ನಮಸ್ತೆ ಸ್ನೇಹಿತರೆ, ಟ್ರಾಫಿಕ್ ಪೋಲಿಸ್ ಗೆ ಫೈನ್ ಕಟ್ಟಲು  ಗಂಡ ಕಟ್ಟಿದ ತಾಳಿಯನ್ನೆ ಬಿಚ್ಚಿ ತನ್ನ ಮಂಗಳ ಸೂತ್ರವನ್ನೇ ಮಾರಿ ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಹೇಳಿದ ಮಹಿಳೆಯೊಬ್ಬರ ವಿಚಿತ್ರ ಘಟನೆ ಬಗ್ಗೆ ತಿಳಿಯೋಣ.. ಈ ವಿಚಿತ್ರ ಘಟನೆ ನಡೆದಿರುವುದು ಗುಜರಾತ್ ನ ಅಹಮದಾಬಾದ್ ಸಿಟಿಯಲ್ಲಿ. ಇಲ್ಲಿ ಒಬ್ಬರು ಮಹಿಳೆ ತನ್ನ ಮಂಗಳ ಸೂತ್ರವನ್ನು ಬಿಚ್ಚಿ ಟ್ರಾಫಿಕ್ ಪೋಲಿಸ್ ಗೆ ಕೊಟ್ಟು ಇದನ್ನು ಮಾರಿ ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಕೂಗಾಡಿದ್ದಾಳೆ. ಪೊಲಿಸ್ ಮತ್ತು ಮಹಿಳೆ ನಡುವೆ ನಡೆದ ಈ ವಿಚಿತ್ರ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಬಾರಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.

ಒಂದು ಗುಜರಾತಿನ ವೆಬ್ ಸೈಟ್ ನ ಪ್ರಕಾರ ಈ ಘಟನೆ ಅಹಮದಾಬಾದ್ ನ ಮುಖ್ಯರಸ್ತೆ ಒಂದರಲ್ಲಿ ನಡೆದಿದೆ. ಇಲ್ಲಿ ನಡಿದಿದ್ದು ಏನೆಂದರೆ.. ಈ ರಸ್ತೆಯಲ್ಲಿ ಟ್ರಾಫಿಕ್ ಪೋಲಿಸ್ ನವರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದವರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದರು. ಇದೇ ರಸ್ತೆಯಲ್ಲಿ ಇಬ್ಬರು ದಂಪತಿಗಳು ಬಂದಿದ್ದಾರೆ.. ಗಂಡ ಹೆಂಡತಿ ಇಬ್ಬರು ಕೂಡ ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ.. ಇದನ್ನು ಗಮನಿಸಿದ ಟ್ರಾಫಿಕ್ ಪೋಲಿಸರು ದಂಪತಿಗಳ ವಾಹನವನ್ನು ತಡೆದು ಫೈನ್ ಹಾಕಿದ್ದಾರೆ.

Mangalya

ಆ ದಂಪತಿಗಳು ದುರಾದೃಷ್ಟವಶಾತ್ ಅಂದೇ ತಮ್ಮ ಮನೆಯಲ್ಲಿ ಪರ್ಸ್ ಬಿಟ್ಟು ಬಂದಿದ್ದರು.. ದಂಪತಿಗಳು ತಾವು ಮನೆಯಲ್ಲೆ ಪರ್ಸ್ ಬಿಟ್ಟು ಬಂದಿದ್ದೀವಿ, ನಮ್ಮ ಹತ್ತಿರ ಈಗ ಒಂದೇ ಒಂದು ರೂಪಾಯಿ ಹಣವಿಲ್ಲ. ನಮ್ಮ ಗಾಡಿಯನ್ನು ಈಗ ಬಿಡಿ ನಮ್ಮ ಮನೆಗೆ ಹೋಗಿ ಹಣವನ್ನು ತಂದು ನಿಮ್ಮ ಫೈನ್ ಕಟ್ಟುತ್ತೇವೆ ಎಂದು ಎಷ್ಟೇ ರಿಕ್ವೆಷ್ಟ್ ಮಾಡಿದರು ಸಹ ಟ್ರಾಫಿಕ್ ಪೋಲಿಸರು ಇವರನ್ನು ಒಂದು ಅಡಿ ಕೂಡ ಆಕಡೆ ಈಕಡೆ ಕದಲಲು ಸಹ ಬಿಡುತ್ತಿರಲಿಲ್ಲ..

ಟ್ರಾಫಿಕ್ ಪೋಲಿಸ್ ಮತ್ತು ದಂಪತಿಗಳ ನಡುವೆ ಮಾತಿಗೆ ಮಾತು ಬೆಳೆಯಿತು, ಕೊನೆಗೆ ಆ ಮಹಿಳೆ ತನ್ನ ತಾಳಿಯನ್ನು ಬಿಚ್ಚಿ. ತಗೋಳಿ ಈ ತಾಳಿಯನ್ನು ಮಾರಿ ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಕಣ್ಣೀರು ಹಾಕಿದ್ದಾರೆ.‌. ಈ ರೀತಿ ಮಹಿಳೆ ತನ್ನ ತಾಳಿಯನ್ನು ಬಿಚ್ಚಿ ಟ್ರಾಫಿಕ್ ಪೋಲಿಸ್ ಗೆ ಕೊಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದ್ದೂ.. ಕೊನೆಗೆ ಪಬ್ಲಿಕ್ ನವರು ಸೇರಿ ಇಬ್ಬರನ್ನು ಸಮಾಧಾನ ಪಡಿಸಿ ಕೊನೆಗೆ ಮಹಿಳೆಯ ತಾಳಿಯನ್ನು ವಾಪಸ್ ಕೊಡಿಸಿ, ದಂಪತಿಗಳ ಫೈನ್ ಕಟ್ಟಿ ಮನೆಗೆ ಕಳುಹಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •