ಕನ್ನಡ ಚಿತ್ರರಂಗದ ಬಹು ದೊಡ್ಡ ನಟರು ಹಾಗೂ ತುಂಬ ಒಳ್ಳೆಯ ಸಹೃದಯಿ ಆದಂತಹ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ. ಇದನ್ನು ನಮ್ಮ ಕನ್ನಡ ಜನತೆಗೆ ನಿಜವೆಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. ಈ ಈ ವಿಷಯ ಸುಳ್ಳಾಗಿ ತಪ್ಪು ಅವರು ಎದ್ದು ಬರಲಿ ಎಂದು ಇನ್ನೂ ನಾವೆಲ್ಲರೂ ಕಾಯುತ್ತಿದ್ದೇವೆ. ಒಂದು ಕಡೆ ಅಭಿಮಾನಿಗಳು ಆದರೆ ಇನ್ನೊಂದು ಕಡೆ ಶಿವಣ್ಣ ಹಾಗೂ ಕುಟುಂಬದವರು ಕೂಡಾ ಇದನ್ನು ನಂಬಲು ಸಾಧ್ಯವಾಗದೆ ಇರುವ ಪರಿಸ್ಥಿತಿ ಇದಾಗಿದೆ. ಅಪ್ಪು ಅವರು ಜಿಮ್ ನಲ್ಲಿ ವರ್ಕೌಟ್ ಮುಗಿಸಿ ತಮ್ಮ ಬಾಕ್ಸಿಂಗ್ ಕೂಡ ಮಾಡಿ ಮನೆಗೆ ತೆರಳಿದ ನಂತರ ಕೆಲವು ಸಮಸ್ಯೆಯಿಂದ ವೈದ್ಯರ ಬಳಿ ತೆರಳಿದ್ದರು, ನಂತರ ಇಷ್ಟೊಂದು ಘಟನೆ ನಡೆದಿದೆ.

ಕನ್ನಡಿಗರ ಕಣ್ಮಣಿ 'ಅಪ್ಪು', 'ರಾಜಕುಮಾರ' ಪುನೀತ್ ಇನ್ನಿಲ್ಲ; ತೀವ್ರ ಹೃದಯಾಘಾತದಿಂದ ವಿಧಿವಶ- Kannada Prabha

ಅಪ್ಪು ಅವರು ನಿಜ ಜೀವನದಲ್ಲಿ ಎಷ್ಟೊಂದು ಸಹಾಯ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಪುನೀತ್ ಅವರು ಹಲವಾರು ಶಾಲೆಗಳನ್ನು ಉಚಿತವಾಗಿ ಕಟ್ಟಿಸಿದ್ದಾರೆ. ಹಲವಾರು ವೃದ್ಧರ ಜೀವನವನ್ನ ನೋಡಿಕೊಳ್ಳುತ್ತಿದ್ದಾರೆ. ಅನೇಕ ಮಕ್ಕಳ ಶಿಕ್ಷಣ ಕೊಡಿಸಿದ್ದಾರೆ. ಅವರು ತಾವು ಈ ಲೋಕವನ್ನು ತ್ಯಜಿಸಿದ ನಂತರವೂ ಸಹ ತಮ್ಮ ಕಣ್ಣುಗಳನ್ನು ತಮ್ಮ ಅಪ್ಪಾಜಿ ಡಾ.ರಾಜ್ ಕುಮಾರ್ ಅವರಂತೆ ದಾನ ಮಾಡಿ ತಮ್ಮ ಸಾರ್ಥಕತೆಯನ್ನು ಮೆರೆದಿದ್ದಾರೆ. ಈಗ ಅವರ ಕಣ್ಣುಗಳನ್ನು ಬೇರೆಯವರಿಗೆ ಹಾಕಲಾಗಿದೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಈಗಾಗಲೇ ಇಬ್ಬರಿಗೆ ಇವರ ಕಣ್ಣುಗಳನ್ನು ಕೊಟ್ಟು ಅವರು ಇಡೀ ಪ್ರಪಂಚವನ್ನೇ ನೋಡುವಂತೆ ಆಗಿದೆ.

Puneeth Rajkumar : ತಂದೆಯ ಅಂತಿಮ ದರ್ಶನ ಪಡೆದ ಪುನೀತ್‌ ರಾಜ್‌ ಕುಮಾರ್ ಪುತ್ರಿ ಧೃತಿ - ಸಿನಿಮಾ

ಅಪ್ಪು ಅವರನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಅವರನ್ನ ನಿಜ ಜೀವನದಲ್ಲಿ ನೋಡಲು ಸಾಧ್ಯವಿಲ್ಲ. ಅವರನ್ನ ನಾವು ಇನ್ನು ಮುಂದೆ ಸಿನಿಮಾಗಳಲ್ಲಿ, ಫೋಟೋಗಳಲ್ಲಿ ಮಾತ್ರವೇ ನೋಡಲು ಸಾಧ್ಯ. ಆದರೆ ಅವರ ಕಣ್ಣುಗಳನ್ನು ನಾವು ನೋಡಬಹುದು. ಇವರ ಕಣ್ಣುಗಳನ್ನು ಎರಡು ವ್ಯಕ್ತಿಗಳಿಗೆ ಅಳವಡಿಸಲಾಗಿದೆ. ಅವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಎಲ್ಲರೂ ಕೂಡ ಪುನೀತ್ ಅವರ ಕಣ್ಣುಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆ ವ್ಯಕ್ತಿಗಳು ಯಾರು ಎಂದು ನವೆಂಬರ್ ಎರಡನೇ ತಾರೀಕಿನಂದು ಜನರಿಗೆ ತಿಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

1985ರಲ್ಲಿ ಪುನೀತ್​​ ಹೆಸರು ಬದಲಾಯಿಸಿದ್ದಾಗ ನೀಡಿದ್ದ ಜಾಹೀರಾತು ವೈರಲ್​ | Puneeth Rajkumar Name Change Advisement Goes viral In social Media | TV9 Kannada

ಈ ಸುದ್ದಿಯನ್ನ ಕೇಳಿದ ಅವರ ಅಭಿಮಾನಿಗಳು, ಎಲ್ಲಾ ಕನ್ನಡಿಗರು ಕೂಡ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ನಾವು ಇಂದು ಪುನೀತ್ ಅವರನ್ನ ನೋಡಲು ಸಾಧ್ಯವಾಗದಿದ್ದರೂ ಅವರ ಕಣ್ಣುಗಳನ್ನಾದರೂ ನೋಡಬಹುದಾಗಿದೆ. ಅವರ ಕಣ್ಣುಗಳನ್ನ ಪಡೆದ ಆ ಎರಡು ವ್ಯಕ್ತಿಗಳು ತುಂಬಾ ಪುಣ್ಯವಂತರು ಎಂದು ಹೇಳಬಹುದು. ಆ ಪುಣ್ಯವಂತರು ಯಾರು ಎಂದು ನಾವು ನವೆಂಬರ್ 2 ರಂದು ನೋಡಬೇಕಾಗಿದೆ. ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಕೂಡ ಮಾರ್ಚ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರವನ್ನ ನೋಡಲು ಕೂಡ ಎಲ್ಲರೂ ಕಾಯುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!