ಕೆ ಆಸಕ್ತಿ ಇರುವುದಿಲ್ಲ ಆದರೂ ಅಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ನೀವು ಕಳೆಯುವ ಸಮಯವನ್ನು ಹಾಳು ಮಾಡಿಕೊಳ್ಳುತ್ತಿರುತ್ತಾರೆ ಅಷ್ಟೇ.

ಆದರೆ ಇಂದಿನ ದಿನಗಳಲ್ಲಿ ಕೆಲಸ ಸಿಗುವುದೇ ದೊಡ್ಡ ಪ್ರಶ್ನೆ ಇಷ್ಟ ಇಲ್ಲ ಅಂತ ಕೆಲಸವನ್ನು ಬಿಟ್ಟರೆ ಯಾವ ಕೆಲಸವೂ ಸಿಗುವುದೇ ಇಲ್ಲ ಆದ ಕಾರಣ ಇರುವ ಕೆಲಸದಲ್ಲಿಯೇ ಅಥವಾ ಇರುವ ವ್ಯವಹಾರ ಕ್ಷೇತ್ರದಲ್ಲಿಯೇ ನಿಮಗೆ ಇಷ್ಟವಾಗುವ ಹಾಗೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಿ ಆಗ ನಿಮಗೂ ಕೂಡ ಅದು ಒಪ್ಪಿಗೆ ಆಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...