ಕನ್ನಡ ಚಿತ್ರರಂಗದಲ್ಲಿ ಸುಂದರ ನಟಿಯರಿಗೇನೂ ಕಡಿಮೆಯಿಲ್ಲ. ಆದರೆ ಯಾವುದೇ ಪಾತ್ರ, ಯಾವುದೇ ಕಾಸ್ಟೂಮ್‌ ಹಾಕಿದರೂ ಅದಕ್ಕೆ ತಕ್ಕಂತೆ ಹೋಲುತ್ತಿದ್ದದ್ದು ಮಾತ್ರ ನಟಿ ಮಾಲಾಶ್ರೀ. ಅವರ ನಟನೆ, ಗಂಡುಬೀರಿತನ ಇದೆಲ್ಲವನ್ನು ನೋಡಿದ ಕನ್ನಡದ ಪ್ರೇಕ್ಷಕರು ಮಾಲಾಶ್ರೀಯನ್ನು ಗುಂಡು ಹುಡುಗಿ ಎಂದೇ ಅಂದುಕೊಂಡುಬಿಟ್ಟಿದ್ದರು.

ಸ್ಯಾಂಡಲ್‌ ವುಡ್‌ ನಲ್ಲಿ ಕನಸಿನ ರಾಣಿ ಎಂಬ ಪಟ್ಟವನ್ನು ಕಟ್ಟಿಕೊಂಡು ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದ ಮಹಾನಟಿ ಈಕೆ. ಅದೊಂದು ಕಾಲದಲ್ಲಿ ಮಾಲಾಶ್ರೀ ಅವರು ಇಡೀ ಕನ್ನಡ ಚಿತ್ರರಂಗದಲ್ಲಿ ಹೆಮ್ಮೆಯ ನಟಿಯಾಗಿದ್ದರು. ಬಹುಬೇಡಿಕೆಯಿದ್ದ ನಟಿ. ಮಾಲಾಶ್ರೀ ಅವರು ಒಂದು ವರ್ಷದಲ್ಲಿ ಏನಿಲ್ಲಾ ಎಂದರೂ ಸರಿ ಸುಮಾರು ೧೦ – ೧೨ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ಮಾಡದ ಪಾತ್ರವೇ ಇಲ್ಲ. ಎಲ್ಲಾ ರೀತಿಯ ಪಾತ್ರದಲ್ಲೂ ನಟಿಸಿ ಸೈ ಎನಿಸಿಕೊಂಡವರು.

ಇವರ ನಟನೆಗೆ ಸರಿಸಾಟಿ ಯಾರೂ ಇರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಮಾಲಾಶ್ರೀ ಎಂದ ಕೂಡಲೇ ಅವರದ್ದೇ ಆದ ಶೈಲಿಯೊಂದು ನೆನಪಿಗೆ ಬರುತ್ತದೆ. ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಅವರು ಚಾಮುಂಡಿ, ದುರ್ಗಿ, ರಾಮಾಚಾರಿ, ಲಾಕಪ್‌ ಡೆತ್‌, ಬೆಳ್ಳಿ ಕಾಲುಂಗುರ, ಬೆಳ್ಳಿ ಮೋಡಗಳು ಹೀಗೆ ಸಾಲು ಸಾಲು ಹಿಟ್‌ ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ತಮ್ಮದೇ ಛಾಪನ್ನು ಮೂಡಿಸಿದಾಕೆ.

ನಟಿ ಮಾಲಾಶ್ರೀ ಅವರಿಗೆ ತಂಗಿ ಕೂಡ ಇದ್ದಾರೆ. ಅವರ ಹೆಸರು ಶುಭಶ್ರೀ. ಆಕೆ ಕೂಡ ಚಿತ್ರರಂಗದಲ್ಲಿ ನಟನೆ ಮಾಡುತ್ತಿದ್ದರು. ಮಾಲಾಶ್ರೀ ಅವರಂತೆಯೇ ಶುಭ ಕೂಡ ಪ್ರತಿಭಾನ್ವಿತ ನಟಿಯಾಗಿದ್ದರು. ಆದರೆ ಶುಭ ಅವರು ಮಾಲಾಶ್ರೀಯಷ್ಟು ಹೆಸರುವಾಸಿಯಾಗಲಿಲ್ಲ. ಶುಭ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

 

ಸುಳಿ, ಮಾವನ ಮಗಳು ಸೇರಿದಂತೆ ನಾನಾ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ದೇವರಾಜ್‌ ಅವರು ಅಭಿನಯಿಸಿದ್ದ ಸರ್ಕಲ್‌ ಇನ್‌ ಸ್ಪೆಕ್ಟರ್‌ ಸಿನಿಮಾದಲ್ಲಿ ಶುಭ ಅವರು ಕೂಡ ನಟಿಸಿದ್ದರು. ಆ ಸಿನಿಮಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಈಕೆ ಊರ್ಮಿಳಾ ಪಾತ್ರದಲ್ಲಿ ನಟಿಸಿದ್ದರು.

ಕೇವಲ ಒಂದು ಹಾಡಿನ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು. ಆದರೆ ಇವರು ಮಾಲಾಶ್ರೀಯಷ್ಟು ಟಾಪ್‌ ನಟಿ ಆಗಲು ಮಾತ್ರ ಸಾಧ್ಯವಾಗಲಿಲ್ಲ. ಬಹುಶಃ ಅದೃಷ್ಟ ಎನ್ನುವುದು ಇವರಿಗೆ ಕೈ ಹಿಡಿಯಲಿಲ್ಲ ಎನಿಸುತ್ತದೆ. ಈ ಚಿತ್ರರಂಗವೇ ಹಾಗಲ್ಲವೇ? ಒಬ್ಬರಿಗೆ ಸಿಕ್ಕ ಅದೃಷ್ಟ ಮತ್ತೊಬ್ಬರಿಗೆ ಸಿಗಲೇಬೇಕು ಎಂದೇನೂ ಇಲ್ಲ. ಕೆಲವರು ಮಿಂಚುತ್ತಾರೆ, ಮತ್ತೆ ಕೆಲವರು ನೆಲ ಕಚ್ಚುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •