ಮಲ್ಲ

ಬರಲಿದೆ ಮಲ್ಲ-2 ಸಿನೆಮಾ,ಈ ಬಾರಿ ಪ್ರಿಯಾಂಕ ಯಾವ ಗೆಟಪ್ ನಲ್ಲಿ ನಟಿಸಲಿದ್ದಾರೆ ಗೊತ್ತೇ? ರವಿ ಮಾಮ ಕೊಟ್ರು ಸಿಹಿಸುದ್ದಿ ನೋಡಿ.!

Home

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಕೋಟಿ ರಾಮು ಮೇಲೆ ವಿಶೇಷ ಅಭಿಮಾನ. ಇದೀಗ ದೇವರಾಜ್ ಅವರ ಮಗ ನಟಿಸಿರುವ ’ಅರ್ಜುನ್ ಗೌಡ’ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ರಾಮು ಅವರನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಈ ಅರ್ಜುನ್ ಗೌಡ ಸಿನಿಮಾದಲ್ಲಿ ಒಂದು ವಿಶೇಷತೆ ಇದೆ. ರಾಮು ಅವರ ಮೊದಲ ಚಿತ್ರ ಗೋಲಿಬಾರ್. ಆಗ ರಾಮು ಅವರಿಗೆ ಕೇವಲ 21 ವರ್ಷ. ಆ ಸಮಯದಲ್ಲಿಯೇ ಅದ್ದೂರು ಆಕ್ಷನ್ ಸಿನಿಮಾ ಮಾಡಿರುವ ರಾಮು ಅವರ ಅಸಲಿ ಸಿನಿಮಾ ಪಯಣ ಆರಂಭ ಆಗಿದ್ದೇ ಗೋಲಿಬಾರ್ ನಿಂದ. ಇದೀಗ ದೇವರಾಜ್ ಅವರ ಮಗ ಪ್ರಜ್ವಲ್ ದೇವರಾಜ್ ನಟಿಸಿರುವ ಅರ್ಜುನ್ ಗೌಡ, ರಾಮು ಅವರ ಕೊನೆಯ ಸಿನಿಮಾ.

ಇದು ನಿಜಕ್ಕೂ ಕಾಕತಾಳೀಯ. ಈ ಸಿನಿಮಾ ರಿಲೀಸ್ ಮಾಡಲು ಇದೀಗ ರಾಮು ಅವರೇ ಇಲ್ಲ. ಹೀಗಾಗಿ ರಾಮು ಧರ್ಮ ಪತ್ನಿ ಮಾಲಾಶ್ರೀ ಅವರೇ ಈ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಉಪೇಂದ್ರ ಹಾಗೂ ಶಿವಣ್ಣ ಅದೇ ರೀತಿ ರಾಮು ಮಕ್ಕಳು ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ರವಿಚಂದ್ರನ್ ಅವರು ರಾಮು ಅವರನ್ನು ನೆನೆದಿದ್ದಾರೆ. ರಾಮು ಅವರು ಶಕುನಿ ಚಿತ್ರದಲ್ಲಿ ರವಿಚಂದ್ರನ್ ಅವರ ಗೆಟಪ್ ಇಷ್ಟ ಪಟ್ಟಿರಲಿಲ್ವಂತೆ, ಅದಕ್ಕಾಗಿಯೇ ರಾಮು ಅವರು ರವಿಚಂದ್ರನ್ ಅವರಿಗಾಗಿ ಮಲ್ಲ ಸಿನಿಮಾ ಮಾಡಿದ್ದರು.

ಇನ್ನು ರಾಮಚಾರಿ ಸಿನಿಮಾಕ್ಕೆ ಮಾಲಾಶ್ರೀ ಅವರು ಕೇವಲ 18 ದಿನದಲ್ಲಿ ರಾತ್ರಿ ಹಗಲು ದುಡಿದು ದೊಡ್ಡ ಸಹಾಯ ಮಾಡಿದ್ದಾರೆ, ಅದರ ಋಣವನ್ನು ಮಲ್ಲ ಮೂಲಕ ತೀರಿಸಿದ್ದೇನೆ. ಯಾರೇ ಆಗಲಿ ಒಬ್ಬರಿಗೊಬ್ಬರು ಸಪೋರ್ಟ್ ಬೇಕೇ ಬೇಕು, ಮಾಲಾಶ್ರೀ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿ, ನಂತರ ಮಲ್ಲ – 2 ಸಿನಿಮಾದಲ್ಲಿ ನನ್ನ ಜೊತೆ ಆಕ್ಟ್ ಮಾಡಿ ಎಂದು ತಮಾಷೆಯಾಗಿ ಅವರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ಆಗ ಮಾಲಾಶ್ರೀ ಬೇಡವೆಂದಾಗ ಸರಿ ನಿಮ್ಮ ಮಗಳ ಜೊತೆ ಮಾಡ್ಲಾ, ಇಲ್ಲ ಬೇಡ ನನ್ನ ಮಗನ ಜೊತೆ ನಿಮ್ಮ ಮಗಳನ್ನು ಹಾಕೊಂಡು ಚಿತ್ರ ಮಾಡಿ ಎಂದು ವೇದಿಕೆಯಲ್ಲಿ ಎಲ್ಲರ ಕಾಲೆಳೆದಿದ್ದಾರೆ. ಇನ್ನು ಅರ್ಜುನ್ ಗೌಡ ಸಿನಿಮಾ ಈ ತಿಂಗಳ ಕೊನೆಯಲ್ಲಿ ರಿಲೀಶ್ ಆಗಲಿದೆ, ಇದರಲ್ಲಿ ಪ್ರಜ್ವಲ್ ದೇವರಾಜ್ ಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದಾರೆ. ಲಕ್ಕಿ ಶಂಕರ್ ನಿರ್ದೇಶನದ ಈ ಚಿತ್ರಕ್ಕೆ ಸಂಚಿತ್ ಹೆಗ್ಡೆ, ಧರ್ಮ ವಿಶ್ ಅವರು ಕಂಠದಾನ ಮಾಡಿದ್ದಾರೆ.ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...