ಜನರಿಗೆ ತಮ್ಮ ಅವಶ್ಯಕತೆಗಳನ್ನ ಪೂರೈಕೆ ಮಾಡಿಕೊಳ್ಳಲು ಈಗಿನ ಕಾಲದಲ್ಲಿ ಹಣ ಬೇಕೇ ಬೇಕು ಮತ್ತು ಹಣ ಇಲ್ಲದೆ ಯಾವ ಕೆಲಸವನ್ನ ಮಾಡಲು ಸಾಧ್ಯವಿಲ್ಲವಾಗಿದೆ. ಇನ್ನು ಮಕ್ಕಳ ವಿದ್ಯಾಭ್ಯಾಸ, ಮನೆ ಕಟ್ಟಲು, ಏನಾದರು ವ್ಯವಹಾರ ಅಥವಾ ಉದ್ಯಮವನ್ನ ಆರಂಭ ಮಾಡಲು ಮತ್ತು ಇತರೆ ಅವಶ್ಯಕತೆಗಳಿಗಾಗಿ ಹಲವು ಜನರು ಸರಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳು ಮತ್ತು ಕೆಲವು ಸರ್ಕಾರೀ ಮಾನ್ಯತೆಗೆ ಒಳಪಟ್ಟಿರುವ ಸಂಘ ಸಂಸ್ಥೆಗಳಲ್ಲಿ ಸಾಲವನ್ನ ಮಾಡೇ ಇರುತ್ತಾರೆ. ಇನ್ನು ದೇಶದಲ್ಲಿ ಯಾವ ಕರೋನ ಮಹಾಮಾರಿ ಕಾಣಿಸಿಕೊಂಡಿತೋ ಅಂದಿನಿಂದ ಜನರ ಜೀವನ ಸಂಪೂರ್ಣವಾಗಿ ಬದಲಾಗಿ ಹೋಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಅದೆಷ್ಟೋ ಜನರು ತಮ್ಮ ಕೆಲಸವನ್ನ ಕಳೆದುಕೊಂಡರು ಮತ್ತು ಅದೆಷ್ಟೋ ಜನರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು ಎಂದು ಹೇಳಬಹುದು.

ಇನ್ನು ಕರೋನ ಬಂದ ನಂತರ ಯಾರ ಬಳಿನೂ ಕೂಡ ಹಣ ಇಲ್ಲ ಎಂದು ಮತ್ತು ಹಣ ಇಲ್ಲದ ಕಾರಣ ಜನರು ತಾವು ಮಾಡಿದ ಸಾಲಗಳನ್ನ ತುಂಬಲು ಪರದಾಡುತ್ತಿದ್ದಾರೆ. ಇನ್ನು ಜನರಿಗೆ ಈ ಸಮಯದಲ್ಲಿ ಸಾಲವನ್ನ ಕಟ್ಟಲು ಸಾದ್ಯವಾಗದ ಕಾರಣ ನಮ್ಮ ಕೇಂದ್ರ ಸರ್ಕಾರ ಜನರಿಗೆ ಮೂರೂ ತಿಂಗಳುಗಳ ಕಾಲ ಯಾವುದೇ ರೀತಿಯ ಸಾಲವನ್ನ ಕಟ್ಟುವ ವಶ್ಯಕತೆ ಇಲ್ಲ ಎಂದು ಹೇಳಿದ್ದು ಮತ್ತು ದೇಶದಲ್ಲಿ ಕರೋನ ಮಹಾಮಾರಿ ಹೆಚ್ಚಾದ ಹಿನ್ನೆಲೆಯಲ್ಲಿ ಇದನ್ನ ಇನ್ನಷ್ಟು ದಿನಗಳ ಕಾಲ ಮುಂದಕ್ಕೆ ಕೂಡ ಹಾಕಿತ್ತು. ಇನ್ನು ಈಗ ಕೇಂದ್ರ ಸರ್ಕಾರವು ದೇಶದ ಎಲ್ಲಾ ಜನರಿಗೆ ದೀಪಾವಳಿಯ ಬಂಪರ್ ಉಡುಗೊರೆಯನ್ನ ನೀಡಿದ್ದು ಜನರು ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಸಂಘಗಳಲ್ಲಿ ಮಾಡಿದ ಸಾಲದ ಮೇಲಿನ ಚಕ್ರ ಬಡ್ಡಿಯನ್ನ ಮನ್ನಾ ಮಾಡಲು ತೀರ್ಮಾನವನ್ನ ಮಾಡಿದೆ ಮತ್ತು ಇದಕ್ಕಾಗಿ 6 ಸಾವಿರ ಕೋಟಿ ರೂಪಾಯಿಯನ್ನ ಬಿಡುಗಡೆ ಮಾಡಿದೆ.

Make a loan

ಹಾಗಾದರೆ ಜನರು ಮಾಡಿದ ಯಾವ ಯಾವ ಸಾಲಗಳು ಮನ್ನಾ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ಸಾಲವನ್ನ ಮಾಡಿದ್ದರೆ ಈ ಸರ್ಕಾರ ಈ ಆಫರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ದೇಶದಲ್ಲಿ ಕರೋನ ಅನ್ನುವ ಮಹಾಮಾರಿಯಿಂದ ಜನರು ತೀವ್ರವಾದ ಸಂಕಷ್ಟಕ್ಕೆ ಒಳಗಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಬ್ಯಾಂಕುಗಳಲ್ಲಿ ಸಾಲವನ್ನ ಮಾಡಿದ ಎಲ್ಲಾ ಗ್ರಾಹಕರಿಗೆ ದಸರಾ ಮತ್ತು ದೀಪಾವಳಿ ಉಡುಗೊರೆಯನ್ನ ನೀಡಲು ಮುಂದಾಗಿದೆ ಎಂದು ಹೇಳಬಹುದು. ಹೌದು ಕೇಂದ್ರ ಸರ್ಕಾರವು ದೇಶದಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಿರುವ ಕಾರಣ ಕೆಲವು ತಿಂಗಳುಗಳ ತನಕ ಬ್ಯಾಂಕುಗಳಲ್ಲಿ ಮಾಡಿದ ಸಾಲವನ್ನ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳಿತ್ತು.

ಇನ್ನು ಜನರು ಇಲ್ಲಿಯತನಕ ಸಾಲವನ್ನ ಕಟ್ಟದ ಕಾರಣ ಬಡ್ಡಿಯ ಮೇಲೆ ಬಡ್ಡಿ ಬಿದ್ದು ಅದೂ ಚಕ್ರಬಡ್ಡಿಯಾಗಿ ಪರಿವರ್ತನೆ ಆಗಿದೆ, ಆದರೆ ಈಗ ಈ ಚಕ್ರ ಬಡ್ಡಿಯನ್ನ ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರ್ಧಾರವನ್ನ ಮಾಡಿದ್ದು ಅದಕ್ಕಾಗಿ 6 ಸಾವಿರ ಕೋಟಿ ರೂಪಾಯಿಯನ್ನ ಬಿಡುಗಡೆ ಮಾಡಿದೆ. ಇನ್ನು ಇದು ಕರೋನ ಸಮಯದಲ್ಲಿ ಹಣವನ್ನ ಸಂಪೂರ್ಣವಾಗಿ ಕಟ್ಟಿದವರಿಗೂ ಮತ್ತು ಭಾಗಶಃ ಕಟ್ಟಿದವರಿಗೆ ಅನ್ವಯ ಆಗಲಿದೆ. ಮಾರ್ಚ್ ತಿಂಗಳಿಂದ ಆಗಸ್ಟ್ ತಿಂಗಳ ವರೆಗೂ ಸಾಲದ ಚಕ್ರಬಡ್ಡಿಯನ್ನ ಕೇಂದ್ರ ಸರ್ಕಾರವೇ ಭರಿಸಲಿದ್ದು ಬ್ಯಾಂಕುಗಳು ಸಾಲಗಾರರ ಬಡ್ಡಿಯನ್ನ ಮನ್ನಾ ಮಾಡಿದ ನಂತರ ಕೇಂದ್ರ ಸರ್ಕಾರ ಆ ಹಣವನ್ನ ಆಯಾ ಬ್ಯಾಂಕಿನ ಖಾತೆಗೆ ಜಮಾ ಮಾಡಲಿದೆ.

ಇನ್ನು 2 ಕೋಟಿ ಒಳಗೆ ಸಾಲ ಮಾಡಿದ ಗ್ರಾಹಕರಿಗೆ ಮಾತ್ರ ಈ ಯೋಜನೆ ಅನ್ವಯ ಆಗಲಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲ, ಶಿಕ್ಷಣ ಸಾಲ, ಮನೆ ನಿರ್ಮಾಣಕ್ಕಾಗಿ ಸಾಲ, ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಮಾಡಿದ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಮೇಲಿನ ಸಾಲ, ಹೀಗೆ ಹಲವು ರೀತಿಯ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಆಗಲಿದೆ. ಸ್ನೇಹಿತರೆ ಕೇಂದ್ರ ಸರ್ಕಾರ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •