ಮಾಬ್​ ಹಿಡಿದು ತನ್ನ ಕಚೇರಿ ಮ್ಯಾನೇಜರ್​ಗೆ ಮಹಿಳೆ ಹೊಡೆಯುತ್ತಿರುವ ಮಹಿಳೆ. ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ಕೆಲವೊಮ್ಮೆ ಒಳ್ಳೆಯ ಕೆಲಸಗಳು ಸುದ್ದಿಯಾದರೆ, ಹೆಚ್ಚಿನ ಬಾರಿ ಮಾಡಬಾರದ ಕೆಲಸ ಮಾಡಿ ಸಿಕ್ಕಿಹಾಕಿಕೊಂಡವರ ವಿಡಿಯೋ ದೊಡ್ಡ ಸದ್ದು ಮಾಡುತ್ತವೆ. ಇದೀಗ ತನಗಾದ ನೋವಿಗೆ ಮತ್ತು ತನ್ನ ಜೊತೆಗೆ ಕೆಲಸ ಮಾಡುವ ಇತರ ಮಹಿಳೆಯರ ನೋವಿಗೆ ಧ್ವನಿಯಾದ ಮಹಿಳೆಯ ವಿಡಿಯೋ ಭಾರೀ ಸದ್ದು ಮಾಡುತ್ತಿದೆ..

ಚೀನಾದಲ್ಲಿ ಮಹಿಳೆಯೊಬ್ಬರು ತನ್ನ ಕಚೇರಿಯ ಮ್ಯಾನೇಜರ್​ಗೆ ಮಾಬ್​ನಿಂದ(ನೆಲ ಸ್ವಚ್ಛಗೊಳಿಸುವ ಸಾಧನ) ಹೊಡೆಯುತ್ತಿದ್ದಾರೆ. ಮಹಿಳೆ ಮಾಡಿರುವ ಕೆಲಸಕ್ಕೆ ಇದೀಗ ಸಾಕಷ್ಟು ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ. ಅಷ್ಟಕ್ಕೂ ಈ ಮಹಿಳೆ ಮಾಬ್​ನಿಂದ ಹೊಡೆಯಲು ಕಾರಣ ಏನಿರಬಹುದು ಎಂಬುದನ್ನು ನೀವು ಕೇಳಿದರೆ ನಿಜಕ್ಕೂ ಕೋಪಗೊಳ್ಳಬಹುದು ಏನಿರಬಹುದು, ಅವರಿಬ್ಬರ ನಡುವಿನ ಅಂತಹ ಕಲಹ?

ಚೀನಾದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಒಬ್ಬಳಿಗೆ ಆಕೆಯ ಕಚೇರಿ ಮ್ಯಾನೇಜರ್​ ಅಸಭ್ಯ ಸಂದೇಶವನ್ನು ಕಳುಹಿಸುತ್ತಿದ್ದ. ಇದೆ ಕಾರಣಕ್ಕಾಗಿ ಮಹಿಳೆ ಮೊದಲಿಗೆ ಬಾತ್​ರೂಮ್​ನಲ್ಲಿ ನೀರು ತುಂಬಿಟ್ಟಿದ್ದ ಟಬ್​ನಿಂದ​ ನೀರನ್ನು ತೆಗೆದು ಆತನ ಮುಖಕ್ಕೆ ಎರಚಿದ್ದಾಳೆ ನಂತರ ಮಾಬ್​ನ್ನು ಕೈಯಲ್ಲಿ ಹಿಡಿದು ಮ್ಯಾನೇಜರ್​ಗೆ ಹೊಡೆಯುತ್ತಾಳೆ.

ಅಷ್ಟೇ ಅಲ್ಲ, ಮ್ಯಾನೇಜರ್​ ಟೇಬಲ್​ ಮೇಲೆ ಇಟ್ಟಿದ್ದ ಅಷ್ಟೂ ಪುಸ್ತಕದ ರಾಶಿಯನ್ನು ಸಿಟ್ಟಿನಿಂದ ಬಿಸಾಕುತ್ತಾಳೆ. ಮಾಬ್​ ಹಿಡಿದು ಹೊಡೆಯುತ್ತಿರುವ ದೃಶ್ಯವನ್ನು ಮತ್ತೊಬ್ಬ ಮಹಿಳೆ ಸೆರೆ ಹಿಡಿದಿರುಯುವುದನ್ನು ಕಂಡ ಮ್ಯಾನೇಜರ್​ ತಲೆ ತಗ್ಗಿಸಿ ಮುಖವನ್ನುಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾನೆ ಮತ್ತು ಕ್ಷಮೆಯಾಚಿಸುತ್ತಾನೆ. ನಾನು ತಮಾಷೆಗಾಗಿ ಕಳುಹಿಸಿರುವ ಸಂದೇಶ ಎಂದು ಮ್ಯಾನೇಜರ್​ ಸಮರ್ಥಿಸಿಕೊಳ್ಳಲು ಹೋದಾಗ, ಪಕ್ಕದಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ಮಹಿಳೆ ಇದು ತಮಾಷೆಯಾ? ಈ ರೀತಿ ಜೋಕ್​ ಮಾಡಲು  ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾಳೆ. ಇದು ಕೆಟ್ಟ ಮನುಷ್ಯನ ಮನಸ್ಥಿತಿಯನ್ನು ತೋರ್ಪಡಿಸುತ್ತದೆ. ಕಚೇರಿಯ ಸಿಬ್ಬಂದಿಯ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಎಂದು ಮಹಿಳೆ ಕೋಪದಿಂದ ವಾರ್ನಿಂಗ್​ ಮಾಡಿದ್ದಾರೆ.

ಹಲವಾರು ಜನರಿಗೆ ಇವರು ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಕಚೇರಿಯ ಎಲ್ಲಾ ಹೆಣ್ಣು ಮಕ್ಕಳಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಹೇಳಿರುವುದನ್ನು ನೋಡಿದ ನೆಟ್ಟಿಗರು ಮಹಿಳೆ ಮಾಡಿದ ಕೆಲಸದ ಕುರಿತಾಗಿ ಸಾಕಷ್ಟು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಈ ಮಾಹಿತಿ ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದುಬಂದಿದೆ…

WATCH ON YOUTUBE ಮೇಲೆ ಕ್ಲಿಕ್ ಮಾಡಿ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •