ಒಂದೇ ಸಿನಿಮಾದಲ್ಲಿ 17 ಚುಂಬನದ ದೃಶ್ಯಗಳಲ್ಲಿ ನಟಿಸುವ ಮೂಲಕ ಸದ್ದು ಮಾಡಿದ್ದ ಮಲ್ಲಿಕಾ ಶೇರಾವತ್..!
28 ವರ್ಷದವರಿಂದ 65 ವರ್ಷದ ನಟರೊಂದಿಗೆ ಹಾಟ್ ಹಾಗೂ ಬೋಲ್ಡ್ ದೃಶ್ಯಗಳಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ ಮಲ್ಲಿಕಾ ಶೇರಾವತ್.ಮಲ್ಲಿಕಾ ಶೇರಾವತ್ ತಮ್ಮ ಕುಟುಂಬಕ್ಕೆ ವಿರುದ್ಧವಾಗಿ ಹೋಗಿ ಸಿನಿಮಾ ಜಗತ್ತಿಗೆ ಕಾಲಿಟ್ಟವರು.ರೀಮಾ ಲಾಂಬಾ ಮಲ್ಲಿಕಾ ಶೇರಾವತ್ ಅವರ ಅಸಲಿ ಹೆಸರು. ಸಿನಿಮಾಗೆ ಬಂದ ನಂತರ ಹೆಸರು ಬದಲಾಯಿಸಿಕೊಂಡಿದ್ದಾರೆ.
2002ರಲ್ಲಿ ತೆರೆ ಕಂಡ ಜೀನ ಸಿರ್ಫ್ ಮೇರೆ ಲಿಯೆ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು.ಆದರೆ ಅವರಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ಮರ್ಡರ್ ಸಿನಿಮಾ.2003ರಲ್ಲಿ ರಿಲೀಸ್ ಆದ ಕ್ವಾಯಿಶ್ ಸಿನಿಮಾದಲ್ಲಿ 17 ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವ ಮೂಲಕ ಸುದ್ದಿಯಾಗಿದ್ದರು.ಕ್ವಾಯಿಶ್ ಸಿನಿಮಾದ ಮೂಲಕ ನಾಯಕಿಯಾಗಿ ಬಿ-ಟೌನ್ಗೆ ಪರಿಚಯವಾದವರು ಮಲ್ಲಿಕಾ.ಹಾಲಿವುಡ್ ಚಿತ್ರದಲ್ಲಿ ಕೂಡ ಈಕೆ ನಟಿಸಿದರು.ತಮ್ಮ ಬೋಲ್ಡ್ ನಟನೆಯ ಮೂಲಕ ಬಾಲಿವುಡ್ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು ಮಲ್ಲಿಕಾ ಶೇರಾವತ್.