ಜಲಾನ್, ನ.10- ಭಗ್ನ ಪ್ರೇಮಿಯೊಬ್ಬ ಮದುವೆಯಾಗಲು ನಿರಾಕರಿಸಿದ ಮಹಿಳೆಯ ಮೂಗು ಕೊಯ್ದು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಜಲಾನ್ ಜಿಲ್ಲೆಯಲ್ಲಿ ವರದಿಯಾಗಿದೆ.  ಐದು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಪತಿಯನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಒಂಟಿಯಾಗಿದ್ದ ಮಹಿಳೆಯ ಬೆನ್ನು ಬಿದ್ದಿದ್ದ ಭಗ್ನ ಪ್ರೇಮಿಯೊಬ್ಬ ವಿವಾಹವಾಗುವಂತೆ ಒತ್ತಡ ತರುತ್ತಿದ್ದ.

Lever-like

ಆದರೆ ಆತನ ಯಾವುದೇ ಒತ್ತಡಕ್ಕೆ ಮಹಿಳೆ ಮಣಿಯದಿದ್ದರಿಂದ ಕುಪಿತಗೊಂಡ ಭಗ್ನ ಪ್ರೇಮಿ ಇಂದು ಮುಂಜಾನೆ ಆಕೆಯ ಮೂಗು ಕೊಯ್ದು ಪರಾರಿಯಾಗಿದ್ದಾನೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಗ್ನ ಪ್ರೇಮಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ವರಾಹಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಸುಧಾಕರ್ ಮಿಶ್ರಾ ತಿಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •