ಸ್ಯಾಂಡಲ್ ವುಡ್ ನ ಬಹುಮುಖ ಪ್ರತಿಭೆ ರಿಯಲ್ ಸ್ಟಾರ್ ಉಪೇಂದ್ರ ಅವರು. ಇವರೊಬ್ಬ ನಿರ್ದೇಶಕ, ನಟ, ಬರಹಗಾರ, ಸಾಹಿತಿ ಜೊತೆಗೆ ಗಾಯನ ಕೂಡ ಮಾಡುತ್ತಾರೆ. ಇವರ ಇನ್ನೊಂದು ವೃತ್ತಿ ರಾಜಕೀಯ. ರಾಜಕೀಯಕ್ಕೆ ಕಾಲಿಟ್ಟು ದೇಶದ ರಾಜ್ಯದ ವ್ಯವಸ್ಥೆಯನ್ನು ಬದಲಿಸುವ ಸಲುವಾಗಿ ಪ್ರಜಾಕಿಯ ಎಂಬ ಪಕ್ಷವನ್ನು ಸ್ಥಾಪಿಸಿ ಅದರ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ ಉಪೇಂದ್ರ. ಸಿನಿರಂಗದಲ್ಲಿ ಸಹ ನಟನೆ, ನಿರ್ದೇಶನ, ಸಂಭಾಷಣೆ, ಗೀತ ಸಾಹಿತ್ಯ ಎಲ್ಲದರಲ್ಲು ಕೆಲಸ ಮಾಡಿದ್ದಾರೆ. ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದಾಗ ಎಲ್ಲರೂ ಅವರು ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎಂದು ಮಾತುಗಳು ಕೇಳಿ ಬಂದಿದ್ದವು.

ಆದರೆ ಎಲ್ಲರಿಗೂ ಶಾ’ಕ್ ನೀಡಿದ ಉಪೇಂದ್ರ ಅವರು ತಮ್ಮದೇ ಆದ ಹೊಸ ಪಕ್ಷ ಶುರು ಮಾಡಿದರು. ಪ್ರಜಾಕೀಯದ ಮೂಲಕ ಉಪೇಂದ್ರ ಅವರು ಹೇಳ ಹೊರಟಿರುವ ವಿಚಾರಗಳು ಈಗಿನ ಸಮಾಜಕ್ಕೆ ಮತ್ತು ನಾಯಕರ ಕೆಲಸಕ್ಕೆ ವಿರುದ್ಧವಾಗಿ ಇರುವ ಕಾರಣ ಇವರ ಕಾನ್ಸೆಪ್ಟ್ ಅನ್ನು ಜನ ಒಪ್ಪಿಕೊಳ್ಳುವುದು ಕಷ್ಟವಾಯಿತು. ಕೆಲವೊಮ್ಮೆ ಇವರ ಪ್ರಜಾಕ್ಕೀಯ ಪಕ್ಷ ನಗೆಪಾಟಲಾಗಿತ್ತು. ಉಪೇಂದ್ರ ಅವರ ರಾಜಕೀಯ ವಿಷಯಗಳು ಏನೇ ಇದ್ದರೂ. ಅದನ್ನೆಲ್ಲ ಹೊರತು ಪಡಿಸಿದರೆ, ಅವರು ಒಬ್ಬ ಅತ್ಯುತ್ತಮವಾದ ವ್ಯಕ್ತಿ. ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ. ಕಳೆದ ವರ್ಷ ಲಾಕ್ ಡೌನ್ ಸಮಯದಿಂದಲೂ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಉಪೇಂದ್ರ ಅವರ ರೆಸಾರ್ಟ್ ಹೇಗಿದೆ ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

ಈಗಲೂ ಸಹ ಕಲಾವಿದರಿಂದ, ಜನರಿಂದ ಹಣ ಸಂಗ್ರಹಿಸಿ ಕಷ್ಟದಲ್ಲಿರುವ ಹಲವರಿಗೆ ಸಹಾಯ ಮಾಡುತ್ತಿದ್ದಾರೆ. ಪ್ರತಿದಿನ 3 ಸಾವಿರಕ್ಕು ಹೆಚ್ಚಿನ ಜನರಿಗೆ ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ. ಆಟೋ ಚಾಲಕರು, ಸಿನಿರಂಗದ ಕಲಾವಿದರು, ಸಂಗೀತ ಕ್ಷೇತ್ರದವರು, ಕಷ್ಟದಲ್ಲಿರುವ ಬಡವರು ಎಲ್ಲರಿಗೂ ಇವರ ಸಹಾಯ ಸಿಗುತ್ತಿದೆ. ಉಪೇಂದ್ರ ಅವರು ಕಳೆದ ವರ್ಷ ಲಾಕ್ ಡೌನ್ ನಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಮಾಡಿ, ಬಂದ ಬೆಳೆಯನ್ನು ಊರಿನ ಜನರಿಗೆ ಹಂಚಿದ್ದರು. ಉಪೇಂದ್ರ ಅವರ ತೋಟ, ತೋಟದ ಮನೆ ಬಹಳ ಅಚ್ಚುಕಟ್ಟಾಗಿ ಇದೆ. ಇವರ ಜಮೀನು, ಇವರ ಮನೆ, ತೋಟ ಇಲ್ಲವನ್ನು ಈ ವಿಡಿಯೋದಲ್ಲಿ ನೋಡಿ. ಇಲ್ಲಿ ಉಪೇಂದ್ರ ಅವರು ಕೃಷಿ ಮಾಡುತ್ತಿರುವುದನ್ನು ಸಹ ನೋಡಬಹುದು.

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •