ನಮಸ್ತೆ ಸ್ನೇಹಿತರೆ, ರೈತನ‌ನ್ನು ದೇಶದ ಬೆನ್ನೆಲುಬು ಹಾಗು ಭೂಮಿ ತಾಯಿಯ ಚೊಚ್ಚಲ ಮಗ ಎಂದು ಕರೆಯುತ್ತಾರೆ.. ಇಡೀ ಪ್ರಪಂಚದ ಅಳಿವು ಉಳಿವು ನಿಂತಿರುವುದು ಈ ರೈತ ಮಾಡುವ ಕೃಷಿಯಿಂದ. ಅಷ್ಟೇ ಅಲ್ಲದೆ ಯಾವುದೇ ಕೆಲಸ ಮಾಡಿದರು ಸಿಗದಷ್ಟು ನೆಮ್ಮದಿಯ ಜೀವನ ಈ ವ್ಯವಸಾಯ ಮಾಡುವುದರಿಂದ ಸಿಗುತ್ತದೆ.. ಇನ್ನೂ ಈ ವ್ಯವಸಾಯದ‌ ಬಗ್ಗೆ ಅರಿವು ಮೂಡಿಸಿಕೊಂಡು, ಕೆಲವು ನಟಿಯರು ತಮ್ಮ ಜೀವನದಲ್ಲಿ ಸಂಪಾದನೆ ಮಾಡಿದ ಕಾರು ದೊಡ್ಡ ಮನೆಯನ್ನು ಬಿಟ್ಟು ರೈತರ ಹಾಗೆ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ.. ಅಷ್ಟಕ್ಕೂ ತಮ್ಮ ಐಷಾರಾಮಿ ಜೀವನವನ್ನು ಬಿಟ್ಟು ವ್ಯವಸಾಯ ಮಾಡುತ್ತಿರುವ ಈ ನಟಿಯರು ಯಾರು ಗೊತ್ತಾ? ನೋಡೋಣ ಬನ್ನಿ..

Luxury

ಹೌದು ಸ್ನೇಹಿತರೆ, ಇಡೀ ಪ್ರಪಂಚದಲ್ಲಿ ಎಲ್ಲಿಯೂ ಸಿಗದಂತಹ ನೆಮ್ಮದಿ‌ ಸುಖ ಜೀವನ ರೈತ ಮಾಡುವ ವ್ಯವಸಾಯದಲ್ಲಿ ಸಿಗುತ್ತದೆ, ಅಲ್ಲದೇ ವ್ಯವಸಾಯ ಮಾಡುವುದರಿಂದ ಮನುಷ್ಯನ ಆರೋಗ್ಯ ಕೂಡ ತುಂಬಾನೇ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ.. ಅದೇರೀತಿ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಯಾಮಿ ಗೌತಮಿ ಅವರು. ಹಿಮಾಚಲ ಪ್ರದೇಶದಲ್ಲಿ ಇರುವ ತಮ್ಮ ಊರಿನಲ್ಲಿ ತಮ್ಮಗಿರುವ‌ ಜಮೀನಿನಲ್ಲಿ ಆರ್ಗನಿಕ್ ಫಾರ್ಮಿಂಗ್ ಪದ್ದತಿಯಲ್ಲಿ ಬೇಸಾಯ ಮಾಡಲು ಮುಂದಾದರು. ಅದರ ಬಗ್ಗೆ ಕೆಲವೊಂದು ಮಾಹಿತಿಯನ್ನು ಸಂಗ್ರಹಣೆ ಮಾಡಿ ವ್ಯವಸ್ಥಿತವಾಗಿ ವ್ಯವಸಾಯ ಮಾಡಲು ಮುಂದಾದರು.. ಇನ್ನೂ ಒಂದು ಕಾಲದಲ್ಲಿ ಕನ್ನಡಿಗರ ಮನೆಮಾತಾಗಿದ್ದ ಜೂಹಿ ಚಾವ್ಲಾ ಇವರು ಕನ್ನಡ ಅಲ್ಲದೇ ಬಾಲಿವುಡ್ ಸಿನಿಮಾದಲ್ಲಿ ಹತ್ತಾರು ವರ್ಷಗಳ ಕಾಲ ಮಿಂಚಿದ ಈ ನಟಿ

Luxury

ಈಗ ರೈತರ ಹಾಗೆ ಕೃಷಿ ಮಾಡಲು ಮುಂದಾಗಿದ್ದ ಇವರು ಸ್ವಲ್ಪ ಜಮೀನನ್ನು ಖರೀದಿ ಮಾಡಿ ತಮ್ಮದೇ‌ ಆದ ಸ್ವಂತ ಭೂಮಿಯಲ್ಲಿ ವಿಭಿನ್ನ ರೀತಿಯ ಬೆಳೆಗಳನ್ನ ಬೆಳೆಯುತ್ತಿದ್ದು ಉತ್ಸಾಹದಿಂದ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.. ತಮ್ಮ ವಿಭಿನ್ನವಾದ ಅಭಿನಯದ ಮೂಲಕ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಸಂಪದ ಕುಲಕರ್ಣಿ‌ ವ್ಯವಸಾಯದಲ್ಲಿ ತಮ್ಮನ್ನು ತಾವು ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ.. ಅಲ್ಲದೇ ಈ ನಟಿ ತಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಇರುವ ಸ್ವಲ್ಪ ಮಟ್ಟದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಉಳಿದ ರೈತರಿಗೂ ಕೂಡ ಕೆಲಸವನ್ನು ನೀಡಿದ್ದಾರೆ.. ಇನ್ನೂ‌ ಕನ್ನಡ ಸಿನಿಮಾಗಳಲ್ಲಿ ಹೀರೋ ಮತ್ತು ವಿಲನ್ ಹಾಕಿ ನಟನೆ ಮಾಡಿದ ನಟ ಅರುಣ್ ಪಾಂಡಿಯನ್ ಅವರ ಮಗಳು ಕೀರ್ತಿ ಪಾಂಡಿಯನ್ ಉದಯೋನ್ಮುಖ ನಟಿಯಾಗಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ..

Luxury

ಅಲ್ಲದೆ ತನ್ನ ತಂದೆಗೆ ಜೊತೆಯಲ್ಲಿ ವ್ಯವಸಾಯ ಮಾಡುತ್ತಿರುವ ಕೀರ್ತಿ ಪಾಂಡಿಯನ್ ಅವರು ಜಮೀನನ್ನು ಉಳುಮೆ ಮಾಡುವುದರಿಂದ ಹಿಡಿದು, ಗದ್ದೆಯ ಕೇಸರಿನಲ್ಲಿ ನಾಟಿ ಮಾಡುವ ಕೆಲಸದವರೆಗೂ ಎಲ್ಲಾ ರೀತಿಯ ವ್ಯವಸಾಯದ ಕೆಲಸವನ್ನು ಕೂಡ ಮಾಡುತ್ತಿದ್ದಾರೆ, ಇನ್ನೂ ಕನ್ನಡದ ಕಿರುತೆರೆ ವಾಹಿನಿಯಲ್ಲಿ ಮಿಂಚಿ, ನಂತರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಹೆಚ್ಚು ಜನಪ್ರೀಯ ಪಡೆದ ನಟಿ‌ ಭೂಮಿ ಶೆಟ್ಟಿ ಕೋರೋನ ಸಮಯದಲ್ಲಿ ತನ್ನ ಊರಿಗೆ ಹೋಗಿ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಕಠಿಣ ಕೆಲಸಗಳಲ್ಲಿ ತೊಡಗಿಸಿಕೊಂಡ ಇವರು ತಮ್ಮ ಕುಟುಂಬ ಜೊತೆಗೆ ಕೃಷಿ ಕೆಲಸ ಮಾಡುತ್ತಿದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ವ್ಯವಸಾಯ ಎಂತಹ ವ್ಯಕ್ತಿಗಳನ್ನು ಕೂಡ ತನ್ನತ್ತ ಸೆಳೆಯುವಂತೆ ಮಾಡುತ್ತದೆ ಎಂದು.. ಹಾಗೆಯೇ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •