ಮನೆಗೆ ಅದೃಷ್ಟ ತರುವ ಹುಡುಗಿಯರಲ್ಲಿ ಈ ಚಿಹ್ನೆ ಇರುತ್ತೆ,ನೋಡಿ..

Home Kannada News/ಸುದ್ದಿಗಳು

ಸ್ತ್ರೀಯರಲ್ಲಿ ಇರುವ ಚಿಹ್ನೆಗಳ ಮೇಲೆ ಅದೃಷ್ಟವಂತರೆಂದು ಹೇಳಲಾಗುತ್ತದೆ. ಭವಿಷ್ಯ ನಿರ್ಧರಿಸಲು ಹಲವು ಶಾಸ್ತ್ರಗಳಿರುತ್ತವೆ ಅದರಲ್ಲಿ ಸಾಮುದ್ರಿಕ ಶಾಸ್ತ್ರ ಪ್ರಮುಖವಾಗಿದೆ ಈ ಶಾಸ್ತ್ರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾದ ಸಾಮುದ್ರಿಕ ಶಾಸ್ತ್ರದ ಪ್ರಕಾರ ಮನುಷ್ಯನ ಶರೀರದ ಮೇಲಿರುವ ಚಿಹ್ನೆ ಅಥವಾ ಮಚ್ಚೆ ಮನುಷ್ಯನ ಗುಣ ಸ್ವಭಾವ ಮತ್ತು ಅದೃಷ್ಟ ಹಾಗೂ ಇತರೆ ವಿಚಾರಗಳನ್ನು ತಿಳಿಸುತ್ತದೆ. ಈ ಚಿಹ್ನೆ ಅಥವಾ ಮಚ್ಚೆ ನೀಡುವ ಸಂಕೇತ ಪುರುಷ ಮತ್ತು ಸ್ತ್ರೀಯರಿಗೆ ಬೇರೆ ಬೇರೆಯಾಗಿರುತ್ತದೆ. ಸ್ತ್ರೀಯರಿಗೆ ಕೆಲವು ಚಿಹ್ನೆ ಮತ್ತು ಮಚ್ಚೆ ಇದ್ದರೆ ಅವರು ಭಾಗ್ಯಶಾಲಿ, ಅದೃಷ್ಟವಂತರು ಎನ್ನುತ್ತಾರೆ. ಸ್ತ್ರೀ ಲಕ್ಷ್ಮಿ ರೂಪ ಮನೆಗೆ ಮಂಗಳವನ್ನುಂಟು ಮಾಡುವವಳು ಪುರಾಣ ಕಾಲದಿಂದಲೂ ಹೆಣ್ಣಿಗೆ ವಿಶೇಷ ಸ್ಥಾನ ಮಾನವಿದೆ ಅದರಲ್ಲೂ ರೂಪ, ಲಕ್ಷಣ, ಮಚ್ಚೆ, ಕೆಲವು ಚಿಹ್ನೆಯನ್ನು ಗಮನಿಸಿ ಹುಡುಗಿ ಭಾಗ್ಯಶಾಲಿ, ಅದೃಷ್ಟವಂತಳು ಎನ್ನುತ್ತಾರೆ.

ಇಂತಹ ಹುಡುಗಿಯರು ಹುಟ್ಟಿದ ಮನೆಗೆ ಅದೃಷ್ಟ ತಂದರೆ ಮದುವೆಯ ನಂತರ ಗಂಡನ ಮನೆಗೆ ಕೀರ್ತಿ ತರುತ್ತಾರೆ. ಹೆಣ್ಣುಮಕ್ಕಳು ಕೆಲವು ಚಿಹ್ನೆಗಳನ್ನು ಹೊಂದಿದ್ದರೆ ಅವರು ಅದೃಷ್ಟವಂತರು ಎನ್ನುತ್ತಾರೆ ಪತಿಯ ಸಂತೋಷ ಸುಖಗಳಿಗೆ ಹೆಚ್ಚು ಗಮನ ಕೊಡುವುದಲ್ಲದೆ ಮನೆಯವರ ನೆಮ್ಮದಿ, ಖುಷಿಯ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಹೇಳುತ್ತದೆ ಸಾಮುದ್ರಿಕ ಶಾಸ್ತ್ರ. ಮೂಗಿನ ಮೇಲೆ ಅಥವಾ ಸುತ್ತ ಮುತ್ತ ಮಚ್ಚೆ ಇದ್ದರೆ ಭಾಗ್ಯದ ಸಂಕೇತ ಇವರು ಎಲ್ಲ ಸುಖಗಳನ್ನು ಪಡೆಯುತ್ತಾರೆ ಧನ ಸಂಪತ್ತಿನ ಸಂಕೇತವಾಗಿದೆ ಅವರು ಹುಟ್ಟಿದ ಮನೆಗೆ ಮತ್ತು ಗಂಡನ ಮನೆಗೆ ಕೀರ್ತಿ ತರುತ್ತಾರೆ. ಅಂಗಾಲಿನ ಮೇಲೆ ಚಕ್ರ ಅಥವಾ ಶಂಖದ ಚಿಹ್ನೆ ಇದ್ದರೆ ಅವರು ಭಾಗ್ಯಶಾಲಿಗಳಾಗಿರುತ್ತಾರೆ ಕುಟುಂಬಕ್ಕೂ ಕೀರ್ತಿ ತರುತ್ತಾರೆ. ಹಣೆಯ ಮೇಲಿನ ಮಚ್ಚೆ ಇವರು ಸೌಭಾಗ್ಯಶಾಲಿಗಳಾಗಿರುತ್ತಾರೆ ಇವರನ್ನು ವಿವಾಹವಾಗುವವರು ಜೀವನಪೂರ್ತಿ ಸಂತೋಷವಾಗಿರುತ್ತಾರೆ.

ಅಂಗಾಲಿನ ಮೇಲೆ ತ್ರಿಕೋನ ಚಿಹ್ನೆ ಇದ್ದರೆ ಅವರು ಹೆಚ್ಚು ಬುದ್ಧಿವಂತರು ಆಗಿರುತ್ತಾರೆ ಅಲ್ಲದೆ ಗ್ರಹಿಸುವ ಶಕ್ತಿ ಹೆಚ್ಚಿರುತ್ತದೆ. ಇವರು ಕುಟುಂಬದ ಬಗ್ಗೆ ಕಾಳಜಿ ವಹಿಸುವುದಲ್ಲದೆ ಕಷ್ಟದ ಸಮಯದಲ್ಲಿ ಮನೆಯವರ ಪರವಾಗಿ ನಿಲ್ಲುತ್ತಾರೆ. ಕಷ್ಟದಿಂದ ಹೊರಬರುವ ಚಾಣಾಕ್ಷ ಇವರಿಗಿರುತ್ತದೆ ಬುದ್ದಿವಂತಿಕೆ ಹಾಗೂ ಧೈರ್ಯ ಇವರ ಅದೃಷ್ಟದೊಂದಿಗೆ ಇರುತ್ತದೆ. ಕೆನ್ನೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಅವರು ರುಚಿಪ್ರಿಯರಾಗಿರುತ್ತಾರೆ ಎಲ್ಲ ಬಗೆಯ ರುಚಿಯಾದ ಅಡುಗೆ ಮಾಡಿ ಕುಟುಂಬದವರ ಮನಸನ್ನು ಗೆಲ್ಲುವುದರ ಜೊತೆಗೆ ಅದೃಷ್ಟವಂತರಾಗಿರುತ್ತಾರೆ.

ಹುಬ್ಬುಗಳ ಮಧ್ಯೆ ಮಚ್ಚೆಯಿದ್ದರೆ ಅವರು ಸೌಭಾಗ್ಯಶಾಲಿಗಳು ಮತ್ತು ಬುದ್ಧಿವಂತರಾಗಿರುತ್ತಾರೆ. ತಲೆಯಲ್ಲಿ ಮಚ್ಚೆ ಇದ್ದವರು ಇತರರಿಗೆ ಮಾದರಿಯಾಗಿರುತ್ತಾರೆ ಮತ್ತು ಅದೃಷ್ಟವಂತರಾಗಿರುತ್ತಾರೆ. ಕಿವಿಯಲ್ಲಿ ಮಚ್ಚೆ ಹೊಂದಿದ್ದರೆ ಹೆಚ್ಚು ಅದೃಷ್ಟವಂತರಾಗಿರುತ್ತಾರೆ, ಬುದ್ಧಿವಂತರು ಬೇಗ ನಿರ್ಧಾರ ತೆಗೆದುಕೊಳ್ಳುವ ಸ್ವಭಾವದವರಾಗಿರುತ್ತಾರೆ. ಎಡಕಿವಿಯ ಮೇಲಿನ ಮಚ್ಚೆ ಉತ್ತಮ ವೈ-ವಾಹಿಕ ಜೀವನದ ಸಂಕೇತವಾಗಿರುತ್ತದೆ. ಮನುಷ್ಯನ ದೇಹದ ಮೇಲಿನ ಚಿಹ್ನೆಗಳ ಮೂಲಕ ಅವರ ಭವಿಷ್ಯ ತಿಳಿಯಲಾಗುತ್ತದೆ ಇದನ್ನೇ ಸಾಮುದ್ರಿಕ ಶಾಸ್ತ್ರ ಎನ್ನುವರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...