ಉತ್ತರಾಖಂಡದ ಅಲ್ಮೋರ  ಜಿಲ್ಲೆಯ ನಿವಾಸಿ ಧನ್ ಸಿಂಗ್ ದೆಹಲಿ ಮೆಟ್ರೊದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್‌ನಿಂದ ಲಾಕ್‌ ಡೌನ್ ಆದ ಸಮಯದಲ್ಲಿ ಅವರು  ತಮ್ಮ ಕೆಲಸವನ್ನು ಕಳೆದುಕೊಂಡರು.

ಆ ನಂತರ, ಧನ್ ಸಿಂಗ್ ಅನೇಕ ಸ್ಥಳಗಳಲ್ಲಿ ಕೆಲಸ ಹುಡುಕಿದರು. ಆದರೆ ಅವರಿಗೆ ಎಲ್ಲಿಯೂ ಅವಕಾಶ ಸಿಗಲಿಲ್ಲ. ಏತನ್ಮಧ್ಯೆ, ಅವರು ತಮ್ಮ ಹಳ್ಳಿಯ ಬೆಟ್ಟದ ಮೇಲಿರುವ ಎಲೆಯಿಂದ ಗಿಡಮೂಲಿಕೆ ಚಹಾವನ್ನು ತಯಾರಿಸಲು ಪ್ರಾರಂಭಿಸಿದರು.

ಕ್ರಮೇಣ ಈ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಯಿತು.  ಇಂದು ಧನ್ ಸಿಂಗ್ ಗಿಡಮೂಲಿಕೆ ಚಹಾವನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.  ಹೇಗೆ ಅಂತೀರಾ?, ಮುಂದೆ ಓದಿ…

ಭಾರತದಲ್ಲಿ ಕೊರೊನಾ ಹರಡುವ ಸ್ವಲ್ಪ ಸಮಯದ ಮೊದಲು ಧನ್ ಸಿಂಗ್ ಗ್ರಾಮಕ್ಕೆ ಬಂದರು. ಆ ನಂತರ ಲಾಕ್ ಡೌನ್ ಆಯಿತು. ಅವರು ಹೊರಗೆ ಹೋಗಲು ಸಾಧ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ಕೊರೊನಾದಿಂದ ತಪ್ಪಿಸಿಕೊಳ್ಳಲು ದೇಶದೆಲ್ಲೆಡೆ ಜನರಿಗೆ ರೋಗನಿರೋಧಕ ವರ್ಧಕಗಳನ್ನು ಉಪಯೋಗಿಸುವಂತೆ ಸಲಹೆ ನೀಡಲಾಗುತ್ತಿತ್ತು. ಆಗ ಕಷಾಯ ಮತ್ತು ಗಿಡಮೂಲಿಕೆ ಚಹಾಗಳಿಗೆ ಬೇಡಿಕೆ ಹೆಚ್ಚಿತು.

ಆಗ ಧನ್ ಸಿಂಗ್ ಅವರ ಗಮನವು ಪರ್ವತದ ಮೇಲೆ ಬೆಳೆಯುತ್ತಿರುವ ವಿಶೇಷ ಜಾತಿಯ ಎಲೆಗಳ ಕಡೆಗೆ ಹೋಯಿತು. ಜನರು ಶೀತ, ಜ್ವರ ಬಂದ ಸಂದರ್ಭದಲ್ಲಿ ಈ ಎಲೆಯನ್ನು ಮನೆಮದ್ದಾಗಿ ಬಳಸುತ್ತಿದ್ದರು.

ಧನ್ ಸಿಂಗ್ ಈ ಎಲೆಯಿಂದ ಚಹಾ ತಯಾರಿಸಿದರು. ಶೀತ ಮತ್ತು ಜ್ವರದಿಂದ ಬಳಲುತ್ತಿರುವ ಜನರಿಗೆ ಈ ಗಿಡಮೂಲಿಕೆ ನೀಡಿದರು. ಇದರ ಉತ್ತಮ ಫಲಿತಾಂಶ ಅಲ್ಪಾವಧಿಯಲ್ಲಿಯೇ ಗೊತ್ತಾಗುತ್ತಿತ್ತು.

ಎರಡು ಬಾರಿ ಪ್ರಯೋಗ ಮಾಡಿದ ನಂತರ ಈ ಗಿಡಮೂಲಿಕೆ ಎಲೆಯಿಂದ ಚಹಾ ತಯಾರಿಸಲು ಧನ್ ಸಿಂಗ್ ಸರಿಯಾದ ಮಾರ್ಗವನ್ನು ಕಂಡುಕೊಂಡರು. ಇದರ ನಂತರ, ಅವರು ಈ ಮಾಹಿತಿಯನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡರು.

ಇದಕ್ಕಾಗಿ ಧನ್ ಸಿಂಗ್ ಅವರ ಸ್ನೇಹಿತರು ತಕ್ಷಣ ಆರ್ಡರ್’ಗಳನ್ನು ನೀಡಿದರು. ಆರ್ಡರ್ ಪಡೆದ ನಂತರ, ಧನ್ ಸಿಂಗ್ ಅವರ ಮನೋಸ್ಥೈರ್ಯ ಹೆಚ್ಚಾಯಿತು. ಅವರು ಚಹಾವನ್ನು ದೊಡ್ಡ ಮಟ್ಟದಲ್ಲಿ ತಯಾರಿಸಲು ಪ್ರಾರಂಭಿಸಿದರು.

ಇದರ ನಂತರ ಅವರು ಈ ಚಹಾದ ಮಾಹಿತಿಯನ್ನು ಫೇಸ್‌ ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ತಮ್ಮ ಉತ್ಪನ್ನದ ಬಗ್ಗೆ ಜನರಿಗೆ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ  ಜನರ ಆರ್ಡರ್ ಕೊಡಲು ಪ್ರಾರಂಭಿಸಿದರು. ಕೆಲವು ದಿನಗಳ ನಂತರ, ಧನ್ ಸಿಂಗ್ ಅವರು ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •