ಒಂದು ಕಾಲದಲ್ಲಿ ಹೆಣ್ಣು ಮಕ್ಕಳನ್ನು ಮನೆ ಒಳಗೆ ಇದ್ದು, ಅಡುಗೆ ಮಾಡಿಕೊಂಡು ಗಂಡ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಗಂಡಿಗಿಂತ ಹೆಣ್ಣು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವುದನ್ನು ಹೆಣ್ಣುಮಕ್ಕಳು ಸಾಬೀತು ಮಾಡುತ್ತಿದ್ದಾರೆ. ವ್ಯವಸಾಯದಿಂದ ಹಿಡಿದು ಆರ್ಮಿ, ವಿಜ್ಞಾನಿಗಳು ಆಗಿದ್ದಾರೆ ಹೆಣ್ಣುಮಕ್ಕಳು. ಇಂದು ನಾವು ನಿಮಗೆ ಕೃಷಿಕರಿಗೆ ಮಾದರಿಯಾಗಿರುವ ಮಾದೇವಕ್ಕನವರ ಕಥೆಯನ್ನು ಹೇಳುತ್ತೇವೆ ಕೇಳಿ.. ಈ ಕಥೆ ನಿಜಕ್ಕೂ ಸ್ಪೂರ್ತಿದಾಯಕ, ಒಮ್ಮೆ ಈ ಕಥೆ ಓದಿರಿ

ಹಾವೇರಿ ಜಿಲ್ಲೆಯ ಮಾದೇವಕ್ಕನವರದ್ದು ಕೃಷಿಯಲ್ಲಿ ಮಾದರಿ ಜೀವನ. ಅತಿವೃಷ್ಟಿ ಅನಾವೃಷ್ಟಿಯಿಂದ ಎಷ್ಟೋ ಜನ ಕೃಷಿಯನ್ನೇ ಬಿಡುತ್ತಿರುವಾಗ ಮಾದೇವಕ್ಕನವರು ಕೃಷಿಯಿಂದಲೇ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಇರುವ 5 ಎಕರೆ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಾ, ಪುರುಷರು ನಾಚುವ ಹಾಗೆ ಮಾಡಿದ್ದಾರೆ. ಹಾವೇರಿ ತಾಲ್ಲೂಕಿನ ಕೆರವಡಿ ಗ್ರಾಮದ ಈ ಮಾದೇವಕ್ಕ ಲಿಂಗದಹಳ್ಳಿ ಅವರದ್ದು ಪ್ರತಿದಿನ ಹೋರಾಟದ ಬದುಕು. ಇವರ ತಂದೆ ಬಸ್ಸಪ್ಪ ಲಿಂಗದಹಳ್ಳಿ ಅವರಿಗೆ ಮಾತು ಬರುವುದಿಲ್ಲ. ಅವರ ಐದು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು ಮಾದೇವಕ್ಕ. ಮಾದೇವಕ್ಕ ಮನೆಯ ಹಿರಿಯ ಸದಸ್ಯೆ. ಅವರ ಮನೆಯಲ್ಲಿ ಗಂಡು ಸಂತಾನ ಇಲ್ಲದ ಕಾರಣ 12 ವರ್ಷ ಇರುವಾಗಲೇ ಮನೆಯ ಜವಾಬ್ದಾರಿ ಮಾದೇವಕ್ಕನವರ ಮೇಲೆ ಬಿ’ತ್ತು.

ಚಿಕ್ಕ ವಯಸ್ಸಿಗೆ ತಂದೆಯ ಜೊತೆ ಹೆಗಲು ಕೊಟ್ಟು ದುಡಿಯಲು ಶುರು ಮಾಡಿದರು. ನಂತರ 36ಕ್ಕು ಹೆಚ್ಚು ವರ್ಷಗಳ ಕಾಲ ಅವಿವಾಹಿತೆಯಾಗಿ ಕೃಷಿಯಲ್ಲೇ ತೊಡಗಿದ್ದಾರೆ. ಗ್ರಾಮದ ರೈತರು ಮಳೆ ಇಲ್ಲದ ಕಾರಣ ಕಡಿಮೆ ಬೆಳೆ ಬೆಳೆದ ಸಮಯದಲ್ಲೂ ಸಹ ಮಾದೇವಕ್ಕನವರು ತಮ್ಮ 5 ಎಕರೆ 20 ಗುಂಟೆ ಜಮೀನಿನಲ್ಲಿ ಗೋವಿನ ಜೋಳ, ಸಿರಿಧಾನ್ಯಗಳನ್ನ ಬೆಳೆದರು. ಎಲ್ಲರಿಗಿಂತ ಹೆಚ್ಚಿನ ಇಳುವರಿ ಪಡೆದು, ಎಲ್ಲರೂ ತಮ್ಮ ಮೇಲೆ ಹುಬ್ಬೇರಿಸುವಂತೆ ಮಾಡಿದರು. ಮೂರು ಎಕರೆಗೆ ನೀರಾವರಿ ಸೌಲಭ್ಯ ಇದೆ, ಇನ್ನು ಎರಡು ಎಕರೆಯಲ್ಲಿ ಸಹೋದರಿ ಜೊತೆ ಕೃಷಿ ಮಾಡುತ್ತಾರೆ. ಇವರ ವಾರ್ಷಿಕ ಆದಾಯ 3 ಲಕ್ಷ.

ಮೊದಲು ಎತ್ತುಗಳನ್ನ ಬಳಸಿ ಕೃಷಿ ಮಾಡುತ್ತಿದ್ದ ಮಾದೇವಕ್ಕನವರು ಐದು ವರ್ಷದ ಹಿಂದೆ ಟ್ರ್ಯಾಕ್ಟರ್ ಖರೀದಿ ಮಾಡಿ, ಕೆಲವೇ ತಿಂಗಳುಗಳಲ್ಲಿ ಟ್ರ್ಯಾಕ್ಟರ್ ಚಾಲನೆ ಕಲಿತಿದ್ದಾರೆ. ವ್ಯವಸಾಯ ಮಾಡುವುದರ ಜೊತೆ ತಂಗಿಯರ ಇಬ್ಬರು ಮಕ್ಕಳನ್ನು ತಾವೇ ಸಾಕಿ ನೋಡಿಕೊಳ್ಳುತ್ತಿದ್ದಾರೆ. ಮಾದೇವಕ್ಕ ಅವರ ಈ ಪರಿಶ್ರಮಕ್ಕೆ, ಈ ಅದ್ಭುತ ಕೆಲಸಕ್ಕೆ ಒಂದು ಸಲಾಂ! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಇಂತಹ ಮತ್ತಷ್ಟು ಉಪಯುಕ್ತ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •