ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ಹಾಡು ಕಣ್ಣೆ ಅದಿರಿಂದಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ-ರಲ್ ಆಗಿದೆ. ಕಣ್ಣೆ ಅದಿರಿಂದಿ ತೆಲುಗು ಹಾಡಾದರು ಕನ್ನಡ ಸಿನಿಪ್ರಿಯರಿಗೆ ಬಹಳ ಫೇವರೆಟ್ ಆಗಿದೆ. ಕನ್ನಡ ಅಭಿಮಾನಿಗಳ ವಾಟ್ಸಾಪ್ ಸ್ಟೋರಿ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ನೀವೆಲ್ಲರೂ ಕಣ್ಣೆ ಅದಿರಿಂದಿ ಹಾಡನ್ನು ಕೇಳಿರಬಹುದು. ಈ ಹಾಡು ಇಷ್ಟರ ಮಟ್ಟಿಗೆ ಹಿಟ್ ಆಗಲು ಮುಖ್ಯಕಾರಣ ಗಾಯಕಿ ಮಂಗ್ಲಿ. ಒಂದೇ ಒಂದು ಹಾಡಿನಿಂದ ಕರ್ನಾಟಕದಲ್ಲಿ ಸಹ ಭಾರಿ ಹವಾ ಸೃಷ್ಟಿಸಿದ ಮಂಗ್ಲಿ ಅವರು ಕನ್ನಡದಲ್ಲಿ ಒಂದು ಹಾಡು ಹಾಡಿದರೆ ಬಹಳ ಚೆನ್ನಾಗಿರುತ್ತೆ ಎಂದು ಅಭಿಮಾನಿಗಳು ಬಹಳ ಆಸೆ ಪಟ್ಟಿದ್ದರು.


ಮಂಗ್ಲಿ ಅವರ ಮ್ಯಾಜಿಕಲ್ ವಾಯ್ಸ್ ಗೆ ಕರ್ನಾಟಕದ ಜನತೆ ಫಿದಾ ಆಗಿದ್ದರು. ಇದೀಗ ಕನ್ನಡ ಸಿನಿಪ್ರಿಯರ ಆಸೆ ಫಲಿಸುವ ಸಮಯ ಬಂದಿದೆ. ಕನ್ನಡದಲ್ಲಿ ಮಂಗ್ಲಿ ಅವರು ಹಾಡು ಹಾಡಲಿದ್ದಾರೆ. ಯಾವ ಹಾಡು ಗೊತ್ತಾ? ರಾಬರ್ಟ್ ಸಿನಿಮಾ ಹಾಡಿನ ಮೂಲಕ ಕನ್ನಡ ಸಿನಿಪ್ರಿಯರ ಹೃ-ದಯ ಕ-ದ್ದಿದ್ದ ಗಾಯಕಿ ಮಂಗ್ಲಿ, ಈಗ ಕನ್ನಡ ಹಾಡು ಹಾಡುವ ಮೂಲಕ ಕರ್ನಾಟಕದ ಜನತೆಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ. ಹೊಸ ಕಲಾವಿದರು ನಟಿಸಿರುವ ಕರಿಯ ಐ ಲವ್ ಯೂ ಸಿನಿಮಾದ ಒಂದು ಹಾಡನ್ನು ಮಂಗ್ಲಿ ಹಾಡಲಿದ್ದಾರೆ.

ಈ ಮೂಲಕ ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ಮಂಗ್ಲಿ. ನವ ನಿರ್ದೇಶಕ ತಿಪ್ಪೆಶ್ ಎನ್ನುವವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಟಾಲಿವುಡ್ ಗಾಯಕಿ ಮಂಗ್ಲಿ ಅವರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ಕರಿಯ ಐ ಲವ್ ಯೂ ಸಿನಿಮಾಗಾಗಿ ಮಂಗ್ಲಿ ಹಾಡಿರುವ ಹಾಡು ಈಗಾಗಲೇ ರೆಕಾರ್ಡಿಂಗ್ ಮುಗಿದಿದ್ದು, ಹಾಡು ಬಿಡುಗಡೆ ಆಗಬೇಕಿದೆ. ಕರಿಯ ಐ ಲವ್ ಯೂ ಸಿನಿಮಾ ಹಳ್ಳಿಯಲ್ಲಿ ನಡೆಯುವ ಕಥೆ ಆಗಿದ್ದು, ಈ ಸಿನಿಮಾದ ಮುಖ್ಯ ಹಾಡೊಂದನ್ನು ಮಂಗ್ಲಿ ಹಾಡಿದ್ದಾರೆ.

ಈ ಹಾಡಿನಲ್ಲಿ ಮಂಗ್ಲಿ ಜೊತೆಗೆ ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು ಸಹ ಧ್ವನಿ ನೀಡಿದ್ದಾರೆ. ಲೋಕಿ ಎನ್ನುವವರ ಸಂಗೀತ ಈ ಸಿನಿಮಾದಲ್ಲಿದೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡದ ಕಲಾವಿದರ ಬಗ್ಗೆ, ಕನ್ನಡ ರಿಯಾಲಿಟಿ ಷೋ ಗಳ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •